ಕುಶಾಲನಗರ: ಸರಕಾರದ ರಾಜೀವ್ ಗಾಂಧಿ ವಸತಿ ಯೋಜನೆ ಅಡಿಯಲ್ಲಿ ತಾಲೂಕಿನ ೨೦೦ಕ್ಕೂ ಹೆಚ್ಚು ಫಲಾನುಭವಿಗಳಿಗೆ ಮನೆಗಳ ನಿರ್ಮಾಣಕ್ಕೆ ಸರಕಾರದಿಂದ ಅನುಮೋದನೆ ದೊರೆತು ಮನೆಯ ತಳಹದಿಯ ಕೆಲಸ ಮಾತ್ರ ನಡೆದಿದೆ. ಅದರೆ ಇದುವರೆಗೆ ಮನೆ ನಿರ್ಮಾಣದ ಹಣ ಬರದೆ ಫಲಾನುಭವಿಗಳು ಪರದಾಡುವ ಪ್ರಸಂಗ ಎದುರಾಗಿದೆ.
ತಾಲೂಕಿನ ಅನೇಕ ಗ್ರಾಮ ಪಂಚಾಯ ತಿಗಳಲ್ಲಿ ೨೦೧೫-೧೬ ಸಾಲಿನಿಂದ ಇದುವರೆಗೂ ರಾಜೀವ ಗಾಂಧಿ ವಸತಿ ಯೋಜನೆ ಹಣ ಬಂದಿಲ್ಲ. ಅಯಾ ಗ್ರಾಮ ಪಂಚಾಯತಿಗಳಲ್ಲಿ ಅಯ್ಕೆಗೊಂಡಿದ್ದ ಫಲಾನುಭವಿಗಳು ನಿಯಮದಂತೆ ಮನೆ ನಿರ್ಮಾಣದ ತಳಹದಿಯನ್ನು ತೆಗೆದು ಒಂದು ಸುತ್ತಲಿನ ಅಡಿಪಾಯವನ್ನು ಹಾಕಿದ್ದಾರೆ. ಆದರೆ ಇನ್ನೂ ಕಟ್ಟಡದ ಬಿಲ್ ಬಾರದೆ ಯಾವುದೇ ಕೆಲಸ ಮಾಡಂದತಾಗಿದೆ.
ಸರಕಾರದ ಯೋಜನೆಗನುಗುಣವಾಗಿ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಫಲಾನುಭವಿಗಳ ಆಯ್ಕೆ ಮಾಡಿ ನಂತರ ಗ್ರಾಮ ಸಭೆಯಲ್ಲಿ ಅನುಮೋದನೆ ಪಡೆದು ಒಂದು ಮನೆಗೆ ೧.೫೦ (ಒಂದೂವರೆ ಲಕ್ಷ ರೂ) ವೆಚ್ಚದಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳಲು ಫಲಾನುಭವಿಗಳಗೆ ಸೂಚನೆ ಮಾಡಲಾಗಿತ್ತು. ಆದರೆ ಇದುವರೆಗೆ ತಾಲೂಕಿನ ಅನೇಕ ಗ್ರಾಮ ಪಂಚಾಯತಿಗೆ ಸರಕಾರದಿಂದ ಮನೆ ನಿರ್ಮಾಣದ ಹಣ ಬಾರದೆ ಮನೆ ಕೆಲಸ ಸ್ಥಗಿತಗೊಂಡಿದೆ.
ಗ್ರಾಮ ಪಂಚಾಯತಿಯಲ್ಲಿ ವಸತಿ ರಹಿತರಿಗೆ ವಸತಿ ನಿರ್ಮಿಸಿಕೊಳ್ಳಲು ಅಯ್ಕೆ ಪ್ರಕ್ರಿಯೆ ನಡೆದು, ಅವರುಗಳಿಗೆ ಪ್ರಥಮ ಬಿಲ್ ಬಂದರೂ ಸಹ ಸಾಲ ಮಾಡಿ ಅರ್ಧ ಭಾಗದ ಕಟ್ಟಡ ಮಾಡಿದರೂ ಯಾವುದೇ ಪ್ರಯೋಜನ ಅಗುತ್ತಿಲ್ಲಾ ಎಂದು ರಾಜೀವ್ ಗಾಂಧಿ ವಸತಿ ಯೋಜನೆಯ ಫಲಾನುಭವಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಸರಕಾರದ ಯೋಜನೆ ಅನುಷ್ಠಾನಕ್ಕೆ ಬಂದರೂ ಸಹ ಬಡವರಿಗೆ ನೀಡುವ ಮನೆ ಭಾಗ್ಯ ಯೋಜನೆ ಇನ್ನೂ ದೊರಕದಾಗಿದೆ .ಇದರಿಂದ ಅಯಾ ವ್ಯಾಪ್ತಿಯ ಫಲಾನುಭವಿಗಳು ಗ್ರಾಮ ಪಂಚಾಯತಿಗೆ ಬಿಲ್ ಅಲೆದಾಡುತ್ತಿದ್ದಾರೆ. ಸಂಬಂಧಿಸಿದ ತಾಲೂಕು ಮಟ್ಟದ ಅಧಿಕಾರಿಗಳು ತುರ್ತಾಗಿ ಗಮನ ಹರಿಸಿ ಮನೆಗಳ ನಿರ್ಮಾಣಕ್ಕೆ ಅನುಕೂಲ ಮಾಡಿಕೊಂಡಬೇಕೆಂದು ಫಲಾನುಭವಿಗಳ, ಗ್ರಾಮಸ್ಥರ ಒತ್ತಾಯವಾಗಿದೆ.