Sunday, August 14, 2022

Latest Posts

ಕೆಜಿಎಫ್-೨ ಅನಂತ್ನಾಗ್ ಔಟ್ ಪ್ರಕಾಶ್ ರಾಜ್ ಇನ್, ಏನಿದು ಚಿತ್ರದ ದೊಡ್ಡ ಬೆಳವಣಿಗೆ, ಯಾಕೆ ಗೊತ್ತಾ? ಇಲ್ಲಿದೆ ಮಹಿತಿ

ರಾಕಿಂಗ್  ಸ್ಟಾರ್ ಯಶ್ ಅಭಿನಯದ  ಬಹುನಿರೀಕ್ಷೆಯ ಸಿನಿಮಾ ಕೆಜಿಎಫ್ ಚಾಪ್ಟರ್-೨ ಇಂದಿನಿಂದ ಚಿತ್ರೀಕರಣಕ್ಕೆ ಮರು ಚಾಲನೆ ನೀಡಿದೆ. ಕೊರೊನಾ ವೈರಸ್ನಿಂದ ವಿರಾಮ ತೆಗೆದುಕೊಂಡಿದ್ದ ಚಿತ್ರತಂಡ ಮತ್ತೆ ಅಖಾಡಕ್ಕಿಳಿದಿದೆ. ಬ್ರೇಕ್ ಬಳಿಕ ಶೂಟಿಂಗ್ ಆರಂಭಿಸಿರುವ ಚಿತ್ರತಂಡ ಮಾಳವಿಕಾ ಅವರ ಪ್ರಮುಖ ದೃಶ್ಯಗಳನ್ನು ಸೆರೆಹಿಡಿಯುತ್ತಿದೆ. ಈ ದೃಶ್ಯದ ಫೋಟೋಗಳು ಬಹಿರಂಗವಾಗಿದ್ದು, ಮಾಳವಿಕಾ ಎದುರು ಅನಂತ್ ನಾಗ್ ಇಲ್ಲ, ಆ ಜಾಗಕ್ಕೆ ಪ್ರಕಾಶ್ ರಾಜ್ ಬಂದಿದ್ದಾರೆ. ಕೆಜಿಎಫ್ ಚಿತ್ರದಲ್ಲಿ ಮಾಳವಿಕಾ ಮತ್ತು ಅನಂತ್ ನಾಗ್ ನಡುವಿನ ದೃಶ್ಯಗಳು ಬಹಳ ಪ್ರಮುಖವಾಗಿದ್ದವು. ಆದ್ರೀಗ, ಚಾಪ್ಟರ್ ೨ನಲ್ಲಿ ಅನಂತ್ ನಾಗ್ ಇರಲ್ವಾ ಎಂಬ ಅನುಮಾನ ಮೂಡುತ್ತಿದೆ.

ಕೆಜಿಎಫ್ ಚಾಪ್ಟರ್ ೨ನಲ್ಲಿ ಹಲವು ಹೊಸ ಮುಖಗಳು ಕಾಣಲಿದೆ ಎನ್ನುವುದಕ್ಕೆ ಮತ್ತೊಂದು ಉದಾಹರಣೆ ಪ್ರಕಾಶ ರಾಜ್. ಈಗಾಗಲೇ ಅಧೀರನ ಪಾತ್ರಕ್ಕೆ ಸಂಜಯ್ ದತ್ ಆಗಮನವಾಗಿದೆ. ಈಗ ಇನ್ನೊಂದು ಮುಖ್ಯ ಪಾತ್ರಕ್ಕೆ ಪ್ರಕಾಶ್ ರಾಜ್ ಎಂಟ್ರಿಯಾಗಿದ್ದಾರೆ. ಈ ಮೂಲಕ ಚಾಪ್ಟರ್ ೨ ಬಗ್ಗೆ ಕುತೂಹಲ ಮತ್ತಷ್ಟು ಹೆಚ್ಚಾಗುತ್ತಿದೆ.

ಕೆಜಿಎಫ್ ಚಾಪ್ಟರ್ ೧ರಲ್ಲಿ ಮಾಳವಿಕಾ ಅವರಿಗೆ ಅನಂತ್ ನಾಗ್ ಕಥೆ ಹೇಳುತ್ತಿದ್ದರು. ಚಾಪ್ಟರ್ ೨ರಲ್ಲೂ ಆ ಕಥೆ ಮುಂದುವರಿಯಲಿದೆ. ಆದರೆ, ಈ ಚಿತ್ರದಲ್ಲಿ ಅನಂತ್ ನಾಗ್ ಮತ್ತು ಪ್ರಕಾಶ್ ರಾಜ್ ಇಬ್ಬರು ಇರಲಿದ್ದಾರೆ.

ಕೆಜಿಎಫ್ ಚಾಪ್ಟರ್ ೨ ಚಿತ್ರದಲ್ಲಿ ಅನಂತ್ ನಾಗ್ ಮತ್ತು ಪ್ರಕಾಶ್ ರಾಜ್ ಇಬ್ಬರೂ ಇರಲಿದ್ದು, ಇಬ್ಬರದ್ದು ಪ್ರಮುಖ ಪಾತ್ರಗಳು ಎಂದು ಹೇಳಲಾಗಿದೆ. ಎರಡನೇ ಭಾಗದಲ್ಲಿ ಸಂಜಯ್ ದತ್, ಪ್ರಕಾಶ್ ರಾಜ್, ರವೀನಾ ಟಂಡನ್ ಎಂಟ್ರಿಯಾಗಿದೆ. ಇವರ ಜೊತೆ ಮತ್ತಷ್ಟು ಸರ್ಪ್ರೈಸ್ ಪಾತ್ರಗಳು ಬಂದರೂ ಅಚ್ಚರಿಯಾಗಬೇಡಿ. ಸದ್ಯದ ಮಾಹಿತಿ ಮುಂದಿನ ವರ್ಷದ ಮೊದಲ ಹಬ್ಬ ಸಂಕ್ರಾಂತಿಗೆ ಕೆಜಿಎಫ್  ಚಾಪ್ಟರ್ ೨ ಪ್ರೇಕ್ಷಕರ ಮುಂದೆ ಬರಲಿದೆ ಎನ್ನಲಾಗುತ್ತಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss