Friday, August 19, 2022

Latest Posts

ಕುಶಾಲನಗರ| ಹಣ ಡರೋಡೆ ನಡೆಸಲು ವಿಫಲ ಯತ್ನ

ಕುಶಾಲನಗರ: ಕುಶಾಲನಗರ ಸಮೀಪದ ಆನೆಕಾಡು ಬಳಿ ಹಣ ಡರೋಡೆ ನಡೆಸಲು ವಿಫಲ ಯತ್ನ ನಡೆದಿದೆ.
ಕುಶಾಲನಗರದ ವಿನಾಯಕ್ ಏಜೆನ್ಸಿ ಗೆ ಸೇರಿದ ಗೂಡ್ಸ್ ವಾಹನ ಚಾಲಕ ಕಿರಣ್ ಹಾಗೂ ನಿರ್ವಾಹಕ ರಾಜು ಎಂಬವರಿಗೆ ಖಾರದ ಪುಡಿ ಎರಚಿ ಹಣ ದರೋಡೆಗೆ ಪ್ರಯತ್ನಿಸಲಾಗಿದೆ.

ಸುಂಟಿಕೊಪ್ಪದಿಂದ ಕುಶಾಲನಗರಕ್ಕೆ ಬರುತ್ತಿದ್ದ ವಾಹನವನ್ನು ಆನೆಕಾಡು ಅರಣ್ಯ ಪ್ರದೇಶದ ಹೆದ್ದಾರಿಯಲ್ಲಿ ಬೈಕ್ ನಲ್ಲು ಹಿಂಬಾಲಿಸಿಕೊಂಡು ಬಂದ ಇಬ್ಬರು ವ್ಯಕ್ತಿಗಳು ತಡೆದು‌ ನಿಲ್ಲಿಸಿದ್ದಾರೆ. ಬಳಿಕ ಇಬ್ಬರಿಗೂ ಖಾರದ ಪುಡಿ ಎರಚಿ ಅವರ ಬಳಿಯಿದ್ದ ಹಣ ಕಸಿದುಕೊಳ್ಳಲು ಪ್ರಯತ್ನಿಸಿದ್ದಾರೆ.

ಆಗಂತುಕರ ಬಲೆಯಿಂದ ತಪ್ಪಿಸಿಕೊಂಡು ಬಂದ ಆಟೋ ಚಾಲಕ‌‌ ಮತ್ತು ನಿರ್ವಾಹಕ ತಮ್ಮ ಮಾಲಕರಿಗೆ ಮಾಹಿತಿ‌ ನೀಡಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಗ್ರಾಮಾಂತರ ಠಾಣಾಧಿಕಾರಿ‌ ನಂದೀಶ್ ಪರಿಶೀಲನೆ ನಡೆಸಿ‌ ಮುಂದಿನ ಕ್ರಮಕೈಗೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!