Monday, July 4, 2022

Latest Posts

ಕೆ.ಆರ್.ಪೇಟೆ| ಮುಂಬೈನಿoದ ಬಂದ ಇಬ್ಬರು ಮಹಿಳೆಯರಿಗೆ ಕೋರೋನಾ- ಜಾಗಿನಕೆರೆ ಗ್ರಾಮ ಕಂಟೈನ್‌ಮೆoಟ್ ಝೋನ್!

ಕೆ.ಆರ್.ಪೇಟೆ : ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಜಾಗಿನಕೆರೆ ಗ್ರಾಮಕ್ಕೆ ಮುಂಬೈನಿoದ ಬಂದ ಇಬ್ಬರು ಮಹಿಳೆಯರಿಗೆ ಕೋರೋನಾ ವೈರಸ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಇಡೀ ಜಾಗಿನಕೆರೆ ಗ್ರಾಮವನ್ನು ಕಂಟೈನ್‌ಮೆoಟ್ ಝೋನ್ ಎಂದು ಗುರುತಿಸಿ ಬ್ಯಾರಿಕೇಡ್ ಮೂಲಕ ಇಡೀ ಗ್ರಾಮವನ್ನು ಪೊಲೀಸ್ ಕಣ್ಗಾವಲಿನಲ್ಲಿ ಇಡಲಾಗಿದೆ.
ಜಾಗಿನಕೆರೆ ಗ್ರಾಮದಿಂದ 7 ಕಿ.ಮೀ ವ್ಯಾಪ್ತಿಯಲ್ಲಿರುವ ಬರೋಬ್ಬರಿ 48 ಗ್ರಾಮಗಳನ್ನು ಬಫರ್ ಝೋನ್ ವ್ಯಾಪ್ತಿಗೆ ಒಳಪಡಿಸಿ ಕೊರೋನಾ ಸೋಂಕು ಹರಡದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತಾಲೂಕು ಆಡಳಿತ ಕೈಗೊಂಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss