Wednesday, August 10, 2022

Latest Posts

ಕೆಎಎಸ್ ಅಧಿಕಾರಿ ಡಾ.ಸುಧಾ ಆಪ್ತೆ ಮನೆಯಲ್ಲಿ ದಾಳಿ: 3.5 ಕೆ.ಜಿ ಚಿನ್ನ, 250 ಕೋಟಿ ಮೌಲ್ಯದ ಆಸ್ತಿ ಪತ್ರಗಳು ಪತ್ತೆ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ರಾಜ್ಯ ರಾಜಧಾನಿ ಬೆಂಗಳೂರಿನ ಜೈವಿಕ ತಂತ್ರಜ್ಞಾನ ಇಲಾಖೆಯ ಆಡಳಿತ ಅಧಿಕಾರಿ ಡಾ.ಸುಧಾ ಮನೆಯ ಮೇಲೆ ಶನಿವಾರ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದರು. ಈ ಬಳಿಕ ಮಾಹಿತಿಯನ್ನು ಆಧರಿಸಿ, ಕೆಎಎಸ್ ಅಧಿಕಾರಿ ಡಾ.ಸುಧಾ ಆಪ್ತೆ ರೇಣುಕಾ ಚಂದ್ರಶೇಖರ್ ಅವರ ಬ್ಯಾಟರಾಯನಪುರದ ಮನೆಯ ಮೇಲೆಯೂ ದಾಳಿ ಮಾಡಿದ್ದು, ದಾಳಿ ವೇಳೆ ಮನೆಯಲ್ಲಿ ಸಿಕ್ಕ ದಾಖಲೆ ನೋಡಿ ಎಸಿಬಿ ಅಧಿಕಾರಿಗಳು ಶಾಕ್ ಆಗಿದ್ದಾರೆ.
ಕೆಜಿಗಟ್ಟಲೇ ಚಿನ್ನ, ಬೆಳ್ಳಿಯನ್ನು ನೋಡಿದ ಅಧಿಕಾರಿಗಳೇ ಇಷ್ಟೊಂದು ಹೇಗೆ ಸಂಪಾದಿಸಿದ್ದು ಎನ್ನುವ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.
ಡಾ.ಸುಧಾ ಆಪ್ತೆ ರೇಣುಕಾ ಚಂದ್ರಶೇಖರ್ ನಈ ವೇಳೆ ಫ್ಲ್ಯಾಟ್‌ನಲ್ಲಿ ಚಿನ್ನಾಭರಣ, ನಗ-ನಾಣ್ಯ, ಕೋಟ್ಯಾಂತರ ರೂಪಾಯಿ ಮೌಲ್ಯದ ಆಸ್ತಿ ಪತ್ರಿಗಳು ಪತ್ತೆಯಾಗಿವೆ. ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿರುವಂತ ರೇಣುಕಾ ಚಂದ್ರಶೇಖರ್, ಮಣಬಾರದಷ್ಟು ಚಿನ್ನಾಭರಣ, ಕೋಟ್ಯಾಂತರ ರೂಪಾಯಿ ಆಸ್ತಿ ಪತ್ರಗಳು ಪತ್ತೆಯಾಗಿವೆ. ಸಿಕ್ಕ ಒಟ್ಟಾರೆ ಮೌಲ್ಯ 250 ಕೋಟಿಗೂ ಹೆಚ್ಚು ಎನ್ನಲಾಗುತ್ತಿದೆ.
ರೇಣುಕಾ ಪತಿ ಚಂದ್ರಶೇಖರ್ ನಿವೃತ್ತ DySPಯಾಗಿದ್ದು, ಪುತ್ರ ಎಇಇ ಆಗಿ ಕೆಲಸ ಮಾಡುತ್ತಿದ್ದಾರೆ. ಇನ್ನು ರೇಣುಕಾ 4 ಕಂಪನಿ ಹೆಸರಿನಲ್ಲಿ ರಿಯಲ್ ಎಸ್ಟೇಟ್ ಬ್ಯುಸಿನೆಸ್ ಮಾಡುತ್ತಿದ್ದಾರೆ. ಈ ಕಂಪೆನಿಯಲ್ಲಿ ಸುಧಾ ಬೇನಾಮಿ ಇದ್ಯಾ ಎಂದು ತನಿಖೆ ಮಾಡಲಾಗುತ್ತಿದೆ.
ಅಂದಹಾಗೇ ಕೆಎಎಸ್ ಅಧಿಕಾರಿ ಸುಧಾ ಆಪ್ತೆ ರೇಣುಕಾ ಮನೆಯಲ್ಲಿ ಬರೋಬ್ಬರಿ 3 ಕೆಜೆ ಚಿನ್ನ, 7 ಕೆಜಿ ಬೆಳ್ಳಿ, 36 ಲಕ್ಷ ನಗದು ಪತ್ತೆಯಾಗಿದೆ. ಇದಲ್ಲದೇ 250 ಕೋಟಿ ಆಸ್ತಿ ಪತ್ರ, 40 ಬ್ಯಾಂಕ್ ಗಳ ಪಾಸ್ ಬುಕ್, 4 ಕೋಟಿ ಡಿಪಾಸಿಟ್, ನೂರಕ್ಕೂ ಹೆಚ್ಚು ಚೆಕ್ ಗಳು, ಒಪ್ಪಂದ ಪತ್ರಗಳು ಪತ್ತೆಯಾಗುವ ಮೂಲಕ, ಎಸಿಬಿ ಅಧಿಕಾರಿಗಳನ್ನೇ ದಂಗಾಗಿಸಿದೆ. ಇದೀಗ ಎಣಿಕೆ ಕಾರ್ಯ ಮುಂದುವರೆದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss