Sunday, July 3, 2022

Latest Posts

ಕೆಎಸ್‌ಆರ್‌ಪಿ ಪರೀಕ್ಷೆಗೆ ಹಾಜರಾಗಿದ್ದ ನಕಲಿ ಪರೀಕ್ಷಾರ್ಥಿ ಬಂಧನ

ಹೊಸದಿಗಂತ ವರದಿ,ಚಿತ್ರದುರ್ಗ:

ಸಶಸ್ತ್ರ ಮೀಸಲು ಪಡೆಯ ಕಾನ್ಸ್ ಟೇಬಲ್ ಹುದ್ದೆಗೆ ನಗರದಲ್ಲಿ ಭಾನುವಾರ ನಡೆದ ಲಿಖಿತ ಪರೀಕ್ಷೆಗೆ ಬೇರೊಬ್ಬರ ಹೆಸರಿನಲ್ಲಿ ಹಾಜರಾಗಿದ್ದ ನಕಲಿ ಪರೀಕ್ಷಾರ್ಥಿಯನ್ನು ಚಿತ್ರದುರ್ಗ ಪೋಲಿಸರು ಬಂಧಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಸಿದ್ದಾರೂಢ (26) ಸಿಕ್ಕಿ ಬಿದ್ದಿರುವ ನಕಲಿ ಪರೀಕ್ಷಾರ್ಥಿ. ಭಾನುವಾರ ನಗರದ 22 ಕೇಂದ್ರಗಳಲ್ಲಿ ಕೆಎಸ್‌ಆರ್‌ಪಿ ಹುದ್ದೆಗಳ ಆಯ್ಕೆಗೆ ಬೆಳಿಗ್ಗೆ 11 ರಿಂದ 12.30 ವರೆಗೆ ಪರೀಕ್ಷೆ ಆಯೋಜಿಸಲಾಗಿತ್ತು. ಈ ವೇಳೆಯಲ್ಲಿ ಕೊಠಡಿಯ ಅಧೀಕ್ಷಕರು ಪರೀಕ್ಷಾ ಕೇಂದ್ರದಲ್ಲಿ ಹಾಜರಾಗಿದ್ದ ಅಭ್ಯರ್ಥಿಯ ದಾಖಲೆಗಳನ್ನು ಪರಿಶೀಲಿಸಿದಾಗ ಆತ ಮತ್ತೊಬ್ಬನ ಹೆಸರಿನಲ್ಲಿ ಪರೀಕ್ಷೆ ಬರೆಯಲು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಬಂದಿರುವುದು ತಿಳಿದುಬಂದಿದೆ.

ಸಂಶಯಗೊಂಡ ಅಧಿಕಾರಿಗಳು ಕೂಡಲೇ ಮೇಲಾಧಿಕಾರಿಗಳ ಗಮನಕ್ಕೆ ವಿಷಯ ಮುಟ್ಟಿಸಿದ್ದಾರೆ. ನಕಲಿ ಪರೀಕ್ಷಾರ್ಥಿಯನ್ನು ವಿಚಾರಣೆಗೆ ಒಳಪಡಿಸಿದಾಗ ಸತ್ಯಾಂಶ ಹೊರಬಿದ್ದಿದೆ. ಆರೋಪಿಯು ಸ್ವಯಂ ಪ್ರೇರಿತನಾಗಿ ಸ್ನೇಹಿತನಿಗೆ ನೆರವಾಗಲು ಬಂದಿದ್ದನು ಎನ್ನಲಾಗಿದೆ.
ಈತನಿಗೆ ಬೇರೊಬ್ಬರ ಹೆಸರಿನಲ್ಲಿ ಪರೀಕ್ಷೆ ಬರೆಯಲು ಪ್ರೇರೇಪಿಸುವ ಭೀಮ್ ಶಿ ಹುಲ್ಲೋಳ್, ಲಕ್ಷ್ಮಣ್ ಪರಣ್ಣನವರ್ ಹಾಗೂ ಸಂತೋಷ್ ಸಾಗರ್ ಇವರ ವಿರುದ್ಧ ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss