ಕುಕನೂರು(ಕೊಪ್ಪಳ): ಜಿಲ್ಲೆಯ ಕೂಕನೂರು ಪಟ್ಟಣ ಪಂಚಾಯತಿ ಕಂಪ್ಯೂಟರ್ ಆಪ್ರೇಟರ್ ಕುಮಾರಸ್ವಾಮಿ ಹುಚ್ಚಪ್ಪನಮಠ ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಪಟ್ಟಣದ 6.7,17,19ನೇ ವಾರ್ಡಗಳಲ್ಲಿ ನಿರ್ಮಿಸಲಾದ 25 ಲಕ್ಷ.ರೂಗಳ ಶೌಚಾಲಯ ಕಾಮಗಾರಿಯಲ್ಲಿ ಜಿಎಸ್ಟಿ ತೆಗೆದು ಗುತ್ತಿಗೆದಾರರಿಗೆ 23 ಲಕ್ಷ ಬಿಲ್ಲ್ ಪಾವತಿಸಬೇಕಾದರೆ ಗುತ್ತಿಗೆದಾರರಿಂದ 1.30 ಲಕ್ಷ ಲಂಚದ ಬೇಡಿಕೆ ಇಟ್ಟಿದ್ದು, ಶುಕ್ರವಾರ 1.ಲಕ್ಷ ಲಂಚ ಪಡೆಯುವಾಗ ಬಳ್ಳಾರಿ ಎಸಿಬಿ ಎಸ್ಪಿ ಗುರುನಾಥ ಮತ್ತು ಚಂದ್ರಕಾಂತ ನೇತೃತ್ವದಲ್ಲಿ ದಾಳಿ ನಡೆಸಿ ಅಪರಾದಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಎಸಿಬಿವರಾದ ಬಾಳನಗೌಡ ಎಸ್ಎಮ್, ಎಸ್.ಎಸ್ ಬಿ, ಪ್ರದೀಪ್ ತಾಳಕೇರಿ, ಆರ್ಸಿಬಿ, ಎಸಿಬಿ ಕೊಪ್ಪಳ ಸಿದ್ದರಾಜ, ಶಿವಾನಂದ, ರಮೇಶ, ರಂಗನಾಥ, ಆನಂದ ಬಸ್ತಿ, ಬಸವರಾಜ ಇನ್ನಿತರರಿದ್ದರು.