Wednesday, July 6, 2022

Latest Posts

ಕುಶಾಲನಗರ| 18.44 ಕೋಟಿ ವೆಚ್ಚದ ಕಾಮಗಾರಿಗೆ ಶಾಸಕರಿಂದ ಚಾಲನೆ

ಕುಶಾಲನಗರ: ಕುಶಾಲನಗರ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ನೆನೆಗುದಿಗೆ ಬಿದ್ದಿದ್ದ ಒಳಚರಂಡಿ ಯೋಜನೆಯ ಎರಡನೇ ಹಂತದ 18.44 ಕೋಟಿ ರೂ ವೆಚ್ಚದ ಕಾಮಗಾರಿಗೆ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಕಳೆದ 6 ವರ್ಷಗಳ ಹಿಂದೆ 40 ಕೋಟಿ ರೂ. ವೆಚ್ಚದಲ್ಲಿ ಒಳಚರಂಡಿ ಯೋಜನೆ ಪ್ರಾರಂಭಿಸಲಾಗಿತ್ತು. ಹಣಕಾಸಿನ ಕೊರತೆ ಹಾಗೂ ಶುದ್ಧೀಕರಣ ಘಟಕ ನಿರ್ಮಾಣಕ್ಕೆ ಜಾಗದ ವಿವಾದದ ಹಿನ್ನಲೆಯಲ್ಲಿ ಕಾಮಗಾರಿ ಸ್ಥಗಿತಗೊಂಡಿತ್ತು. ಇದೀಗ 18.44 ಕೋಟಿ ರೂಗಳ ಅನುದಾನ ಬಿಡುಗಡೆಯಾಗಿದ್ದು 15 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
ಯೋಜನೆಯ ಉಸ್ತುವಾರಿ, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಅಭಿಯಂತರ ಆನಂದ್ ಮಾತನಾಡಿ, ಪ್ರಥಮ ಹಂತದಲ್ಲಿ ಕೈಗೊಂಡಿದ್ದ ಕಾಮಗಾರಿ ಕೆಲವೆಡೆ ಹಾನಿಯಾಗಿದ್ದು ಅದನ್ನು ಸರಪಡಿಸಲಾಗುವುದು.
ಎರಡನೇ ಹಂತದ ಕಾಮಗಾರಿಯಲ್ಲಿ 45 ಲಕ್ಷ ಲೀಟರ್ ಸಾಮಥ್ರ್ಯದ ಮಲಿನ ನೀರು ಶುದ್ಧೀಕರಣ ಘಟಕ ನಿರ್ಮಾಣ, 8.5 ಕಿಮೀ ಉದ್ದಕ್ಕೆ ಪಟ್ಟಣದ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿಯಲ್ಲಿ ಮ್ಯಾನ್‍ಹೋಲ್ ಮತ್ತು ಕೊಳವೆ ಸಾಲುಗಳ ಅಳವಡಿಕೆ, 2 ವೆಟ್‍ವೆಲ್‍ಗಳಲ್ಲಿ ಪಂಪಿಂಗ್ ಮೆಷಿನರಿ ಅಳವಡಿಸುವುದು ಹಾಗೂ ಮೂರು ಕಡೆ ವೆಟ್ವೆಲ್‍ಗಳಲ್ಲಿ 11 ಕೆವಿ ವಿದ್ಯುತ್ ಫೀಡರ್ ಲೈನ್ ಅಳವಡಿಕೆ ಸೇರಿದಂತೆ 3.3 ಕಿಮೀ ಉದ್ದದ ಏರು ಕೊಳವೆಗಳನ್ನು ಅಳವಡಿಸುವ ಕಾಮಗಾರಿ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭ ಜಿ.ಪಂ ಸದಸ್ಯೆ ಮಂಜುಳಾ, ತಾಪಂ ಸದಸ್ಯೆ ಪುಷ್ಪಾ ಜನಾರ್ಧನ್, ಕುಡಾ ಅಧ್ಯಕ್ಷ ಎಂ.ಎಂ.ಚರಣ್, ಪಪಂ ಸದಸ್ಯ ಅಮೃತ್‍ರಾಜ್, ಕೆ.ಜಿ.ಮನು, ಎಂ.ವಿ.ನಾರಾಯಣ್, ಕುಡಾ ಸದಸ್ಯರಾದ ವೈಶಾಖ್, ವಿ.ಡಿ.ಪುಂಡರೀಕಾಕ್ಷ, ಮಧುಸೂದನ್, ಬಿಜೆಪಿ ಪ್ರಮುಖರಾದ ಉಮಾಶಂಕರ್, ಕೆ.ಜಿ.ಮನು ಸೇರಿದಂತೆ ಸ್ಥಳೀಯ ಪದಾಧಿಕಾರಿಗಳು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss