Sunday, June 26, 2022

Latest Posts

ಕೂಲಿಯಾಳೂ ಇಲ್ಲ… ಕಟಾವ್ ಯಂತ್ರವೂ ಇಲ್ಲ… ಕರಾವಳಿಯ ಅನ್ನದಾತ ಕಂಗಾಲು…

ಕಿನ್ನಿಗೋಳಿ: ಕೊರೋನಾ ವೈರಸ್ ಹರಡದಂತೆ ಲಾಕ್‌ಡೌನ್ ಮಾಡಿದ  ಹಿನ್ನೆಲೆಯಲ್ಲಿ ಗ್ರಾಮೀಣ ಭಾಗಕ್ಕೆ ಯಾವುದೇ ಸಮಸ್ಯೆ ಒದಗಿ ಬರುವುದಿಲ್ಲ  ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ರೈತರೇ ವಾಸಿಸುದರಿಂದ ತಮಗೆ ಬೇಕಾದ ತರಕಾರಿ ಅಕ್ಕಿಯನ್ನು ಆತನೇ ಬೆಳೆಯುತ್ತಾನೆ. ಆದರೆ ಲಾಕ್ ಡೌನ್‌ನಿಂದಾಗಿ ಇದೀಗ ಜಿಲ್ಲೆಯ ರೈತರು ಸಮಸ್ಯೆಗೊಳಗಾಗಿದ್ದಾರೆ, ಭತ್ತದ ಬೆಳೆ ಕಟಾವಿಗೆ ಬಂದಿದ್ದು, ಅತ್ತ ಕೂಲಿಯಾಳುಗಳೂ ಇಲ್ಲದೆ ಇತ್ತ ಯಂತ್ರವೂ ಇಲ್ಲದೆ ರೈತ ಚಿಂತೆಗೊಳಗಾಗಿದ್ದಾನೆ.
ಕೂಲಿಯಾಳುಗಳ ಸಮಸ್ಯೆಯಿಂದ ರೈತ ಇತ್ತೀಚಿನ ಕೆಲ ವರ್ಷಗಳಿಂದ ಭತ್ತ ಕಟಾವಿಗೆ ಯಂತ್ರವನೇ ಅವಲಂಬಿತವಾಗಿದ್ದು, ಕೂಲಿಯಾಳುಗಳ ಸಮಸ್ಯೆ ನೀಗಿದಂತಾಗಿತ್ತು. ಆದರೆ ಇದೀಗ ಜಿಲ್ಲೆಯಲ್ಲಿ ನೂರಾರು ಎಕರೆ ಭತ್ತದ ಬೆಳೆ ಕಟಾವಿಗೆ ಬಂದಿದ್ದು ಲಾಕ್ ಡೌನ್ ಹಿನ್ನೆಲೆಯಲ್ಲಿ ದಾವಣಗೆರೆ ಕಡೆಯಿಂದ ಬರುವ ಯಂತ್ರಗಳು ಬರಲಾಗದೆ ಸಮಸ್ಯೆಯುಂಟಾಗಿದೆ. ಲಾಕ್‌ಡೌನ್‌ಗಿಂತ ಮೊದಲೇ ಬಂದ ಒಂದೆರಡು ಯಂತ್ರಗಳು ಇದ್ದರೂ ಅದು ಸಾಕಾಗುವುದಿಲ್ಲ, ಈ ಹಿಂದೆ ಯಂತ್ರಕ್ಕೆ ಬದಲಿಯಾಗಿ ಬೇರೆ ಬೇರೆ ಕಡೆಗಳಿಂದ ಕೂಲಿಯಾಳುಗಳನ್ನು ವಾಹನದಲ್ಲಿ ಕರೆದುಕೊಂಡು ಬರುತ್ತಿದ್ದು ಇದೀಗ ಕೊರೋನಾ ಭಯದಿಂದ ಅವರೂ ಕೂಡ ಬರಲು ಹಿಂದೇಟು ಹಾಕುತ್ತಿದ್ದಾರೆ, ಒಂದೆರಡು ವಾರ ಕಳೆದರೆ ಭತ್ತ ಸಂಪೂರ್ಣ ಗದ್ದೆಯಲ್ಲಿ ಉಳಿದು ಕಿತ್ತುಹೋಗುವ ಸಾಧ್ಯತೆ ಇದೆ ಎನ್ನುತ್ತಿದ್ದಾರೆ ರೈತರು. ಯಂತ್ರವನ್ನು ಜಿಲ್ಲೆಗೆ ತರಿಸುವ ವ್ಯವಸ್ಥೆ ಕಲ್ಪಿಸಿದರೆ ರೈತರ ಸಮಸ್ಯೆ ಪರಿಹಾರವಾಗಲಿದೆ. ಈ ಸಮಸ್ಯೆ ನೀಗಿಸುವಲ್ಲಿ ಅದಷ್ಟು ಬೇಗ ಜನಪ್ರತಿನಿಧಿಗಳು ಕಾರ್ಯಪ್ರವರ್ತರಾಗಬೇಕಾಗುತ್ತದೆ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss