Thursday, August 11, 2022

Latest Posts

ಕುಶಾಲನಗರ-ಮೈಸೂರು ರೈಲು ಮಾರ್ಗ: ಅಂತಿಮ ಸರ್ವೆಗೆ ಟೆಂಡರ್ ಪ್ರಕ್ರಿಯೆ

ಹೊಸ ದಿಗಂತ ವರದಿ, ಮಡಿಕೇರಿ:

ಮೈಸೂರು-ಕುಶಾಲನಗರ ನಡುವೆ ನೂತನ ರೈಲು ಮಾರ್ಗ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದ್ದು, ಅಂತಿಮವಾಗಿ ಸ್ಥಳ
ವೀಕ್ಷಣೆ ಮಾಡಿ ವರದಿ ನೀಡುವಂತೆ ಮೈಸೂರು ರೈಲ್ವೆ ಅಧಿಕಾರಿಗಳಿಗೆ ದೆಹಲಿಯ ಭಾರತೀಯ ರೈಲ್ವೆ ಸೂಚನೆ ನೀಡಿದೆ.
ಮೈಸೂರು ಹಾಗೂ ಕುಶಾಲನಗರ ನಡುವಿನ 87 ಕಿ.ಮೀ. ಉದ್ದದ ರೈಲು ಮಾರ್ಗಕ್ಕೆ 1854.62 ಕೋಟಿ ರೂ. ವೆಚ್ಚ ಅಗಲಿರುವುದಾಗಿ ರೈಲ್ವೆ ಇಲಾಖೆ ಅಂದಾಜು ಪಟ್ಟಿಯನ್ನೂ ಸಿದ್ಧಪಡಿಸಿದೆ.
ಈ ನೂತನ ರೈಲು ಮಾರ್ಗ ನಿರ್ಮಾಣಕ್ಕೆ ಕಳೆದ ಫೆಬ್ರವರಿ 27ರಂದು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿತ್ತು. ನಂತರ ರೈಲ್ವೆ ಮಾರ್ಗ ನಿರ್ಮಾಣಕ್ಕೆ ರೈಲ್ವೇ ಅಧಿಕಾರಿಗಳು ಪ್ರಾಥಮಿಕ ಇಂಜಿನಿಯರಿಂಗ್ ಹಾಗೂ ಸಂಚಾರ ಸರ್ವೆಯನ್ನೂ ನಡೆಸಿದ್ದರು. ನಂತರ ಈ ಯೋಜನೆಯು ವ್ಯಾವಹಾರಿಕವಾಗಿ ಲಾಭದಾಯಕವಲ್ಲ ಎಂದು ಅಧಿಕಾರಿಗಳು ವರದಿ ಸಲ್ಲಿಸಿದ್ದರಿಂದ ಯೋಜನೆ ನೆನಗುದಿಗೆ ಬಿದ್ದಿತ್ತು.
ಈ ಹಿನ್ನೆಲೆಯಲ್ಲಿ ಕೊಡಗು -ಮೈಸೂರು ಸಂಸದ ಪ್ರತಾಪ್ ಸಿಂಹ, ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಈ ಯೋಜನೆಯ ಅನುಷ್ಠಾನಕ್ಕೆ ಹೆಚ್ಚಿನ ಪ್ರಯತ್ನ ನಡೆಸಿದ್ದರು. ಇದೀಗ ಎರಡು ನಗರಗಳ ನಡುವಿನ ರೈಲು ಸಂಚಾರ ಆರಂಭಕ್ಕೆ ಕೊನೆಯ ಹಂತದ ಸರ್ವೆ ಮಾಡಲು ಕ್ಷಣಗಣನೆ ಆರಂಭವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss