Wednesday, June 29, 2022

Latest Posts

ಕೃಷಿ ಮಸೂದೆ ಬಗ್ಗೆ ಜನರಿಗೆ ಪ್ರತಿಪಕ್ಷಗಳಿಂದ ತಪ್ಪು ತಿಳುವಳಿಕೆ: ರಾಜ್ಯಸಭಾ ಸದಸ್ಯ ಕಡಾಡಿ ಹೇಳಿಕೆ 

ಬಾಗಲಕೋಟೆ: ಕೇಂದ್ರ ಸರ್ಕಾರ ತಂದಿರುವ ನೂತನ ಮೂರು ಕೃಷಿ ಮಸೂದೆಗಳ ಬಗ್ಗೆ ತಪ್ಪು ತಿಳುವಳಿಕೆಯನ್ನು ಪ್ರತಿಪಕ್ಷಗಳು ಮೂಡಿಸುತ್ತಿವೆ  ಎಂದು ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.

ನಗರಕ್ಕೆ ಭೇಟಿ‌ ನೀಡಿದ ಸಂದರ್ಭದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಿಜವಾದ ರೈತರನ್ನ ಕೆಲವು ರಾಜಕೀಯ ಪಕ್ಷಗಳು ದಾರಿ ತಪ್ಪಿಸುತ್ತಿವೆ.ಈ ಮಸೂದೆಗಳು ರೈತರಿಗೆ ಅನುಕೂಲವಾಗಿರುವ ಹಿನ್ನೆಲೆಯಲ್ಲಿ ಇವುಗಳ ಕುರಿತು ರೈತರಿಗೆ ಮನವರಿಕೆ ಮಾಡಲು ಗ್ರಾಮಸಭೆಗಳನ್ನ ನಡೆಸಲಾಗುತ್ತದೆ ಎಂದರು.

ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ರೈತರ  ಹಿತ ದೃಷ್ಠಿಯಿಂದ ಈ ಮಸೂದೆಗಳಿಗೆ ತಿದ್ದುಪಡಿ ತಂದಿದೆ. ಕಾಂಗ್ರೆಸ್ ನವರಿಗೆ ನಮ್ಮ ಸರ್ಕಾರದ ವಿರುದ್ದ ಯಾವುದೇ ವಿಷಯ ಇರಲಿಲ್ಲ.ಈ ಮಸೂದೆಗಳ ತಿದ್ದುಪಡಿಯ ಬಗ್ಗೆ ನಿಜವಾದ ರೈತರಿಗೆ ದಾರಿ ತಪ್ಪಿಸಿ ಪ್ರತಿಭಟನೆ ಮಾಡುತ್ತಿವೆ.ಈ ಹಿಂದೆ ಕಾಂಗ್ರೆಸ್ ಕೂಡ ತನ್ನ ಪ್ರಣಾಳಿಕೆತಲ್ಲಿ ಈ ಮಸೂದೆಗಳ ತಿದ್ದುಪಡಿ‌ಮಾಡುವ ಬಗ್ಗೆ ಘೋಷಣೆ ಮಾಡಿತ್ತು.ಈಗ ಅವರಿಗೆ ಯಾವುದೇ ವಿಷಯಗಳು ಸಿಗದ ಕಾರಣ  ಈ ರೀತಿ ಪ್ರತಿಭಟನೆ ನಡೆಸುತ್ತಿವೆ ಎಂದು ದೂರಿದರು.

ಈ ಕುರಿತು ನಿಜವಾದ ರೈತರುಗೆ ಮನವರಿಕೆ ಮಾಡಿಕೊಡಲಾಗುವುದು ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss