Thursday, August 18, 2022

Latest Posts

ಕೃಷಿಕರ ಪರ ಕೇಂದ್ರದ ಕಾಯಿದೆ ಅಭಿನಂದನೀಯ: ಬಿ.ಸಿ.ಪಾಟೀಲ್

ಬೆಂಗಳೂರು: ಮೋದಿ ನೇತೃತ್ವದ ಬಿಜೆಪಿ ಕೇಂದ್ರ ಸರ್ಕಾರ ಕೃಷಿಕರ ಪರವಾಗಿ ಮಸೂದೆಗಳನ್ನು ಮಂಡಿಸಿರುವುದು ಐತಿಹಾಸಿಕ ಮತ್ತು ಅಭಿನಂದನೀಯ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.

ವಿಧಾನಸೌಧ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರುಇದರಿಂದಾಗಿ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಸಾಧ್ಯವಾಗಿದೆ ಎಂದು ರೈತರ ಮನೆಬಾಗಿಲಿಗೆ ಹೋಗಿ ಉತ್ಪನ್ನಗಳನ್ನು ಖರೀದಿಸಲು ಅವಕಾಶ ಕಲ್ಪಿಸಿದೆ. ಅಂದಮಾತ್ರಕ್ಕೆ ಎಪಿಎಂಸಿಯಲ್ಲಿ ಮಾರಾಟ ನಿಲ್ಲಿಸಿಲ್ಲ. ಎಪಿಎಂಸಿಗೆ ಗೊತ್ತಿಲ್ಲದೇ ಮಧ್ಯವರ್ತಿಗಳ ಹಾವಳಿಯಿಂದಾಗುವ ತೊಂದರೆ ತಪ್ಪಿದೆ.ಪಂಜಾಬ್‌ಗನುಗುಣವಾಗಿ ಅಕಾಲಿಕ ದಳ ತೆಗೆದುಕೊಂಡ ನಿರ್ಧಾರ ಅವರ ವೈಯಕ್ತಿಕ ಎಂದರು.

ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಮಾತನಾಡಿ, 26 ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದು ಯಾವುದೇ ರೈತರು ಎಪಿಎಂಸಿ ಆ್ಯಕ್ಟ್ ವಿರೋಧಿಸಿಲ್ಲ.ರೈತನ ಬೆಳೆ ಮಾರಾಟ ಅವನ ಹಕ್ಕು.ಮೊದಲಿದ್ದ ಮಾರಾಟದ ನಿಯಮವನ್ನು ಕೇಂದ್ರ ಸಡಿಲಿಸಿದೆ.ಎಪಿಎಂಸಿ ಸೆಸ್ ಕೂಡ ರೈತರಿಗಾಗಿ ಕಡಿಮೆ ಮಾಡಿದೆ.ಈ ಕಾನೂನು ಬಂದ ಮೇಲೆ ಹೊಲದಲ್ಲಿಯೇ ಹೋಗಿ ಕೂಡ ಬೆಳೆ ಖರೀದಿಸಬಹುದು.ಈ ಕಾನೂನುಆದ ಮೇಲೆ ಎಲ್ಲಾ ಎಪಿಎಂದಿಗೆ ಭೇಟಿ ಕೊಟ್ಟಿದ್ದೇವೆ.ಯಾರೂ ವಿರೋಧಿಸುತ್ತಿಲ್ಲ.ವಿಪಕ್ಷಗಳು ಕೇವಲ ರಾಜಕೀಯಕ್ಕಾಗಿ ಮಾತ್ರ ವಿರೋಧಿಸುತ್ತಿದೆ. ರೈತನಿಗೆ ಮುಕ್ತವಾದ ವಾತಾವರಣ ಈ ಕಾಯಿದೆಯಿಂದ ಸಿಕ್ಕಿ ನನ್ನ ಬೆಳೆ ನನ್ನ ಹಕ್ಕು ಎನ್ನುವಂತಾಗಿದೆ ಎಂದರು.

ಮಲ್ಟಿನ್ಯಾಷನಲ್ ಕಂಪೆನಿಗಳಿಗಾಗಲೀ ಯಾರಿಗಾಗಲೀ ಮಾರಾಟ ಮಾಡಲಿ.ರೈತನ ಬೆಳೆಗೆ ಬೆಲೆ ಸಿಗಬೇಕು.ಆದಾಯ ಹೆಚ್ಚಾಗಬೇಕು ಎಂದರು.ಪ್ರತಿಭಟನೆ ಹತ್ತಿಕ್ಕುವ ಕೆಲಸ ನಮ್ಮ ಸರ್ಕಾರ ಮಾಡುತ್ತಿಲ್ಲ.ಅಮೆಂಡ್ಮೆಂಟ್ ತಂದಗಾಲೇ ವಿರೋಧಿಸಿಲ್ಲ ಏಕೆ.,24*7 ಸರ್ಕಾರವಿದೆ.ಸರ್ಕಾರ ಸ್ಪಂದಿಸಲು ಪ್ರತಿಭಟನಾನಿರತನ್ನು ಭೇಟಿ ಮಾಡಲು ಮುಖ್ಯಮಂತ್ರಿಗಳು ಸಿದ್ಧರಿದ್ದಾರೆ ಎಂದರು.

ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಮಾತನಾಡಿ,ರೈತರಿಗೆ ಎಪಿಎಂಸಿಗೆ ಹೋಗಿ ಮಾರಾಟ ಮಾಡುವ ಸೀಮಿತ ಕಾಲಾವಧಿಯನ್ನು ವಿಸ್ತರಿಸಿ ಮಾರಾಟದ ಅವಕಾಶವನ್ನು ವಿಸ್ತರಿಸಲಾಗಿದೆ.ಲೋಡಿಂಗ್ ಅನ್ಲೋಡಿಂಗ್, ಹಮಾಲಿ ಕೂಲಿ ಖರ್ಚು ಕಡಿಮೆಯಾಗಲಿದೆ.ಇಂತಹ ರೈತ ಪರ ಕಾಯಿದೆ ತಂದಿರುವುದು ನಿಜಕ್ಕೂ ಶ್ಲಾಘನೀಯ.ಈ ಕಾಯಿದೆಯಿಂದ ರೈತರಲ್ಲಿ ಸ್ಪರ್ಧಾ ಮನೋಭಾವ ಹುಟ್ಟಿ ಉತ್ತಮ ಫಸಲನ್ನು ಬೆಳೆಯಲು ಅವಕಾಶವಾಗಲಿದೆ.ಕೃಷಿ ಪದವೀಧರರು ಸಾಫ್ಟ್ ಅಗ್ರಿಗಳು ಹಾರ್ಡ್ ಅಗ್ರಿಯತ್ತ ಆಸಕ್ತರಾಗಲಿದ್ದಾರೆ. ಕೃಷಿಕರ ಸಂಖ್ಯೆಯೂ ಈಗ ಹೆಚ್ಚಾಗಿದೆ.ಕಂಪೆನಿಗಳ ಜೊತೆ ಒಪ್ಪಂದ ಮಾಡಿಕೊಳ್ಳಬಹುದು.ಇದರಿಂದ ಉತ್ತಮ ಗುಣಮಟ್ಟದ ಬೆಳೆ ಬೆಳೆಯಬಹುದು‌.

ಯಂತ್ರೋಪಕರಣಗಳಿಗಾಗಿ ಒಪ್ಪಂದ ಮಾಡಿಕೊಳ್ಳಬಹುದು‌.ಜಮೀನಿನ ವಿಷಯದಲ್ಲಿ ಈ ಒಪ್ಪಂದವಲ್ಲ.ಬೆಳೆಗಳಿಗಾಗಿ ಒಪ್ಪಂದ‌.ವಿಪಕ್ಷಗಳು ವಿರೋಧಿಸಬೇಕು ಎನ್ನುವ ಕಾರಣಕ್ಕೆ ವಿರೋಧಿಸುತ್ತಿವೆ‌‌.ಸ್ವಾಮಿನಾಥನ್ ವರದಿ ತಂದಿದ್ದು ಮೋದಿ ಸರ್ಕಾರ.ರೈತರಿಗೆ ದೊಡ್ಡ ಪ್ರಮಾಣದಲ್ಲಿ ಲಾಭವಾಗಲಿದೆ.ರೈತರಿಗೆ ದೊಡ್ಡಪ್ರಮಾಣದಲ್ಲಿ ಲಾಭವಾಗಲಿದೆ.ಅಂತರಾಷ್ಟ್ರೀಯ ಮಟ್ಟದಲ್ಲಿಯೂ ರಾಗಿ ಖರೀದಿಯಾಗುತ್ತಿದೆ.ಈ ಕಾಯಿದೆಯಿಂದ ಮಧ್ಯವರ್ತಿಗಳಿಗಷ್ಟೆ ತೊಂದರೆ.ದಳ್ಳಾಳ್ಳಿಗಳೊಂದಿಗೆ ಸಹಕರಿಸುತ್ತಿರುವವರಿಗೆ ತೊಂದರೆ.ಈ ಪ್ರತಿಭಟನೆ ರೈತರದ್ದಲ್ಲ.ರೈತ ಹೋರಾಟಗಾರರದ್ದು ಎಂದರು.
ಈ ಸಂದರ್ಭದಲ್ಲಿ ರೈತ ಮೋರ್ಚಾ ಅಧ್ಯಕ್ಷ ಶಿವಪ್ರಸಾದ್ ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!