ಕಾಸರಗೋಡು: ಜಿಲ್ಲೆಯ ಕೃಷಿಕರು ಬೆಳೆಯುವ ಉತ್ಪನ್ನಗಳನ್ನು ಗ್ರಾಹಕರಿಗೆ ನೇರವಾಗಿ ತಲುಪಿಸುವ ನಿಟ್ಟಿನಲ್ಲಿ ಸುಭಿಕ್ಷ ಕೇರಳ ಮಿಷನ್ ವತಿಯಿಂದ ಸಿದ್ಧಪಡಿಸಲಾದ ಸುಭಿಕ್ಷ ಕೇರಳಂ (ಮಾರಾಟ ಮತ್ತು ಖರೀದಿ) ಆಪ್ ಜನರ ಗಮನ ಸೆಳೆಯುತ್ತಿದೆ. ಈ ಮೂಲಕ ಕಾಸರಗೋಡು ಜಿಲ್ಲೆಯ ಕೃಷಿ ವಲಯದ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ.
ಜಿಲ್ಲೆಯಲ್ಲಿ ಕೃಷಿ ನಡೆಸುವ ಯಾರಿಗೂ ಈ ಆಪ್ ಮೂಲಕ ತಾವು ಬೆಳೆಯುವ ತೆಂಗಿನಕಾಯಿ, ತರಕಾರಿ, ಹಾಲು, ಮೊಟ್ಟೆ ಸಹಿತ ಇನ್ನಿತರ ಉತ್ಪನ್ನಗಳನ್ನು ಮಾರಾಟ ನಡೆಸಬಹುದು. ಮಧ್ಯವರ್ತಿಗಳ ಅಗತ್ಯವಿಲ್ಲದೆ ಕೃಷಿಕರು ಮತ್ತು ಗ್ರಾಹಕರ ನಡುವೆ ನೇರ ಸಂಪರ್ಕ ಸಾಧಿಸುವ ನಿಟ್ಟಿನಲ್ಲಿ ಮೊಬೈಲ್ ಫೋನ್, ವಾಟ್ಸಪ್ಪ್ ನಂಬರ್ ಗಳ ಮೂಲಕ ಸಂಪರ್ಕಿಸಲು ಹಾಗೂ ಉತ್ಪನ್ನಗಳ ಬಗ್ಗೆ ಮಾಹಿತಿ, ಬೆಲೆ ನಿಗದಿಯನ್ನೂ ತಿಳಿಯಲು ಸಾಧ್ಯವಿದೆ. ಗೂಗಲ್ ಪ್ಲೇ ಸ್ಟೋರ್ ಮೂಲಕ ಸುಭಿಕ್ಷ ಕೆಎಸ್ ಡಿ ಎಂಬ ಈ ಆಪ್ ನ್ನು ಉಚಿತವಾಗಿ ಡೌನ್ ಲೋಡ್ ಮಾಡಬಹುದು.