ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಒಳಗೊಂದು ಹೊರಗೊಂದು ಮಾತನಾಡುವುದು ಅಭ್ಯಾಸವಾಗಿ ಬಿಟ್ಟಿದೆ. ಅವರು ಸೀಸನ್ ರಾಜಕಾರಣಿ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೆಪಿಸಿ ಅಧ್ಯಕ್ಷ ಡಿಕೆಶಿಯವರಿಗೆ ಒಳಗೊಂದು ಹೊರಗೊಂದು ಮಾತನಾಡುವುದು ಅಭ್ಯಾಸವಾಗಿದೆ. ಸದನದ ಒಳಗೆ ಬಿ.ಸಿ.ಪಾಟೀಲ್ ನನ್ನ ಆತ್ಮೀಯ ಸ್ನೇಹಿತ ಎಂದವರು ಸಂಜೆ ಹೊತ್ತಿಗೆ ಮಾತು ಬದಲಾಯಿಸಿದ್ದಾರೆ. ಅವರು ಸೀಸನ್ ರಾಜಕಾರಣಿ ಎಂದು ವಾಗ್ದಾಳಿ ನಡೆಸಿದ್ದಾರೆ.
ಎಪಿಎಂಸಿ ಕಾಯ್ದೆಯಿಂದ ಯಾವುದೇ ನಷ್ಟವಿಲ್ಲ. ಇದರಿಂದ ರೈತರಿಗೆ ಒಳ್ಳೆಯದೇ ಆಗಲಿದೆ. ರೈತರು ಏಕೆ ಪ್ರತಿಭಟನೆ ಮಾಡುತ್ತಿದ್ದಾರೆ ಎಂಬುದು ತಿಳಿಯಬೇಕು. ರೈತರು ಪ್ರತಿಭಟನೆಯನ್ನು ಕೈ ಬಿಡುವಂತೆ ಬಿ.ಸಿ. ಪಾಟೀಲ್ ಮನವಿ ಮಾಡಿದರು.