ಬೆಂಗಳೂರು : ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಕಾರಣಕರ್ತ ಆರೋಪಿ ನವೀನ್ ಅನ್ನುಪೊಲೀಸರು ಇಂದು ಕೋರ್ಟ್ ಗೆ ಹಾಜರು ಪಡಿಸಿದ್ದರು. ಆರೋಪಿ ನವೀನ್ ಗೆ ಬೆಂಗಳೂರಿನ 11ನೇ ಎಸಿಎಂಎಂ ಕೋರ್ಟ್ 14 ದಿನ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದೆ.
ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿ ಗಲಭೆಗೆ ಕಾರಣವಾಗಿದ್ದು, ಆರೋಪಿ ನವೀನ್ ಎಂಬಾತ ಫೇಸ್ ಬುಕ್ ನಲ್ಲಿ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್ ಹಾಕಿದ್ದು ಎಂಬುದಾಗಿ ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿತ್ತು.
ಪ್ರಕರಣ ಕುರಿತಂತೆ ವಿಚಾರಣೆ ನಡೆಸಿದಂತ 11ನೇ ಎಸಿಎಂಎಂನ ನ್ಯಾಯಾಧೀಶರು, ಅವಹೇಳನಕಾರಿ ಪೋಸ್ಟ್ ಆಗಿದ್ದ ಆರೋಪಿ ನವೀನ್ ಗೆ 14 ದಿನಗಳ ನ್ಯಾಯಂಗ ಬಂದನ ವಿಧಿಸಿ ಆದೇಶ ಹೊರಡಿಸಿದ್ದಾರೆ. ಹೀಗಾಗಿ ಆರೋಪಿ ನವೀನ್ ಇದೀಗ ಪರಪ್ಪನ ಅಗ್ರಹಾರ ಜೈರು ಸೇರುವಂತಾಗಿದೆ.