ಗುಂಗುರು ಕೂದಲಿರುವವರಿಗೆ ಕೂದಲು ಬಾಚುವಷ್ಟರಲ್ಲಿ ಹೈರಾಣಾಗುತ್ತಾರೆ. ಆದರೆ ಕೂದಲು ಬಾಚುವಾಗ ಸಿಕ್ಕಾಗದೆ, ಕೂದಲು ಉದರದೆ, ಕೂದಲು ದಟ್ಟವಾಗಿ ಮೃದುವಾಗಿ ಬೆಳೆಯಲು ಇಲ್ಲಿದೆ ಸುಲಭ ಟಿಪ್ಸ್
ಅಲೊವೆರಾ: ಒದ್ದೆ ತಲೆ ಕೂದಲನ್ನು ಬಾಚುವ ಬದಲು ಕೂದಲಿ ಸ್ವಲ್ಪ ಅಲೊವೆರಾ ಜೆಲ್ ಹಚ್ಚಿಕೊಳ್ಳುವುದರಿಂದ ಕೂದರು ಮೃದುವಾಗುತ್ತದೆ.
ವೈಡ್ ಕೂಂಬ್: ಸಿಕ್ಕು ಬಿಡಿಸಲು ಸ್ವಲ್ಪ ವೈಡ್ ಕೂಂಬ್ ಗಳನ್ನು ಬಳಸಿ ಕೂದಲು ಬಾಚುವುದರಿಂದ ಕೂದಲ ಸಕ್ಕು ಹೋಗುತ್ತದೆ.
ಕೂದಲು ಬಾಚುವುದು: ನಿತ್ಯ ಎರಡು ಬಾರಿಯಾದರೂ ಕೂದಲು ಬಾಚುವುದರಿಂದ ಕೂದಲು ಸಿಕ್ಕಾಗುವುದನ್ನು ತಡೆಯಬಹುದು.
ಒದ್ದೆ ಕೂದಲು ಬಾಚಬೇಡಿ: ಸ್ನಾನ ಮಾಡಿದ ಕೂಡಲೆ ಕೂದಲು ಬಾಚುವುದರಿಂದ ಕೂದಲು ಸಿಕ್ಕು ಗಟ್ಟುವುದು ಹಾಗೂ ಕೂದಲು ಉದುರುತ್ತದೆ.
ಮೊದಲು ಸಿಕ್ಕು ತೆಗೆಯಿರಿ: ಕೂದಲು ಬಾಚುವ ಮುನ್ನ ಕೈನಲ್ಲಿ ಕೂದಲಿನ ತುದಿಯಲ್ಲಿ ಗಂಟು ಕಟ್ಟಿರುವ ಸಿಕ್ಕನ್ನು ತೆಗೆದು ಬಳಿಕ ಕೂದಲನ್ನು ಬಾಚುವುದು ಉತ್ತಮ.