ವಡೋದರ: ಗುಜರಾತ್ನ ವಡೋದರಾದ ಬವಾಮನ್ಪುರ ಪ್ರದೇಶದಲ್ಲಿ ಮುಂಜಾನೆ ಕಟ್ಟಡ ಕುಸಿದಿದ್ದು, ಮೂರು ಮಂದಿ ಮೃತಪಟ್ಟಿದ್ದಾರೆ.
ಗಾಯಗೊಂಡಿದ್ದ ವ್ಯಕ್ತಿಯೊಬ್ಬನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆ ವೇಳೆ ೧೮ ವರ್ಷದ ವ್ಯಕ್ತಿಯೊಬ್ಬರನ್ನು ರಕ್ಷಣೆ ಮಾಡಲಾಗಿದೆ.
ಕಟ್ಟಡ ಕಟ್ಟಿದವನ ನಿರ್ಲಕ್ಷ್ಯದಿಂದ ಕಟ್ಟದ ಕುಸಿದು ಬಿದ್ದಿದ್ದು, ಆಕ್ರೋಶ ವ್ಯಕ್ತವಾಗಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಇನ್ನೂ ಹೆಚ್ಚಿನ ಮಂದಿ ಕಟ್ಟಡದ ಅವಷೇಶಗಳಡಿ ಸಿಲುಕಿರುವ ಶಂಕೆ ಇದೆ.