Friday, July 1, 2022

Latest Posts

ಕೃಷಿ ಕ್ಷೇತ್ರಕ್ಕೆ 16 ಅಂಶಗಳ ಕೊಡುಗೆ

ಹೊಸದಿಲ್ಲಿ: ಕೇಂದ್ರ ಸರ್ಕಾರದ 20-21ನೇ ಸಾಲಿನ ಬಜೆಟ್ ನಲ್ಲಿ ಕೃಷಿ ಕ್ಷೇತ್ರಕ್ಕೆ ಬಂಪರ್ ಕೊಡುಗೆ ನೀಡಿದ್ದು, ರೈತರ ಅಭಿವೃದ್ಧಿಗಾಗಿ 16 ಅಂಶಗಳನ್ನು ಘೋಷಿಸಲಾಗಿದೆ.

ನರೇಗಾ ಯೋಜನೆಯಡಿ ಜೇನು ಕೃಷಿಗೆ ಪ್ರೋತ್ಸಾಹ, ಕೃಷಿ ಉತ್ಪನ್ನಗಳಿಗೆ ಇ ಮಾರುಕಟ್ಟೆ ಸ್ಥಾಪನೆ, ಜಾನುವಾರು ಕಾಲು ಬಾಯಿ ರೋಗ ತಡೆಗೆ ಕ್ರಮ ಕೈಗೊಳ್ಳುವುದರ ಕುರಿತು ಬಜೆಟ್ ನಲ್ಲಿ ತಿಳಿಸಲಾಗಿದೆ.
ನೈಸರ್ಗಿಕ ಕೃಷಿಗಾಗಿ ರಾಷ್ಟ್ರೀಯ ಮಾರುಕಟ್ಟೆ, ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ ಜಾರಿ, ರೈತರ ಅನುಕೂಲಕ್ಕಾಗಿ ಕೃಷಿ ರೈಲ್ ಯೋಚನೆ ಜಾರಿಗೊಳಿಸುವುದರ ಬಗ್ಗೆ ಬಜೆಟ್ ನಲ್ಲಿ ತಿಳಿಸಲಾಗಿದೆ.
ಈ ಬಾರಿ ಬಜೆಟ್ ನಲ್ಲಿ ಕೃಷಿ ಮತ್ತು ನೀರಾವರಿ ಗೆ 2.83 ಕೋಟಿ ರೂ. ಮೀಸಲಿರಿಸಲಾಗಿದೆ. ಕೃಷಿ ಉಡಾನ್ ಯೋಚನೆ, ಮುದ್ರಾ, ನಬಾರ್ಡ್ ಯೋಜನೆಯಡಿ ರೈತರಿಗೆ ಸಾಲ ನೀಡಲಾಗುವುದು.
ರೈತ ಮಹಿಳೆಯರಿಗೆ ನೂತನ ಧಾನ್ಯ ಲಕ್ಷ್ಮೀ ಜಾರಿಗೊಳಿಸಲು ಬಜೆಟ್ ನಲ್ಲಿ ಆದ್ಯತೆ ನೀಡಲಾಗಿದೆ. ಪ್ರಧಾನಮಂತ್ರಿ ಫಸಲ್ ಭೀಮ್ ಯೋಜನೆಯಿಂದ 6.11 ಕೋಟಿ ರೈತರಿಗೆ ಅನುಕೂಲವಾಗಲಿದೆ ಎಂದು ಬಜೆಟ್ ನಲ್ಲಿ ತಿಳಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss