Thursday, August 11, 2022

Latest Posts

ಕೃಷಿ ವಲಯದ ಸಮಗ್ರ ಅಭಿವೃದ್ಧಿ: ಕೇಂದ್ರದಿಂದ ಕೇರಳಕ್ಕೆ 2520 ಕೋಟಿ ರೂ. ಅನುದಾನ

ಕಾಸರಗೋಡು: ಕೃಷಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಕೇಂದ್ರ ಸರಕಾರವು ಕಳೆದ ಮೇ 15ರಂದು ಘೋಷಿಸಿದ್ದ ಒಂದು ಲಕ್ಷ ಕೋಟಿ ರೂಪಾಯಿಗಳ ಯೋಜನೆಯಲ್ಲಿ ಕೇರಳಕ್ಕೆ 2520 ಕೋಟಿ ರೂಪಾಯಿ ಮಂಜೂರಾಗಿದೆ. ಈ ಮೂಲಕ ಕಾಸರಗೋಡು ಸೇರಿದಂತೆ ರಾಜ್ಯದ 14 ಜಿಲ್ಲೆಗಳ ಕೃಷಿ ವಲಯದ ಸಮಗ್ರ ಪ್ರಗತಿಗೆ ಯೋಜನೆ ರೂಪಿಸಲಾಗಿದೆ.
ಕೃಷಿ ಕ್ಷೇತ್ರದ ಮೌಲ್ಯವರ್ಧನೆ, ಉತ್ಪಾದನೆ ಹಾಗೂ ಮೂಲಭೂತ ಸೌಕರ್ಯ ಇತ್ಯಾದಿಗಳನ್ನು ಒದಗಿಸಲು ಈ ಅನುದಾನವನ್ನು ವಿನಿಯೋಗಿಸಬೇಕಾಗಿದೆ. ಮೂರು ವರ್ಷಗಳ ಅವಧಿಯಲ್ಲಿ ಹಂತ ಹಂತವಾಗಿ ಕೇಂದ್ರ ಸರಕಾರವು ಈ ಮೊತ್ತವನ್ನು ನೀಡಲಿದೆ. ಈ ಮಧ್ಯೆ ಕೃಷಿಕರಿಗೆ ಹಾಗೂ ಕೃಷಿ ಸಂಘಟನೆಗಳಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಒದಗಿಸುವ ವ್ಯವಸ್ಥೆಯೂ ಈ ಯೋಜನೆಯಲ್ಲಿ ಸೇರಿದೆ. ವಿವಿಧ ಬ್ಯಾಂಕ್ ಗಳ ಮೂಲಕ ಈ ಸಾಲ ವಿತರಿಸಲು ನಿರ್ಧರಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss