Tuesday, September 22, 2020
Tuesday, September 22, 2020

Latest Posts

ಮಹಾಮಳೆಗೆ ಉಡುಪಿ ಜಿಲ್ಲೆಯಲ್ಲಿ 290 ಕೋಟಿ ರೂ.ನಷ್ಟ: ಈಗ ಸಿಕ್ಕಿರುವುದು ಪ್ರಾಥಮಿಕ ವರದಿಯಷ್ಟೆ

ಉಡುಪಿ: ಜಿಲ್ಲೆಯಲ್ಲಿ ಎರಡು ದಿನಗಳ ಹಿಂದೆ ಸುರಿದ ಮಹಾಮಳೆಗೆ ಭಾರೀ ಹಾನಿ ಸಂಭವಿಸಿದ್ದು, ಬರೋಬ್ಬರಿ 290 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ...

ಕೇಂದ್ರ ಸಚಿವೆ ಇರಾನಿ ಗಮನಸೆಳೆದ ‘ಮಟ್ಟು’ ಗ್ರಾಮದಲ್ಲಿನ ಇತರ ಸಂತ್ರಸ್ತರಿಗೂ ಬೇಕಿದೆ ಶೀಘ್ರ ಸ್ಪಂದನೆ!

ಉಡುಪಿ: ಜಿಲ್ಲೆಯ ಕೋಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಟ್ಟು ಗ್ರಾಮದಲ್ಲಿ ನೇಕಾರಿಕೆ ಮಾಡುತ್ತಿದ್ದ ಲಕ್ಷ್ಮಣ ಶೆಟ್ಟಿಗಾರ್ ಅವರಿಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಸಹಾಯ ಮಾಡಿದ್ದು, ನೆರೆ ನೀರು ತುಂಬಿದ 24 ತಾಸುಗಳಲ್ಲಿ...

ಸರಕಾರದ ಯೋಜನೆ ಅರ್ಹ ಸಫಾಯಿ ಕರ್ಮಚಾರಿಗಳಿಗೆ ಸಿಗಲಿ: ಜಿಲ್ಲಾಧಿಕಾರಿ ಜಗದೀಶ್

ಮಣಿಪಾಲ: ಸಫಾಯಿ ಕರ್ಮಚಾರಿಗಳ ಕಲ್ಯಾಣ ಅಭಿವೃದ್ಧಿಗೆ ಸರಕಾರ ರೂಪಿಸಿರುವ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕಾರ್ಯ ಆಗಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ. ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ...

ಕುಶಾಲನಗರ ಕಂಪ್ಯೂಟರ್ ಸೆಂಟರ್ ಸರ್ವರ್ ಹ್ಯಾಕ್ ಮಾಡಿದ ಖದೀಮರು ಹಣಕ್ಕಾಗಿ ಬೇಡಿಕೆ: ಸೈಬರ್ ಕ್ರೈಂ ವಿಭಾಗದಲ್ಲಿ ದೂರು ದಾಖಲು

sharing is caring...!

ಕೊಡಗು: ಕಂಪ್ಯೂಟರ್ ತರಬೇತಿ ಮತ್ತು ಸಾಫ್ಟ್‍ವೇರ್ ಪೂರೈಕೆದಾರ ಸಂಸ್ಥೆಯೊಂದರ ಕಂಪ್ಯೂಟರ್ ಸರ್ವರ್ ಅನ್ನು ಹ್ಯಾಕರ್ ಗಳು ಹ್ಯಾಕ್ ಮಾಡುವ ಮೂಲಕ ಹಣಕ್ಕಾಗಿ ಬೇಡಿಕೆ ಇಟ್ಟ ಪ್ರಕರಣ ಕೊಡಗು ಜಿಲ್ಲಾ ಸೈಬರ್ ಕ್ರೈಂ ವಿಭಾಗದಲ್ಲಿ ದಾಖಲಾಗಿದೆ.

ಮೂಲತಃ ಕುಶಾಲನಗರ ನಿವಾಸಿ ಕೊಡಗು ಜಿಲ್ಲಾ ಐಟಿ ಅಸೋಷಿಯೇಷನ್ ಅಧ್ಯಕ್ಷ ಕೆ.ಪಿ.ಚಂದ್ರಶೇಖರ್ ಎಂಬವರು ನಡೆಸುತ್ತಿರುವ ಕಂಪ್ಯೂಟರ್ ಸಂಸ್ಥೆಯ ದಾಖಲೆಗಳನ್ನು ವೈರಸ್ ದಾಳಿ ನಡೆಸುವ ಮೂಲಕ ಹ್ಯಾಕರ್ ಗಳು ಹ್ಯಾಕ್ ಮಾಡಿದ್ದು, ಭಾರತೀಯ ಕರೆನ್ಸಿಯ 80 ಸಾವಿರ ರೂ. ಹಣ ನೀಡಿದರೆ ಎಲ್ಲಾ ದಾಖಲೆಗಳನ್ನು ಯಥಾ ಸ್ಥಿತಿಯಲ್ಲಿ ಮತ್ತೆ ಮರಳಿಸುವುದಾಗಿ ಹ್ಯಾಕರ್‍ಗಳು ಹೇಳಿಕೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕೆ.ಪಿ. ಚಂದ್ರಶೇಖರ್ ಅವರು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕೆ.ಪಿ. ಚಂದ್ರಶೇಖರ್ ಅವರು ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಕಂಪ್ಯೂಟರ್ ಎಜುಕೇಷನ್, ಸನ್ ಮೈಕ್ರೋಟೆಕ್
ಕಂಪ್ಯೂಟರ್ ಸರ್ವಿಸಸ್, ಸನ್ ಮೈಕ್ರೋಟೆಕ್ ಐಟಿ ಸಲ್ಯೂಶನ್ ಹಾಗೂ ಮೈಕ್ರೋಟೆಕ್ ಇನ್ಫರ್ಮೇಶನ್ ಟೆಕ್ನಾಲಜಿಸ್ ಎಂಬ ಸಂಸ್ಥೆಗಳನ್ನು ನಡೆಸುತ್ತಿದಾರೆ.

ಮಾತ್ರವಲ್ಲದೇ ರಾಜ್ಯದ ವಿವಿಧ ಶಾಲಾ ಕಾಲೇಜುಗಳಿಗೂ ಕಂಪ್ಯೂಟರ್ ಎಜುಕೇಶನ್‍ಗೆ ಸಂಬಂಧಿಸಿದಂತೆ ವ್ಯವಹಾರಗಳನ್ನು ಹೊಂದಿದ್ದಾರೆ. ಕಳೆದ 5 ದಿನದ ಹಿಂದೆ ಕೆ.ಪಿ.ಚಂದ್ರಶೇಖರ್ ಅವರ ಒಡೆತನದ ಸಂಸ್ಥೆಯ ಸರ್ವರ್‍ನಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಸರ್ವರ್‍ನಲ್ಲಿದ್ದ ಎಲ್ಲಾ ಡೇಟಾ(ದಾಖಲೆಗಳು)ಗಳು ಹಾನಿಗೀಡಾಗಿದ್ದವು.

ಬಳಿಕ ಪರಿಶೀಲನೆ ನಡೆಸಿದಾಗ “ರ್ಯಾಮ್‍ಸಮ್‍ವೇರ್ ಡಾಟ್ ಓಜಿಡಿಓ” ಎಂಬ ವೈರಸ್ ದಾಳಿ ಮಾಡಿರುವುದು ಕಂಡು ಬಂದಿದೆ.
ಅಷ್ಟು ಮಾತ್ರವಲ್ಲದ ಮತ್ತೊಂದು ಫೋಲ್ಡರ್‍ನಲ್ಲಿ ಒಂದು ಪತ್ರವೂ ಕಂಡು ಬಂದಿತ್ತು. ಆ ಪತ್ರವನ್ನು ತೆರೆದ ಸಂದರ್ಭ ‘ನಿಮ್ಮ ಡೇಟಾವನ್ನು ಮತ್ತೆ ಮರಳಿ (ರಿಟ್ರೇವ್) ಪಡೆಯಬಹುದು. ಆ ಕೆಲಸಕ್ಕೆ ನೀವು 980 ಡಾಲರ್ ನೀಡಿ ನಮ್ಮ ಈ-ಮೇಲ್ ವಿಳಾಸದಲ್ಲಿ ವ್ಯವಹರಿಸಬೇಕು’ಎಂಬ ಸಂದೇಶವನ್ನೂ ನೀಡಲಾಗಿದೆ. ಇದರಿಂದ ಅಸಹಾಯಕರಾದ ಕೆ.ಪಿ. ಚಂದ್ರಶೇಖರ್ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ತಮಗೆ ಈ-ಮೇಲ್ ಮಾಡಿದವರಿಂದಲೇ ಇಂತಹ ಕೃತ್ಯ ನಡೆದಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ
ಉಲ್ಲೇಖಿಸಿದ್ದಾರೆ.

ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಕೆ.ಪಿ. ಚಂದ್ರಶೇಖರ್ ತಮ್ಮ ಸಂಸ್ಥೆಯ ಎಲ್ಲಾ ದಾಖಲೆಗಳು ಅತ್ಯಂತ ಸುರಕ್ಷಿತವಾಗಿದ್ದರೂ ಕೂಡ ಹ್ಯಾಕರ್‍ಗಳು ವೈರಸ್ ಮೂಲಕ ಸರ್ವರ್ ಅನ್ನು ಹ್ಯಾಕ್ ಮಾಡಿದ್ದಾರೆ. ಅವರು ಹೇಳಿದಂತೆ ಹಣ ನೀಡಿದರೂ ಮತ್ತೆ
ಮರಳಿ ಡೇಟಾಗಳು ಲಭಿಸುವ ಸಾಧ್ಯತೆ ತೀರಾ ಕಡಿಮೆ ಇದೆ ಎಂದು ಅಳಲು ತೋಡಿಕೊಂಡರು.

ಆದಾಯ ತೆರಿಗೆ, ಟ್ಯಾಲಿ ಸೇಲ್ಸ್ ಮತ್ತು ಖರೀದಿ, ಟ್ಯಾಕ್ಸ್ ವಿವರ, ಈ-ಮೇಲ್ ವ್ಯವಹಾರಗಳ ದಾಖಲಾತಿಗಳು ಹ್ಯಾಕ್ ಆಗಿರುವ ಹಿನ್ನಲೆಯಲ್ಲಿ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದರು. ಸಾರ್ವಜನಿಕರು ತಮ್ಮ ಕಂಪ್ಯೂಟರ್‍ನಲ್ಲಿ ಅಮೂಲ್ಯ ದಾಖಲಾತಿಗಳನ್ನು ಶೇಖರಿಸಿಡುವ ಮುನ್ನ ಎಲ್ಲಾ ರೀತಿಯ ಎಚ್ಚರಿಕೆ ವಹಿಸಬೇಕು ಎಂದು ಚಂದ್ರಶೇಖರ್ ಹೇಳಿದರು.

ವಿದೇಶಗಳಲ್ಲಿ ಕುಳಿತು ಹ್ಯಾಕ್ ಮಾಡುವ ಹ್ಯಾಕರ್‍ಗಳು ಹಣಕ್ಕೆ ಬೇಡಿಕೆ ಇಟ್ಟಲ್ಲಿ ಅವರ ಮಾತಿಗೆ ಮರಳಾಗದಂತೆಯೂ ಚಂದ್ರಶೇಖರ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

Latest Posts

ಮಹಾಮಳೆಗೆ ಉಡುಪಿ ಜಿಲ್ಲೆಯಲ್ಲಿ 290 ಕೋಟಿ ರೂ.ನಷ್ಟ: ಈಗ ಸಿಕ್ಕಿರುವುದು ಪ್ರಾಥಮಿಕ ವರದಿಯಷ್ಟೆ

ಉಡುಪಿ: ಜಿಲ್ಲೆಯಲ್ಲಿ ಎರಡು ದಿನಗಳ ಹಿಂದೆ ಸುರಿದ ಮಹಾಮಳೆಗೆ ಭಾರೀ ಹಾನಿ ಸಂಭವಿಸಿದ್ದು, ಬರೋಬ್ಬರಿ 290 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ...

ಕೇಂದ್ರ ಸಚಿವೆ ಇರಾನಿ ಗಮನಸೆಳೆದ ‘ಮಟ್ಟು’ ಗ್ರಾಮದಲ್ಲಿನ ಇತರ ಸಂತ್ರಸ್ತರಿಗೂ ಬೇಕಿದೆ ಶೀಘ್ರ ಸ್ಪಂದನೆ!

ಉಡುಪಿ: ಜಿಲ್ಲೆಯ ಕೋಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಟ್ಟು ಗ್ರಾಮದಲ್ಲಿ ನೇಕಾರಿಕೆ ಮಾಡುತ್ತಿದ್ದ ಲಕ್ಷ್ಮಣ ಶೆಟ್ಟಿಗಾರ್ ಅವರಿಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಸಹಾಯ ಮಾಡಿದ್ದು, ನೆರೆ ನೀರು ತುಂಬಿದ 24 ತಾಸುಗಳಲ್ಲಿ...

ಸರಕಾರದ ಯೋಜನೆ ಅರ್ಹ ಸಫಾಯಿ ಕರ್ಮಚಾರಿಗಳಿಗೆ ಸಿಗಲಿ: ಜಿಲ್ಲಾಧಿಕಾರಿ ಜಗದೀಶ್

ಮಣಿಪಾಲ: ಸಫಾಯಿ ಕರ್ಮಚಾರಿಗಳ ಕಲ್ಯಾಣ ಅಭಿವೃದ್ಧಿಗೆ ಸರಕಾರ ರೂಪಿಸಿರುವ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕಾರ್ಯ ಆಗಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ. ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ...

ಸಹಜ ಸ್ಥಿತಿಗೆ ಮರಳಿದ ಉಡುಪಿ ಜಿಲ್ಲೆ: ಮೋಡ-ಬಿಸಿಲ ಜುಗಲ್ ಬಂದಿ!

ಉಡುಪಿ: ಎರಡು ದಿನಗಳ ಕಾಲ ರೆಡ್ ಅಲರ್ಟ್ ಇದ್ದ ಉಡುಪಿ ಜಿಲ್ಲೆಯಲ್ಲಿ ಮಂಗಳವಾರ ಎಲ್ಲವೂ ಸಹಜ ಸ್ಥಿತಿಗೆ ಬಂದಿದೆ. ಬೆಳಗ್ಗೆ ಮತ್ತು ಸಂಜೆಯ ವೇಳೆ ರಭಸದಿಂದ ಕೂಡಿದ ಮಳೆಯಾಗಿದ್ದರೂ ದಿನ ಉಳಿದ ಸಮಯ...

Don't Miss

ಮಹಾಮಳೆಗೆ ಉಡುಪಿ ಜಿಲ್ಲೆಯಲ್ಲಿ 290 ಕೋಟಿ ರೂ.ನಷ್ಟ: ಈಗ ಸಿಕ್ಕಿರುವುದು ಪ್ರಾಥಮಿಕ ವರದಿಯಷ್ಟೆ

ಉಡುಪಿ: ಜಿಲ್ಲೆಯಲ್ಲಿ ಎರಡು ದಿನಗಳ ಹಿಂದೆ ಸುರಿದ ಮಹಾಮಳೆಗೆ ಭಾರೀ ಹಾನಿ ಸಂಭವಿಸಿದ್ದು, ಬರೋಬ್ಬರಿ 290 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ...

ಕೇಂದ್ರ ಸಚಿವೆ ಇರಾನಿ ಗಮನಸೆಳೆದ ‘ಮಟ್ಟು’ ಗ್ರಾಮದಲ್ಲಿನ ಇತರ ಸಂತ್ರಸ್ತರಿಗೂ ಬೇಕಿದೆ ಶೀಘ್ರ ಸ್ಪಂದನೆ!

ಉಡುಪಿ: ಜಿಲ್ಲೆಯ ಕೋಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಟ್ಟು ಗ್ರಾಮದಲ್ಲಿ ನೇಕಾರಿಕೆ ಮಾಡುತ್ತಿದ್ದ ಲಕ್ಷ್ಮಣ ಶೆಟ್ಟಿಗಾರ್ ಅವರಿಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಸಹಾಯ ಮಾಡಿದ್ದು, ನೆರೆ ನೀರು ತುಂಬಿದ 24 ತಾಸುಗಳಲ್ಲಿ...

ಸರಕಾರದ ಯೋಜನೆ ಅರ್ಹ ಸಫಾಯಿ ಕರ್ಮಚಾರಿಗಳಿಗೆ ಸಿಗಲಿ: ಜಿಲ್ಲಾಧಿಕಾರಿ ಜಗದೀಶ್

ಮಣಿಪಾಲ: ಸಫಾಯಿ ಕರ್ಮಚಾರಿಗಳ ಕಲ್ಯಾಣ ಅಭಿವೃದ್ಧಿಗೆ ಸರಕಾರ ರೂಪಿಸಿರುವ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕಾರ್ಯ ಆಗಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ. ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ...
error: Content is protected !!