ಹೊಸ ದಿಗಂತ ವರದಿ, ಚಿಕ್ಕಮಗಳೂರು:
ಬಯಲು ಸೀಮೆಯ ಲಕ್ಯಾ ಹಾಗೂ ಸಖರಾಯಪಟ್ಟಣ ಹೋಬಳಿಗಳ ಕೆರೆ ತುಂಬಿಸುವ 1281.80 ಕೋಟಿ ರೂ ವೆಚ್ಚದ ಗೋಂಧಿ ನೀರಾವರಿ ಯೋಜನೆಗೆ ರಾಜ್ಯ ಸಚಿವ ಸಂಪುಟಸಭೆ ಅನುಮೋದನೆ ನೀಡಿರುವ ಹಿನ್ನೆಲೆಯಲ್ಲಿ ಲಕ್ಯ ಹೋಬಳಿ ಗ್ರಾಮಸ್ಥರು ಮಾಜಿ ಸಚಿವ ಸಿ.ಟಿ.ರವಿ ಅವರನ್ನು ಅಭಿನಂದಿಸಿದರು.
ಗುರುವಾರ ಶಾಸಕರ ನಿವಾಸದಲ್ಲಿ ರವಿ ಅವರನ್ನು ಭೇಟಿಯಾದ ಗ್ರಾಮಸ್ಥರು ಯೋಜನೆಗೆ ಅನುಮೋದನೆ ಕೊಡಿಸಲು ಶ್ರಮಿಸಿದ ಕಾರಣಕ್ಕೆ ಧನ್ಯವಾದ ಸಲ್ಲಿಸಿದರಲ್ಲದೇ ಶಾಸಕರಿಗೆ ಶಾಲು ಹೊದಿಸಿ ಸನ್ಮಾನಿಸಿದರು.
ಲಕ್ಯಾ ಗ್ರಾಮಸ್ಥರಾದ ಈಶ್ವರಪ್ಪ, ವೀರಭಧ್ರಪ್ಪ, ಪ್ರಸನ್ನಚಾರ್, ಲಕ್ಷ್ಮೀಶಚಾರ್ ಇತರರು ಇದ್ದರು.