ಹೊಸದಿಲ್ಲಿ: ಕೊರೋನಾ ಸೋಂಕಿನಿಂಗಾಗುವ ಆರ್ಥಕ ಸಂಕಷ್ಟಕ್ಕೆ ಕೇಂದ್ರ ಸರ್ಕಾರ ಘೋಷಿಸಿದ 20 ಲ.ಕೋ.ರೋಗಳ ಪ್ಯಾಕೇಜ್ ಕುರಿತು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ವಿವರಿಸಿದರು.
ಈ ಮೂರನೆ ಹಂತದ ಪ್ಯಾಕೇಜ್ ನಲ್ಲಿ ಕೃಷಿ, ಪಶುಸಂಗೋಪನೆ, ಮೀನುಗಾರಿಕೆಗೆ ಹೆಚ್ಚು ಒತ್ತು ನೀಡಲಾಗಿದೆ. ಅಲ್ಪವೃದ್ಧಿ ಬೆಳೆ ಸಾಲಗಳಿಗೆ ಆದ್ಯತೆ ನೀಡಲಾಗಿದ್ದು, ದೀರ್ಘಾವಧಿಯ ಕೃಷಿ ಮೂಲಸೌಕರ್ಯದಲ್ಲಿ ಹೂಡಿಕೆಗೂ ಗಮನ ಹರಿಸಲಾಗಿದೆ.
- ಕೃಷಿ ಮೂಲಸೌಕರ್ಯಕ್ಕಾಗಿ 1 ಲಕ್ಷ ಕೋಟಿ ರೂ.ಗಳ ನಿಧಿ ಮೀಸಲಿರಿಸಲಾಗಿದೆ.
- ಗಿಡಮೂಲಿಕೆ ಪ್ರೋತ್ಸಾಹಿಸಲು 4 ಸಾವಿರ ಕೋಟಿ.ರೂ. ಮೀಸಲು.
- ಪಶುಸಂಗೋಪನೆ ಮೂಲ ಸೌಕರ್ಯಕ್ಕಾಗಿ 15ಸಾವಿರ ಕೋಟಿ ರೂ.
- ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ ಮೂಲಕ ಮೀನುಗಾರಿಕೆಗೆ 20 ಸಾವಿರ ಕೋಟಿ.ರೂ.
ಕೃಷಿ ಮೂಲ ಸೌಕರ್ಯ ಅಭಿವೃದ್ಧಿ: ರೈತರ ಅನುಕೂಲಕ್ಕಾಗಿ ಕೃಷಿ ಮೂಲ ಸೌಕರ್ಯ ಅಭಿವೃದ್ಧಿಗಾಗಿ 1 ಲಕ್ಷ ಕೋಟಿ ಮೀಸಲಿರಿಸಲಾಗಿದೆ.
- ಕೃಷಿ ಉತ್ಪನ್ನಗಳ ಸಾಗಾಟಕ್ಕೆ 10 ಸಾವಿರ ಕೋಟಿ
- ಕೇವಲ ಟೊಮೆಟೊ, ಈರುಳ್ಳಿ, ಆಲುಗಡ್ಡೆಗೆ ಸೀಮಿತವಾಗಿದ್ದ ಆಪರೇಷನ್ ಗ್ರೀನ್ ಎಲ್ಲಾ ಹಣ್ಣುಗಳು, ತರಕಾರಿಗಳಿಗೆ ವಿಸ್ತರಿಸಲಾಗಿದ್ದು, ಇದಕ್ಕೆ 500 ಕೋಟಿ ರೂ. ಮೀಸಲು.
- ಜೇನು ಸಾಗಾಣೆಗಾಗಿ 500 ಕೋಟಿ ರೂ, 2 ಲಕ್ಷ ಮಂದಿಗೆ ಅನುಕೂಲ
- ಪ್ರಾದೇಶಿಕ ಮಂಡಿಗಳ ಮೂಲಕ ಔಷಧೀಯ ಸಕ್ಯಗಳಿಕೆ ಪ್ರೋತ್ಸಾಹ
- ರಾಷ್ಟ್ರೀಯ ಔಷಧೀಯ ಸಸ್ಯಗಳ ಮಂಡಳಿ(National Medical Plants Board)ಯಿಂದ 800 ಹೆಕ್ಟೇರ್ ನಲ್ಲಿ ಔಷಧೀಯ ಸಸ್ಯಗಳ ಕೃಷಿ
- ರೈತರಿಗೆ ನಬಾರ್ಡ್ ನಿಂದ 30 ಸಾವಿರ ಕೋಟಿ ರೂ.ಗಳ ಹೆಚ್ಚುವರಿ ಬಂಡವಾಳ. 3 ಕೋಟಿ ಸಣ್ಣ ಮತ್ತು ಮಧ್ಯಮ ಪ್ರಮಾಣದ ರೈತರಿಗೆ ಅನುಕೂಲ.
- ಸಣ್ಣ ಆಹಾರ ಉದ್ಯಮ(Micro Food Enterprises)ಕ್ಕೆ 10 ಸಾವಿರ ಕೋಟಿ ವೀಸಲು
- ಮೀನುಗಾರಿಕೆಗೆ 20 ಸಾವಿರ ಕೋಟಿ ನೆರವು
- ಮತ್ಸೋದ್ಯಮದಲ್ಲಿ 55 ಲಕ್ಷ ಮಂದಿಗೆ ಉದ್ಯೋಗ