Monday, September 28, 2020
Monday, September 28, 2020

Latest Posts

ಅಶೋಕ್ ಗಸ್ತಿ ಅವರ ನಿವಾಸಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಭೇಟಿ

ರಾಯಚೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು  ಇತ್ತೀಚೆಗೆ ನಿಧನರಾದ ರಾಜ್ಯಸಭಾ ಸದಸ್ಯ ದಿವಂಗತ ಅಶೋಕ್ ಗಸ್ತಿ ಅವರ ರಾಯಚೂರು  ನಿವಾಸಕ್ಕೆ ಇಂದು ಭೇಟಿ ನೀಡಿ, ಅವರ ಮಡದಿ ಹಾಗೂ ಕುಟುಂಬಸ್ಥರಿಗೆ...

ಇಂಡಿಯಾ ಗೇಟ್ ನಲ್ಲಿ ಪ್ರತಿಭಟನೆ| ಐದು ಮಂದಿ ಪ್ರತಿಭಟನಾಕಾರರ ಬಂಧನ

ಹೊಸದಿಲ್ಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಕೃಷಿ ಮಸೂದೆ ವಿರೋಧಿಸಿ ಟ್ರ್ಯಾಕ್ಟರ್ ಸುಟ್ಟು ಹಾಕಿದೆ ಐವರನ್ನು ಪೊಲೀಸರು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರು. ಇಂದು ದೆಹಲಿಯ ಇಂಡಿಯಾ ಗೇಟ್ ಸಮೀಪ ನಡೆದ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ...

ಕರ್ನಾಟಕ ಬಂದ್: ಸಿಎಂ ಯಡಿಯೂರಪ್ಪ ತುರ್ತು ಸುದ್ದಿಗೋಷ್ಠಿ

ಬೆಂಗಳೂರು: ಕೃಷಿ ಮತ್ತು ಎಪಿಎಂಸಿ ತಿದ್ದುಪಡಿ ಕಾಯ್ದೆಗಳು ಸೇರಿ ವಿವಿಧ ತಿದ್ದುಪಡಿ ಕಾಯ್ದೆ ವಿರೋಧಿಸಿ ಇಂದು ಕರ್ನಾಟಕ ಬಂದ್ ನಡೆಯುತ್ತಿದ್ದು, ಸಿಎಂ ಬಿ.ಎಸ್. ಯಡಿಯೂರಪ್ಪ ತುರ್ತು ಸುದ್ದಿಗೋಷ್ಟಿ ಕರೆದಿದ್ದಾರೆ. ರಾಜ್ಯಾದ್ಯಂತ ರೈತರ ಪ್ರತಿಭಟನೆ ನಡೆಯುತ್ತಿದ್ದು,...

ಕೃಷ್ಣಾ ಪ್ರವಾಹದ ನಡುಗಡ್ಡೆಯಲ್ಲಿ ಸಿಲುಕಿದ್ದ ಕುರಿಗಾಹಿ: ಸುರಕ್ಷಿತವಾಗಿ ದಡ ಸೇರಿಸಿದ ಎನ್‌ಡಿಆರ್‌ಎಫ್ ಸಿಬ್ಬಂದಿಗಳು

ಯಾದಗಿರಿ : ಹುಣಸಗಿ ಸಮೀಪದ ನಾರಾಯಣಪೂರ ಛಾಯಾ ಭಗವತಿ ಮುಂಭಾಗದ ನಡುಗಡ್ಡೆ (ಎಡದನ ಮಾಳಿ) ಗೆ ಭಾನುವಾರ ಬೆಳಿಗ್ಗೆ ಯಾಂತ್ರಿಕ ಬೋಟ್ ಮೂಲಕ ತೆರಳಿದ ಹೈದರಾಬಾದ್‌ನ ಎನ್‌ಡಿಆರ್‌ಎಫ್ ತಂಡದ ಸಿಬ್ಬಂದಿಗಳು ಕುರಿಗಾಯಿ ಟೋಪಣ್ಣ ರಾಠೋಡ ಅವರನ್ನು ಸುರಕ್ಷಿತವಾಗಿ ಕರೆ ತರುವಲ್ಲಿ ಯಶಸ್ವಿಯಾಗಿದ್ದಾರೆ.
ಬಸವಸಾಗರ ಜಲಾಶಯದ 18 ಗೇಟ್‌ಗಳ ಮೂಲಕ ಕೃಷ್ಣಾ ನದಿಗೆ 2.20 ಲಕ್ಷ ಕ್ಯೂಸೆಕ್ ಭಾರಿ ನೀರನ್ನು ಹರಿಸಿದ್ದ ಪ್ರಯುಕ್ತ ಪ್ರವಾಹ ಉಂಟಾಗಿ ಛಾಯಾ ಭಗವತಿ ಮುಂಭಾಗದ ನಡುಗಡ್ಡೆ (ಎಡದನ ಮಾಳಿ) ಎಂಬಲ್ಲಿ ಟೋಪಣ್ಣ ರಾಠೋಡ ಎಂಬ ಐ.ಬಿ.ತಾಂಡಾದ ಕುರಿಗಾಯಿ ಶುಕ್ರವಾರ ಬೆಳಿಗ್ಗೆಯಿಂದ 230 ಕುರಿ ಹಾಗೂ 4 ನಾಯಿಯೊಂದಿಗೆ ಹೊರ ಬಾರದೆ ಎರಡು ದಿನಗಳ ಕಾಲ ಸಿಕ್ಕಿ ಹಾಕಿಕೊಂಡಿದ್ದ. ಈ ಘಟನೆಗೆ ಜಿಲ್ಲಾಡಳಿತ ತಲೆ ಬಿಸಿ ಮಾಡಿತ್ತು.
ಹೈದರಾಬಾದಿನ ಎನ್‌ಡಿಆರ್‌ಎಫ್‌ನ 16 ಜನರ ತಂಡ ಎರಡು ಯಾಂತ್ರಿಕ ಬೋಟ್ ಬಳಸಿ ನದಿ ನೀರಲ್ಲಿ ಸತತ 4 ಗಂಟೆ ಕಾರ್ಯಾಚರಣೆ ನಡೆಸಿ ಕುರಿಗಾಯಿ ಹಾಗೂ ನಾಯಿಯನ್ನು ಮಾತ್ರ ದಡಕ್ಕೆ ಸುರಕ್ಷಿತವಾಗಿ ದಡಕ್ಕೆ ಕರೆ ತಂದರು. 230 ಕುರಿಗಳು ನಡುಗಡ್ಡೆಯಲ್ಲೇ ಇದ್ದು ನೀರು ಪೂರ್ಣ ಕಡಿಮೆಯಾದ ಮೇಲೆ ಕರೆ ತರಲು ಶಾಸಕ ರಾಜುಗೌಡರ ಸಮ್ಮುಖದಲ್ಲಿ ಅಧಿಕಾರಿಗಳು ನಿರ್ಧರಿಸಿದರು. ನಡುಗಡ್ಡೆಯಲ್ಲಿ ಇದ್ದರೂ ಕುರಿಗಳಿಗೆ ಯಾವೂದೇ ಅಪಾಯ ಇಲ್ಲ.
ವಿಷಯ ತಿಳಿದ ಸುರಪುರ ಶಾಸಕ ರಾಜೂಗೌಡ ಅವರು ಶನಿವಾರ ಸಂಜೆ ಘಟನಾ ಸ್ಥಳಕ್ಕೆ ತೆರಳಿ ಅವಲೋಕಿಸಿ ಜಿಲ್ಲಾಧಿಕಾರಿಗಳ ಜತೆ ದೂರವಾಣಿ ಮೂಲಕ ಮಾತನಾಡಿ ಎನ್ ಡಿಆರ್ ಎಫ್ ತಂಡ ಕರೆತರಲು ನಿರ್ಧರಿಸಿದ್ದರು. ಭಾನುವಾರ ಬೆಳಿಗ್ಗೆ ಮತ್ತೆ ಆಗಮಿಸಿದ ರಾಜೂಗೌಡ ಕಾರ್ಯಾಚರಣೆ ಮುಗಿಯುವವರೆಗೂ ಸ್ಥಳದಲ್ಲೇ ಇದ್ದು ಸಲಹೆ ಸೂಚನೆ ನೀಡಿದ್ದು ಗಮನ ಸೆಳೆಯಿತು. ಜೀವದ ಹಂಗು ತೊರೆದು ನೀರಿಗಿಳಿದು ಕಾರ್ಯಾಚರಣೆ ನಡೆಸಿದ ಸಿಬ್ಬಂದಿಗಳನ್ನು ಶಾಸಕ ರಾಜೂಗೌಡ ಅವರು ಅಭಿನಂದನೆ ಸಲ್ಲಿಸಿ ಸನ್ಮಾನಿಸಿದರು.
ಶುಕ್ರವಾರ ಮನೆಯಿಂದ ಮಧ್ಯಾನ ಊಟಕ್ಕೆ ಮಾತ್ರ ಕುರಿಗಾಯಿ ಮನೆಯಿಂದ ಬುತ್ತಿ ತಂದಿದ್ದ. ಸಂಜೆ ಮನೆಗೆ ಮರಳಲು ಅಸಾಧ್ಯವಾಗದ ಪರಿಣಾಮ ಬಾರೀ ಸಂಕಷ್ಟದಲ್ಲಿ ಸಿಲುಕಿದ ಟೋಪಣ್ಣ ಭಾನುವಾರ ಮಧ್ಯಾನವರೆಗೂ ಉಪವಾಸ ಇದ್ದು ಹಸಿವು ನೀಗಿಸಿಕೊಳ್ಳಲು ಕುರಿ ಹಾಲನ್ನೇ ಕುಡಿದು ರಕ್ಷಣೆಗೆ ದೇವರ ಮೊರೆ ಹೋಗಿದ್ದ.
ಈ ವೇಳೆ ಮಣಿಕಂಠನಾಯಕ, ಎನ್‌ಡಿಆರ್‌ಎಫ್ ಅಧಿಕಾರಿ ಸುನೀಲಕುಮಾರ, ಡಿಎಫ್‌ಒ ಹಣಮಗೌಡ, ಡಾ.ಬಿ.ಎಂ.ಹಳ್ಳಿಕೋಟೆ, ಹುಣಸಗಿ ತಹಸೀಲ್ದಾರ ವಿನಯಕುಮಾರ ಪಾಟೀಲ್, ಎಫ್‌ಎಸ್‌ಒ ಪ್ರಮೋದ ವಾಲಿ, ಅಮರಣ್ಣ ಹುಡೇದ, ಬಿಜೆಪಿ ತಾಲೂಕು ಅಧ್ಯಕ್ಷ ಮೇಲಪ್ಪ ಗುಳಗಿ, ಉಪ-ತಹಸೀಲ್ದಾರ ಮಹಾದೇವಪ್ಪಗೌಡ ಬಿರಾದಾರ, ಪಿಡಿಒ ಶರಣಬಸವ ಬಿರಾದಾರ, ಕಂದಾಯ ನಿರೀಕ್ಷಕ ಬಸವರಾಜ ಬಿರಾದಾರ, ಪಿಎಸ್‌ಐಗಳಾದ ಅರ್ಜುನಪ್ಪ ಅರಕೇರಿ, ಬಾಶುಮೀಯ ಕೊಂಚೂರು, ಅಪ್ಪಣ್ಣ, ಶಿವು ಬಿರಾದಾರ, ಆಂಜನೇಯ ದೊರೆ, ರಮೇಶ ಕೋಳೂರು ಸೇರಿ ಅಗ್ನಿ ಶಾಮಕ ಧಳ, ಪೊಲೀಸ್, ಕಂದಾಯ ಇಲಾಖೆ ಸಿಬ್ಬಂದಿ ಇದ್ದರು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Latest Posts

ಅಶೋಕ್ ಗಸ್ತಿ ಅವರ ನಿವಾಸಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಭೇಟಿ

ರಾಯಚೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು  ಇತ್ತೀಚೆಗೆ ನಿಧನರಾದ ರಾಜ್ಯಸಭಾ ಸದಸ್ಯ ದಿವಂಗತ ಅಶೋಕ್ ಗಸ್ತಿ ಅವರ ರಾಯಚೂರು  ನಿವಾಸಕ್ಕೆ ಇಂದು ಭೇಟಿ ನೀಡಿ, ಅವರ ಮಡದಿ ಹಾಗೂ ಕುಟುಂಬಸ್ಥರಿಗೆ...

ಇಂಡಿಯಾ ಗೇಟ್ ನಲ್ಲಿ ಪ್ರತಿಭಟನೆ| ಐದು ಮಂದಿ ಪ್ರತಿಭಟನಾಕಾರರ ಬಂಧನ

ಹೊಸದಿಲ್ಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಕೃಷಿ ಮಸೂದೆ ವಿರೋಧಿಸಿ ಟ್ರ್ಯಾಕ್ಟರ್ ಸುಟ್ಟು ಹಾಕಿದೆ ಐವರನ್ನು ಪೊಲೀಸರು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರು. ಇಂದು ದೆಹಲಿಯ ಇಂಡಿಯಾ ಗೇಟ್ ಸಮೀಪ ನಡೆದ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ...

ಕರ್ನಾಟಕ ಬಂದ್: ಸಿಎಂ ಯಡಿಯೂರಪ್ಪ ತುರ್ತು ಸುದ್ದಿಗೋಷ್ಠಿ

ಬೆಂಗಳೂರು: ಕೃಷಿ ಮತ್ತು ಎಪಿಎಂಸಿ ತಿದ್ದುಪಡಿ ಕಾಯ್ದೆಗಳು ಸೇರಿ ವಿವಿಧ ತಿದ್ದುಪಡಿ ಕಾಯ್ದೆ ವಿರೋಧಿಸಿ ಇಂದು ಕರ್ನಾಟಕ ಬಂದ್ ನಡೆಯುತ್ತಿದ್ದು, ಸಿಎಂ ಬಿ.ಎಸ್. ಯಡಿಯೂರಪ್ಪ ತುರ್ತು ಸುದ್ದಿಗೋಷ್ಟಿ ಕರೆದಿದ್ದಾರೆ. ರಾಜ್ಯಾದ್ಯಂತ ರೈತರ ಪ್ರತಿಭಟನೆ ನಡೆಯುತ್ತಿದ್ದು,...

ಕೃಷಿ ಮಸೂದೆ ವಿರೋಧಿಸಿ ಇಂಡಿಯಾ ಗೇಟ್ ನಲ್ಲಿ ಟ್ರ್ಯಾಕ್ಟರ್‌ಗೆ ಬೆಂಕಿ ಹಚ್ಚಿದ ಯುವ ಕಾಂಗ್ರೆಸ್ ಕಾರ್ಯಕರ್ತರು

ಹೊಸದಿಲ್ಲಿ: ದೆಹಲಿಯ ಇಂಡಿಯಾ ಗೇಟ್ ಹತ್ತಿರ ಕೃಷಿ ಮಸೂದೆ ವಿರೋಧಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಟ್ರಾಕ್ಟರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳದಲ್ಲಿ ಬೆಂಕಿ ನಂದಿಸಲು ಪೊಲೀಸರ ತಂಡ...

Don't Miss

ಅಶೋಕ್ ಗಸ್ತಿ ಅವರ ನಿವಾಸಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಭೇಟಿ

ರಾಯಚೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು  ಇತ್ತೀಚೆಗೆ ನಿಧನರಾದ ರಾಜ್ಯಸಭಾ ಸದಸ್ಯ ದಿವಂಗತ ಅಶೋಕ್ ಗಸ್ತಿ ಅವರ ರಾಯಚೂರು  ನಿವಾಸಕ್ಕೆ ಇಂದು ಭೇಟಿ ನೀಡಿ, ಅವರ ಮಡದಿ ಹಾಗೂ ಕುಟುಂಬಸ್ಥರಿಗೆ...

ಇಂಡಿಯಾ ಗೇಟ್ ನಲ್ಲಿ ಪ್ರತಿಭಟನೆ| ಐದು ಮಂದಿ ಪ್ರತಿಭಟನಾಕಾರರ ಬಂಧನ

ಹೊಸದಿಲ್ಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಕೃಷಿ ಮಸೂದೆ ವಿರೋಧಿಸಿ ಟ್ರ್ಯಾಕ್ಟರ್ ಸುಟ್ಟು ಹಾಕಿದೆ ಐವರನ್ನು ಪೊಲೀಸರು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರು. ಇಂದು ದೆಹಲಿಯ ಇಂಡಿಯಾ ಗೇಟ್ ಸಮೀಪ ನಡೆದ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ...

ಕರ್ನಾಟಕ ಬಂದ್: ಸಿಎಂ ಯಡಿಯೂರಪ್ಪ ತುರ್ತು ಸುದ್ದಿಗೋಷ್ಠಿ

ಬೆಂಗಳೂರು: ಕೃಷಿ ಮತ್ತು ಎಪಿಎಂಸಿ ತಿದ್ದುಪಡಿ ಕಾಯ್ದೆಗಳು ಸೇರಿ ವಿವಿಧ ತಿದ್ದುಪಡಿ ಕಾಯ್ದೆ ವಿರೋಧಿಸಿ ಇಂದು ಕರ್ನಾಟಕ ಬಂದ್ ನಡೆಯುತ್ತಿದ್ದು, ಸಿಎಂ ಬಿ.ಎಸ್. ಯಡಿಯೂರಪ್ಪ ತುರ್ತು ಸುದ್ದಿಗೋಷ್ಟಿ ಕರೆದಿದ್ದಾರೆ. ರಾಜ್ಯಾದ್ಯಂತ ರೈತರ ಪ್ರತಿಭಟನೆ ನಡೆಯುತ್ತಿದ್ದು,...
error: Content is protected !!