Saturday, June 25, 2022

Latest Posts

ಕೆಂಚನಾಲದಲ್ಲಿ ವಿಜೃಂಭಣೆಯಿಂದ ನಡೆಯಿತು ಮಾರಿಕಾಂಬಾ ಜಾತ್ರೆ

ಹೊಸ ದಿಗಂತ ವರದಿ, ಶಿವಮೊಗ್ಗ:

ರಿಪ್ಪನ್‌ಪೇಟೆ ಸಮೀಪದ ಕೆಂಚನಾಲದಲ್ಲಿ ಪುರಾಣ ಪ್ರಸಿದ್ಧ ಶ್ರೀ ಮಾರಿಕಾಂಬಾ ದೇವಿಯ ಬೇಸಿಗೆ ಅದ್ದೂರಿ ಜಾತ್ರೆ ಬುಧವಾರ ವಿಜೃಂಭಣೆಯಿಂದ ಜರುಗಿತು.
ಬೆಳಗ್ಗೆ 6 ಘಂಟೆಯ ಸುಮಾರಿಗೆ ಮಸರೂರಿನ ತವರು ಮನೆಯಿಂದ ಮಾರಿಕಾಂಬಾ ದೇವಿಯ ಉತ್ಸವಮೂರ್ತಿಯನ್ನು ಮಂಗಳವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ಸಾಗಿ ಕೆಂಚನಾಲದ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಯಿತು. ಭಕ್ತರು ಹಣ್ಣು ಕಾಯಿ ಮಾಡಿಸಿ ಹರಕೆ ಒಪ್ಪಿಸಲು ಮುಂಜಾನೆಯಿಂದಲೇ ಸರತಿ ಸಾಲಿನಲ್ಲಿ ಬಂದು ಸೇವೆ ಸಲ್ಲಿಸಿದರು. ಜೋಗುತಿಯರು ದೇವಿಗೆ ಉಘೆ ಹೇಳುವುದರೊಂದಿಗೆ ಸಂಪ್ರದಾಯದಂತೆ ಪೂಜಾ ಕೈಂಕಾರ್ಯಗಳು ನೆರವೇರಿಸಿದರು. ಹರಕೆಹೊತ್ತು ಭಕ್ತಾದಿಗಳು ತಮ್ಮ ಇಷ್ಟಾರ್ಥಸಿದ್ಧಿಗಾಗಿ ಲಕ್ಕಿ, ಬೇವಿನ ಸೊಪ್ಪಿನಿಂದ ಮಾಡಿದ ಉಡುಗೆಯನ್ನು ತೊಟ್ಟು ಇಷ್ಟಾರ್ಥಸಿದ್ದಯ ಹರಕೆ ಸಲ್ಲಿಸಿದರು.
ರಸ್ತೆಯ ಇಕ್ಕೆಲಗಳಲ್ಲಿ ಹಣ್ಣುಕಾಯಿ, ಸಿಹಿತಿಂಡಿ, ಆಟಿಕೆ ಸಾಮಾನು ಹಾಗೂ ಗೃಹೋಪಯೋಗಿ, ಮಹಿಳೆಯರ ಶೃಂಗಾರ ಸಾಧನಗಳ ಅಂಗಡಿಗಳ ಸಾಲುಸಾಲು ಕಂಡುಬಂದಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss