ಹಲವರು ಸಣ್ಣ ಆಗಲು ಪ್ರಯತ್ನಿಸಿದರೆ ಕೆಲವರಿಗೆ ದಪ್ಪ ಆಗುವ ಚಿಂತೆ. ದೇಹ ಹೇಗಾದರೂ ಇರಲಿ. ಮುಖ ಚಬ್ಬಿಯಾಗಿರಬೇಕು. ಆಗ ಮಾತ್ರ ಹೆಲ್ತಿಯಾಗಿ ಕಾಣುತ್ತಾರೆ. ಕೆಲವರಿಗೆ ದೇಹ ದಪ್ಪ ಆದಾಗ ಮುಖ ದಪ್ಪ ಆಗುವುದಿಲ್ಲ. ಆಗ ದೇಹ ದೊಡ್ಡದು ಮುಖ ಚಿಕ್ಕದಂತೆ ಕಾಣುತ್ತದೆ. ಇನ್ನು ಕೆಲವರು ಸಣ್ಣ ಆಗಲು ಪ್ರಯತ್ನಪಟ್ಟ ತಕ್ಷಣ ಕೆನ್ನೆ ಇಳಿದುಹೋಗುತ್ತದೆ. ಈ ರೀತಿ ಆಗಬಾರದು ಎಂದರೆ ಏನು ಮಾಡಬೇಕು? ಯಾವ ಆಹಾರ ಸೇವಿಸಬೇಕು ಇಲ್ಲಿದೆ ಮಾಹಿತಿ..
- ಆಲೋವೆರಾ: ಅಲೋವೆರಾದಿಂದ ದೇಹ ಹಾಗೂ ಮುಖ ಎರಡಕ್ಕೂ ಲಾಭವಿದೆ. ಅಲೋವೆರಾದಲ್ಲಿ ವಿಟಮಿನ್ ಸಿ ಹಾಗೂ ವಿಟಮಿನ್ ಇ ಇದೆ. ಇದರಿಂದ ಆಂಟಿ ಏಜಿಂಗ್ ಎಫೆಕ್ಟ್ ನಿಮ್ಮ ಕೆನ್ನೆಗೆ ಆಗುತ್ತದೆ. ಅಲೋವೆರಾ ತಿನ್ನಬೇಕು ಹಾಗೂ ಮುಖಕ್ಕೆ ಹಚ್ಚುವುದೂ ಒಳ್ಳೆಯದು.
- ಸೇಬು: ಸೇಬಿನ ಆರೋಗ್ಯಕರ ಗುಣಗಳ ಬಗ್ಗೆ ಹೇಳುವುದೇನು ಬೇಡ. ಸೇಬಿನಲ್ಲಿರುವ ಕೊಲ್ಯಾಜೆನ್, ಎಲಾಸ್ಟಿನ್ ಹಾಗೂ ಆಂಟಿಆಕ್ಸಿಡೆಂಟ್ಸ್ ನಿಮ್ಮ ಮುಖ ಚಬ್ಬಿಯಾಗಲು ಸಹಾಯ ಮಾಡುತ್ತದೆ. ಸೇಬಿನ ಮಾಸ್ಕ್ ಮಾಡಿಕೊಳ್ಳಿ, ಹಣ್ಣಿನ ತಿರುಳು ಮುಖಕ್ಕೆ ಉಜ್ಜಿ ಇಪ್ಪತ್ತು ನಿಮಿಷ ಬಿಡಿ. ಹಾಗೇ ಸೇಬು ತಿನ್ನುವುದೂ ಮುಖ್ಯವಾಗುತ್ತದೆ.
- ಗ್ಲಿಸರಿನ್ ಹಾಗೂ ರೋಸ್ ವಾಟರ್: ಪ್ರತಿದಿನ ಮಲಗುವ ಮುನ್ನ ಅರ್ಧಸ್ಪೂನ್ ಗ್ಲಿಸರಿನ್ಗೆ ಅರ್ಧ ಸ್ಪೂನ್ ರೋಸ್ ವಾಟರ್ ಹಾಕಿ ರಾತ್ರಿ ಮಲಗುವ ಮುನ್ನ ಹಚ್ಚಿದರೆ ತ್ವಚೆ ಯಾವಾಗಲು ಯಂಗ್ ಆಗಿರುತ್ತದೆ.
- ಜೇನುತುಪ್ಪ: ಪ್ರತಿದಿನ ಐದರಿಂದ ಆರು ಸ್ಪೂನ್ ಜೇನುತುಪ್ಪ ತಿನ್ನುವವರ ತ್ವಚೆ ಚೆನ್ನಾಗಿರುತ್ತದೆ ಹಾಗೆಯೇ ಮುಖ ಬೇಗ ವಯಸ್ಸಾದಂತೆ ಕಾಣುವುದಿಲ್ಲ.
- ಹಾಲು: ಹಾಲನ್ನು ಕುಡಿಯುವುದು ಹಾಗೂ ಮುಖಕ್ಕೆ ಹಚ್ಚುವುದರಿಂದ ತ್ವಚೆ ಕೋಮಲವಾಗಿರುತ್ತದೆ. ಹಾಗೂ ಚಬ್ಬಿ ಕೆನ್ನೆ ನಿಮ್ಮದಾಗುತ್ತದೆ. ಹಾಲಿನಲ್ಲಿರುವ ಫ್ಯಾಟ್, ಪ್ರೋಟೀನ್, ಅಮೈನೋ ಆಸಿಡ್ಸ್, ಕ್ಯಾಲ್ಷಿಯಂ ನಿಮ್ಮ ಕೆನ್ನೆ ಇಳಿದು ವಯಸ್ಸಾದಂತೆ ಕಾಣಲು ಬಿಡುವುದಿಲ್ಲ.