Wednesday, August 17, 2022

Latest Posts

ಕೃಷ್ಣನ ಅನುಗ್ರಹ ನಮ್ಮೆಲ್ಲರ ಮೇಲೆ ಇರಲಿ: ಶುಭಾಶಯ ಕೋರಿದ ಸಚಿವ ಸುಧಾಕರ್

ಬೆಂಗಳೂರು: ರಾಜ್ಯಾದ್ಯಂದ ಶ್ರೀಕೃಷ್ಣ ಜನ್ಮಾಷ್ಟಮಿ ಸರಳ,ಸಂಭ್ರಮದಿಂದ ಆಚರಿಸುತ್ತಿದ್ದು,ಈ ಜನ್ಮಾಷ್ಟಮಿಯಂದು ಕೃಷ್ಣನ ಅನುಗ್ರಹ ನಮ್ಮೆಲ್ಲರ ಮೇಲಿರಲಿ ಎಂದು ಆರೋಗ್ಯ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಶುಭಾಶಯ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಎಲ್ಲರಿಗೂ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು. ಬಾಲ್ಯದಲ್ಲಿ ಮುದ್ದುಕೃಷ್ಣನಾಗಿ,ತಾರುಣ್ಯದಲ್ಲಿ ಮುರಳಿ ಮೋಹನನಾಗಿ,ಧರ್ಮಯುದ್ಧದಲ್ಲಿ ಪಾರ್ಥ ಸಾರಥಿಯಾಗಿ, ಭಗವದ್ಗೀತೆ ಬೋಧಿಸಿದ ಗೀತಾಚಾರ್ಯನಾಗಿ ನಮ್ಮೆಲ್ಲರ ಆರಾಧ್ಯ ದೈವವಾಗಿರುವ ಶ್ರೀಕೃಷ್ಣ ಪರಮಾತ್ಮನ ಅನುಗ್ರಹ ನಮ್ಮ ಮೇಲೆ ಸದಾ ಎಂದು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!