ಹೊಸ ದಿಗಂತ ವರದಿ, ಮಂಡ್ಯ:
ಕೆ.ಆರ್.ಎಸ್. ಅಣೆಕಟ್ಟೆಗೆ ಅಪಾಯ ಉಂಟು ಮಾಡುತ್ತಿರುವ ಕಲ್ಲು ಗಣಿಗಾರಿಕೆಗೆ 20 ಕಿ.ಮೀ. ಸತ್ತಳತೆಯ ವ್ಯಾಪ್ತಿಯಲ್ಲಿ ಶಾಶ್ವತ
ನಿಷೇಧ ಹೇರಲು, ಅಣೆಕಟ್ಟೆ ಬಿರುಕು ಬಿಟ್ಟಿರುವ ಬಗ್ಗೆ ತನಿಖೆ ಮಾಡುವಂತೆ ಬಿಜೆಪಿ ಮುಖಂಡ ಸಿ.ಟಿ. ಮಂಜುನಾಥ್ ಒತ್ತಾಯಿಸಿದ್ದಾರೆ.
ಈ ಸಂಬಂಧ ಪ್ರಧಾನಮಂತ್ರಿ ನರೇಂದ್ರಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಅವರು, ಮಂಡ್ಯ ಜಿಲ್ಲೆಯ ರೈತರ ಜೀವನಾಡಿಯಾಗಿರುವ ಅಣೆಕಟ್ಟೆಯು ಮಂಡ್ಯ, ಬೆಂಗಳೂರು, ಮೈಸೂರು, ರಾಮನಗರ, ಮೊದಲಾದ ಜಿಲ್ಲೆಗಳ ಕುಡಿಯುವ ನೀರಿಗೆ ಆಸರೆಯಾಗಿದೆ. ಒಂದೊಮ್ಮೆ ಅಣೆಕಟ್ಟೆಗೆ ಅಪಾಯ ಎದುರಾದಲ್ಲಿ ರಾಜ್ಯದ ಪಾಲಿಗೆ ದೊಡ್ಡ ನಷ್ಟ ಉಂಟಾಗಲಿದೆ. ಕನ್ನಂಬಾಡಿ ಕಟ್ಟೆಗೆ ಅಪಾಯ ಇರುವ ಬಗ್ಗೆ ರಾಜ್ಯ ನೈಸರ್ಗಿಕ ವಿಕೋಪಗಳ ನಿರ್ವಹಣ ಸಂಸ್ಥೆಯ ವಿಜ್ಞಾನಿಗಳು ಈಗಾಗಲೇ ವರದಿ ನೀಡಿದ್ದಾರೆ. ಹಿಂದಿನ ವರ್ಷಗಳಲ್ಲಿ ಸೆ.25ರಂದು ಹಾಗೂ ನ.29ರಂದು ಜಿಲ್ಲೆಯ ವಿವಿಧ ಕಡೆಗಳಲ್ಲಿ ಭಾರಿ ಶಬ್ದ ಕೇಳಿ ಬಂದಿದ್ದು,
ಅದರ ಹಿನ್ನೆಲೆಯು ಕಲ್ಲು ಗಣಿಗಾರಿಕೆಯೇ ಆಗಿದೆ ಎಂದು ತಿಳಿಸಿದ್ದಾರೆ.
ರಾಜ್ಯ ನೈಸರ್ಗಿಕ ವಿಕೋಪಗಳ ಉಸ್ತುವಾರಿ ಸಮಿತಿ ತನ್ನ ವರದಿಯಲ್ಲಿ ಉಪಗ್ರಹ ಚಿತ್ರಗಳನ್ನು ಬಹಿರಂಗ ಪಡಿಸುವ ಮೂಲಕ ,
ಸಾಬೀತು ಪಡಿಸಿದೆ ಈ ಬಗ್ಗೆ ಕೆ.ಆರ್.ಎಸ್. ಭೂ ಕಂಪನ ಮಾಪನ ಕೇಂದ್ರದಲ್ಲಿ ಭೂಮಿ ಕಂಪಿಸಿರುವ ಬಗ್ಗೆ ದಾಖಲಾಗಿದ್ದು, ಅದಕ್ಕೆ ಸಮೀಪದ ಬೇಬಿ ಬೆಟ್ಟದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯಲ್ಲಿ ನಡೆದ ಅಕ್ರಮ ಸ್ಪೋಟಕ ಸಿಡಿಸಿದ್ದು ಕಾರಣ ಎನ್ನಲಾಗಿದೆ.
ಈ ಸಂಬಂಧ ಸಮಿತಿ ರಚಿಸಿ ಸಮೀಕ್ಷೆ ಮಾಡಿಸುವಂತೆ ವಿಜ್ಞಾನಿಗಳ ತಂಡ ವರದಿ ನೀಡಿದ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾಧಿಕಾರಿ ಸರ್ಕಾರಕ್ಕೆ ಪ್ರಸ್ತಾವನೆ
ಸಲ್ಲಿಸಿದ್ದು, ಇದಕ್ಕೆ ಸಂಬಂಧ ಪಟ್ಟಂತೆ ಪುಣೆಯ ತಜ್ಞರ ತಂಡ ಕನ್ನಂಬಾಡಿ ಕತ್ತೆಯ ಸುತ್ತ ಟ್ರಯಲ್ ಬ್ಲಾಕ್ ನಡೆಸಲು ಮುಂದಾದಾಗ, ಇದ್ದಕ್ಕಿದ್ದಂತೆ ಆ ಪ್ರಾಯೋಗಿಕ ಸ್ಫೋಟವನ್ನು ರದ್ದು ಪಡಿಸಿದ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗಿರುವುದನ್ನು ವಿವರಿಸಿದ್ದಾರೆ.
ಹಿಂದಿನ ವರ್ಷಗಳಲ್ಲಿ ನ.29ರ ಮಧ್ಯಾಹ್ನ 2.42ರಲ್ಲಿ ಮಂಡ್ಯ ನಗರದ ಸುತ್ತಮುತ್ತ 1 ಸೆಕೆಂಡ್ ಅಂತರದಲ್ಲಿ 2 ಬಾರಿ ಭಾರಿ
ಶಬ್ಧ ಕೇಳಿಬಂದಿದೆ. ಜತೆಗೆ ಪಾಂಡವಪುರ, ಶ್ರೀರಂಗಪಟ್ಟಣ, ಕೆ.ಆರ್.ಪೇಟೆ ಹಾಗೂ ಕನ್ನಂಬಾಡಿ ಕಟ್ಟೆ ಇರುವ ಕೆ.ಆರ್.ಎಸ್.
ನಲ್ಲೂ ಭಾರಿ ಶಬ್ಧ ಕೇಳಿ ಬಂದಿದ್ದು, ಭೂಕಂಪನದ ಅನುಭವವಾಗಿ ಜನತೆ ಭಯಗೊಂಡು ಮನೆಯಿಂದ ಹೊರಗೆ ಓಡಿ ಬಂದಿರುವ
ವರದಿಗಳು ಮಾಧ್ಯಮಗಳಲ್ಲಿ ವರದಿಯಾಗಿವೆ ಎಂದು ತಿಳಿಸಿದ್ದಾರೆ.