Monday, July 4, 2022

Latest Posts

ಕುಶಾಲನಗರ ವ್ಯವಸಾಯೋತ್ಪನ್ನ ಮಾರಾಟ ಸ.ಸಂ.ಆಡಳಿತ ಮಂಡಳಿಗೆ ಚುನಾವಣೆ: ಬಿಜೆಪಿ ತೆಕ್ಕೆಗೆ ಅಧಿಕಾರ

ಕುಶಾಲನಗರ: ಕುಶಾಲನಗರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಆಡಳಿತ ಮಂಡಳಿಗೆ ಚುನಾವಣೆ ನಡೆದು ಈ ಸಾಲಿನ ಅಧಿಕಾರ ಬಿಜೆಪಿ ತೆಕ್ಕೆಗೆ ಒಲಿದಿದೆ.
ಒಟ್ಟು 12 ಮಂದಿ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆದು, ಇವರಲ್ಲಿ 8 ಮಂದಿ ಅವಿರೋಧ ಆಯ್ಕೆಯಾಗಿದ್ದಾರೆ. ಉಳಿದಂತೆ 4 ಸ್ಥಾನಕ್ಕೆ ಚುನಾವಣೆ ನಡೆದು ಕೆ.ಎಸ್ ರತೀಶ್, ನಾಗೇಶ್, ದೊಡ್ಡಯ್ಯ, ಟಿ.ಜಿ ಜಗದೀಶ್ ವಿಜೇತರಾಗಿದ್ದಾರೆ. ಸುಂಟಿಕೊಪ್ಪ ಕ್ಷೇತ್ರದಿಂದ ಎಂ.ಎನ್ ಕುಮಾರಪ್ಪ, ನೀಲಮ್ಮ, ಮಹಮ್ಮದ್ ಸೋಯಲ್, ಮಾದಾಪುರ ಕ್ಷೇತ್ರದಿಂದ ತಿಲಕ್, ಕುಶಾಲನಗರದಿಂದ ಲತಾ ಗಣಿ ಪ್ರಸಾದ್, ಕೆದಂಬಾಡಿ ಪ್ರಸನ್ನ, ಆರ್.ಕೆ. ಚಂದ್ರ ಮತ್ತು ಹೆಬ್ಬಾಲೆಯ ಮೋಹನ್ ಅವರುಗಳು ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಗೊಂಡವರು.
ಚುನಾವಣೆ ಅಧಿಕಾರಿಯಾಗಿ ಎಂ.ಇ ಮೋಹನ್ ಅವರು ಕಾರ್ಯನಿರ್ವಹಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss