Tuesday, June 28, 2022

Latest Posts

ಕೆಲಸಕ್ಕೆ ಹೋದ ಸಂದರ್ಭ ಶಾರ್ಟ್ ಸಕ್ಯೂ೯ಟ್: ಮನೆ ಸಾಮಗ್ರಿ ಜೊತೆಗೆ ಹಣವೂ ಭಸ್ಮ

ಹೊಸ ದಿಗಂತ ವರದಿ, ಕಲಬುರಗಿ:

ನಗರದ ಐವಾನ ಶಾಹಿ ರಸ್ತೆಯ ಬಳಿಯಿರುವ ಗುಲಾಬವಾಡಿ ಬಡವಾಣೆಯಲ್ಲಿ ಬಾಡಿಗೆ ಮನೆಯಲ್ಲಿ ಇದ್ದಂತಹ ಸಿದ್ದಪ್ಪ ಪಸ್ತಾಪುರ ಎಂಬುವವರ ಮನೆಯಲ್ಲಿ ಶಾರ್ಟ್ ಸಕ್ಯೂ೯ಟ್ ನಿಂದ ಬೆಂಕಿ ಹತ್ತಿ ಹಣ,ಬಟ್ಟೆ, ದವಸ ದಾನ್ಯ ಸುಟ್ಟು ಭಸ್ಮವಾಗಿವೆ.
ಬೆಳಿಗ್ಗೆ ಕೆಲಸಕ್ಕೆಂದು ತೆರಳಿದಾಗ ಸುಮಾರು 11 ಗಂಟೆಗೆ ಏಕಾಏಕಿ ಶಾರ್ಟ್ ಸಕ್ಯೂ೯ಟ್ ನಿಂದ  ಮನೆಗೆ ಬೆಂಕಿ ಹತ್ತಿ ಸಿದ್ದಪ್ಪ ಪಸ್ತಾಪುರ ಅವರ ಮನೆಯಲ್ಲಿ ಇದ್ದಂತಹ ಒಂದು ಲಕ್ಷ ಹಣ, ಬಟ್ಟೆ ಹಾಗೂ ರೇಷನ್ ಸಾಮಗ್ರಿಗಳು ಸುಟ್ಟು ಕರಕಲಾಗಿವೆ.
ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಸಿದ್ದಪ್ಪ ಪಸ್ತಾಪುರ ಅವರು ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದು, ಇನ್ನೂಳಿದ ಸಿದ್ದಪ್ಪ ಹೆಂಡತಿ ಹಾಗೂ ಅವರ ತಾಯಿ ಸಹ ಕೆಲಸಕ್ಕೆ ಹೋಗಿದ್ದರು. ಅದರಂತೆ ಮನೆಯ ಮಕ್ಕಳು ಸಹ ಶಾಲೆಗೆಂದು ತೆರಳಿದಾಗ ಈ ಅವಘಡ ಸಂಭವಿಸಿದೆ.
ಸಿದ್ದಪ್ಪ ಅವರು ಸಹಕಾರಿ ಸಂಘದಲ್ಲಿ ಇತ್ತೀಚೆಗೆ 1ಲಕ್ಷ ಸಾಲ ತೆಗೆದುಕೊಂಡು ಮನೆಯ ಕಬಾಟ್ ನಲ್ಲಿ ಭದ್ರವಾಗಿ ಇಟ್ಟಿದ್ದರು. ಶುಕ್ರವಾರ ಸಂಭವಿಸಿದ  ಶಾರ್ಟ್ ಸಕ್ಯೂ೯ಟ್ ನಿಂದ ಬಟ್ಟೆ ಬರೆ ಜೊತೆ ಜೊತೆಗೆ ಹಣವೂ ಸಹ ಸಂಪೂರ್ಣ  ಸುಟ್ಟು ಹೋಗಿವೆ.
ಸಿದ್ದಪ್ಪ ಪಸ್ತಾಪುರ, ಅವರ ಹೆಂಡತಿ ಸಂಗೀತಾ ಪಸ್ತಾಪುರ, 2 ಮಕ್ಕಳು ಹಾಗೂ ಒಬ್ಬ ಅಜ್ಜಿ ಕುಟುಂಬದಲ್ಲಿ ವಾಸಿಸುತ್ತಿದ್ದರು. ಘಟನಾ ಸ್ಥಳಕ್ಕೆ ಅಗ್ನಿ ಶಾಮಕ ದಳ ಸಿಬ್ಬಂದಿ ಬಂದು ಅಗ್ನಿಯನ್ನು ನಂದಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss