ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಇಂದು ಜನರು ಕೆಲಸ ಮಾಡಿದ ನಮ್ಮಂತವರಿಗೆ ವೋಟ್ ಹಾಕೋದಿಲ್ಲ. ಅದನ್ನು ಬಿಟ್ಟು ಏನೂ ಕೆಲಸ ಮಾಡದವರಿಗೆ ವೋಟ್ ಹಾಕಿ ಗೆಲ್ಲಿಸುತ್ತಿದ್ದಾರೆ. ಇದು ಇಂದಿನ ಪರಿಸ್ಥಿತಿಯಾಗಿದೆ. ಕೆಲಸ ಮಾಡಿದಾಗ ಹೆಲಿಕ್ಯಾಪ್ಟರ್ ನಲ್ಲಿ ಹೂಮಳೆ ಸುರಿಸೋರು, ಚುನಾವಣೆಯಲ್ಲಿ ಮಾತ್ರ ವೋಟ್ ಹಾಕೋದೇ ಇಲ್ಲ ಎಂಬುದಾಗಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಬೇಸರ ವ್ಯಕ್ತ ಪಡಿಸಿದ್ದಾರೆ.
ದಾಸರಹಳ್ಳಿಯಲ್ಲಿ ನಡೆದಂತ ಜೆಡಿಎಸ್ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದಂತ ಅವರು, ನಾನು ಕಷ್ಟಪಟ್ಟು ಕೆಲಸ ಮಾಡುತ್ತೇನೆ. ಆದರೆ, ಜನರು ಮಾತ್ರ ನನ್ನ ಕೈಹಿಡಿಯುತ್ತಿಲ್ಲ ಎಂದು ತಮ್ಮ ಬೇಸರವನ್ನು ವ್ಯಕ್ತಪಡಿಸಿದರು.
ನಾನು ರೈತರ ಸಾಲಮನ್ನಾ ಮಾಡಿದೆ. ಹಲವಾರು ಯೋಜನೆಗಳನ್ನ ಕೊಟ್ಟೆ. ಕೆರೆಯನ್ನ ನುಂಗಿ ಅಧಿಕಾರಿಗಳು, ರಾಜಕಾರಣಿಗಳು ಹೈಫೈ ಕಾಲೋನಿ ಮಾಡಿಕೊಂಡರು. ಆದರೆ, ಅಲ್ಲಿ ಮಳೆಗಾಲ ಬಂದರೆ ನೀರು ತುಂಬಿಕೊಳ್ತಿತ್ತು. ಈ ಸಮಸ್ಯೆ ಅರಿತು ಬಗೆಹರಿಸಿಕೊಟ್ಟಿದೆ. ಆದರೆ ಜನರು ನಮ್ಮ ಪಕ್ಷಕ್ಕೆ ವೋಟ್ ಹಾಕಲೇ ಇಲ್ಲ ಎಂದು ನೋವು ತೋಡಿಕೊಂಡರು.