Wednesday, August 17, 2022

Latest Posts

ಕೂಡುಮಂಗಳೂರು ಸಹಕಾರ ಸಂಘದಿಂದ 1.10 ಕೋಟಿ ವೆಚ್ಚದಲ್ಲಿ ಗೋದಾಮು ನಿರ್ಮಾಣ

ಹೊಸ ದಿಗಂತ ವರದಿ, ಕುಶಾಲನಗರ:

ರಾಮೇಶ್ವರ ಕೂಡುಮಂಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಸೀಗೆಹೊಸೂರು ಗ್ರಾಮದಲ್ಲಿ 2 ಎಕರೆ ಒಣ ಭೂಮಿ ಖರೀದಿಸಲಾಗಿದ್ದು, ಇದರಲ್ಲಿ ರೈತರ ಅನುಕೂಲಕ್ಕಾಗಿ 1.10. ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಗೋದಾಮು ಹಾಗೂ ಕಣ ನಿರ್ಮಿಸಲಾಗುವುದು ಎಂದು ಸಂಘದ ಅಧ್ಯಕ್ಷ
ಕೆ.ಕೆ .ಹೇಮಂತ್ ಕುಮಾರ್ ತಿಳಿಸಿದರು.
ಸಂಘದ ಆವರಣದಲ್ಲಿ ನಡೆದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘವು ರೈತರಿಗೆ ವಿವಿಧ ಸಾಲ ಸೌಲಭ್ಯಗಳನ್ನು ನೀಡುವುದರ ಜೊತೆಗೆ 22.96 ಲಕ್ಷ ರೂ.ಗಳ ಲಾಭ ಗಳಿಸಿದೆ. ಸದಸ್ಯರ ಸಹಕಾರದೊಂದಿಗೆ ಸೀಗೆಹೊಸೂರು ಗ್ರಾಮದಲ್ಲಿ ಖರೀದಿಸಲಾಗಿರುವ 2 ಎಕರೆ ಒಣ ಭೂಮಿಯಲ್ಲಿ 1.10 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಗೋದಾಮು ಮತ್ತು ರೈತರ ಅನುಕೂಲಕ್ಕಾಗಿ ಕಣ ನಿರ್ಮಾಣ ಮಾಡಲಾಗುವುದು. ಈಗಾಗಲೇ ಇದರ ನೀಲ ನಕ್ಷೆ ತಯಾರಿಸಿ ನಬಾರ್ಡ್‍ಗೆ ಕಳುಹಿಸಲಾಗಿದ್ದು, ಹಣ ಬಿಡುಗಡೆ ಅದ ತಕ್ಷಣ ಗೋದಾಮು ಮತ್ತು ಈಗಿರುವ ಸಹಕಾರ ಭವನವನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ವಿವರಿಸಿದರು.
ಬೆಳೆ ಪರಿಹಾರ ನಿದಿ ಯೋಜನೆಯಡಿ ಬೆಳೆ ಸಾಲ ಪಡೆದು ಅರ್ಥಿಕ ನಷ್ಟ ಉಂಟಾದ ಸದಸ್ಯರಿಗೆ ನೆರವು ನೀಡುವ ಉದ್ದೇಶದಿಂದ ಬೈಲಾ ತಿದ್ದುಪಡಿ ಮೂಲಕ ರೈತರಿಗೆ ಮಧ್ಯಮಾವಧಿ ,ಅಲ್ಪಾವಧಿ, ದೀರ್ಘಾವಧಿ ಮತ್ತು ಜಾಮೀನಿನ ಮೇಲೆ ನೀಡುವ ಸಾಲದ ಮಿತಿ ಹೆಚ್ಚಿಸುವ ಬಗ್ಗೆ ಮತ್ತು ಸಂಘದ ಅಭಿವೃದ್ಧಿಗೆ ಪೂರಕವಾದ ಅಂಶಗಳ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು.
ಸಭೆಯಲ್ಲಿ ಹಾಜರಿದ್ದ ರೈತ ಸದಸ್ಯರು ಕೃಷಿ ಸಾಲದ ಬಗ್ಗೆ, ಜಾಮೀನು ಸಾಲದ ಬಗ್ಗೆ ಗೊಬ್ಬರ ಮತ್ತು ವ್ಯಾಪಾರ ಅಭಿವೃದ್ಧಿ ಸಾಲದ ಬಗ್ಗೆ ಸೇರಿದಂತೆ ವಿವಿಧ ಚರ್ಚೆಗಳು ನೆಡೆದವು
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಟಿ.ಪಿ.ಹಮೀದ್, ನಿರ್ದೇಶಕರಾದ ಭೋಗಪ್ಪ, ತಮ್ಮಣ್ಣೇಗೌಡ, ಕೆ.ಟಿ. ಅರುಣ ಕುಮಾರ, ಎಸ್. ಎನ್. ರಾಜಾರಾವ್, ಟಿ.ಕೆ.ವಿಶ್ವನಾಥ, ಹೆಚ್.ಆರ್.ಪಾರ್ವತಮ್ಮ, ಕೆ.ಎನ್. ಲಕ್ಷಣರಾಜ ಅರಸ್, ಕೃಷ್ಣ ಗೌಡ, ವಿ.ಬಸಪ್ಪ, ರಮೇಶ , ಕೆ ಕೆ ಪ್ರವಿತ್ರ ಕುಶಾಲನಗರ ಡಿ ಸಿ ಸಿ ಬ್ಯಾಂಕ್‍ನ ವ್ಯವಸ್ಥಾಪಕ ತುಂಗರಾಜು, ಸಂಘದ ಮೇಲ್ವಿಚಾರಕ ಎನ್.ಕೆ.ಅಜೀವ್, ನವೀನ್ ಕುಮಾರ್, ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಂ.ಪಿ.ಮೀನಾ ,ಲೆಕ್ಕಿಗ ಟಿ.ಪಿ.ಸೋಮಶೇಖರ ಹಾಜರಿದ್ದರು.
ಇದೇ ಸಂದರ್ಭ ಎಸ್ ಎಸ್ ಎಲ್ ಸಿ ಮತ್ತು ಪಿ ಯು ಸಿ ಯಲ್ಲಿ ಅಧಿಕ ಅಂಕಗಳನ್ನು ಗಳಿಸಿದ ಸಂಘದ ರೈತ ಸದಸ್ಯರ ಮಕ್ಕಳಿಗೆ ಬಹುಮಾನ ನೀಡಲಾಯಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!