Tuesday, June 28, 2022

Latest Posts

ಕೆಪಿಸಿಸಿ‌ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಮೇಲೆ‌ ಸಿಬಿಐ ಅಧಿಕಾರಿಗಳು ದಾಳಿ ಖಂಡಿಸಿ ಪ್ರತಿಭಟನೆ

ಬಳ್ಳಾರಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ‌ನಿವಾಸದ‌ ಮೇಲೆ ಸಿಬಿಐ ಅಧಿಕಾರಿಗಳು ದಾಳಿ‌ ಮಾಡಿದ ಕ್ರಮ ಖಂಡಿಸಿ ನಗರದ ರಾಯಲ್ ವೃತ್ತದಲ್ಲಿ ಎನ್ಎಸ್ ಯುಐ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.

‌14 ಕಡೆಗಳಲ್ಲಿ‌ ಡಿಕೇಶಿ‌ ಅವರಿಗೆ ಸಂಬಂಧಿಸಿದ ನಿವಾಸ ಕಚೇರಿಗೆಳ‌ ಮೇಲೆ ಸಿಬಿಐ ಅಧಿಕಾರಿಗಳು ಏಕಕಾಲಕ್ಕೆ ದಾಳಿ‌ ನಡೆಸಿರುವ ಸುದ್ದಿ‌ ಪ್ರಸಾರವಾಗುತ್ತಿದ್ದಂತೆ ಕಾರ್ಯಕರ್ತರು ರಾಯಲ್‌ ವೃತ್ತದ ಬಳಿ ‌ಜಮಾಯಿಸಿ ಟೈರ್ ಗೆ‌ ಬೆಂಕಿ‌ ಹಚ್ಚಿ ನಾನಾ ಘೋಷಣೆಗಳನ್ನು ‌ಕೂಗಿ‌ ಆಕ್ರೋಶ‌ ವ್ಯಕ್ತಪಡಿಸಿದರು.

ಪ್ರತಿಭಟನೆ ‌ನೇತೃತ್ವ ವಹಿಸಿದ್ದ ಸಂಘಟನೆ‌‌ ಜಿಲ್ಲಾ ಅಧ್ಯಕ್ಷ ‌ಸಿದ್ದು‌ ಹಳ್ಳೆಗೌಡ‌ ಮಾತನಾಡಿ, ಕೆಪಿಸಿಸಿ ಅಧ್ಯಕ್ಷ ‌ಡಿ.ಕೆ.ಶಿವಕುಮಾರ್ ‌ಅವರ‌ ನಿವಾಸಗಳ ಮೇಲೆ‌ ನಡೆದ ಪೂರ್ವ ನಿಯೋಜಿತವಾಗಿದೆ. ಉಪ ಚುನಾವಣೆ ಮುಂದಿಟ್ಟುಕೊಂಡು ಸೋಲಿನ ಬೀತಿ ಎದುರಿಸುತ್ತಿರುವ ಬಿಜೆಪಿ ಮಾಡಿರುವ ಕುತಂತ್ರ‌ ಇದಾಗಿದೆ. ಇದಕ್ಕೆ ನಮ್ಮ ನಾಯಕ, ನಮ್ಮ ಪಕ್ಷ ಹೆದರೋಲ್ಲ, ಧೈರ್ಯವಾಗಿ ಎಲ್ಲವನ್ನೂ ಎದುರಿಸುತ್ತೇವೆ, ಬಿಜೆಪಿ ಅವರಂತೆ ಹೇಡಿ‌ ನಾಯಕರು ನಮ್ಮವರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಚುನಾವಣೆ‌ ಮುಂದಿಟ್ಟುಕೊಂಡು ಈ ರೀತಿ ಪಕ್ಷದ ನಾಯಕನನ್ನು ಕಟ್ಟಿ ಹಾಕುವ ಕೆಲಸ ಸರಿಯಲ್ಲ. ಧೈರ್ಯವಿದ್ದರೇ ಎದುರಿಸಬೇಕು, ಹಿಂಬಾಗಿಲ‌ ಮೂಲಕ ನಮ್ಮ ನಾಯಕನ ಶಕ್ತಿ‌ ಕುಗ್ಗಿಸುವ ಪ್ರಯತ್ನ ಸರಿಯಲ್ಲ. ನಾಯಕ ಡಿಕೇಶಿ ಇಂತವುಗಳಿಗೆ ಹೆದರುವ ವ್ಯಕ್ತಿಯಲ್ಲ, ಕಾನೂನು ಮೂಲಕ ಅವರಿಗೆ ಖಂಡಿತ ನ್ಯಾಯ ದೊರೆಯುವ ವಿಶ್ವಾಸವಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ವಿವಿಧ ಮುಖಂಡರು, ಕಾರ್ಯಕರ್ತರು ಇತರರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss