Tuesday, August 9, 2022

Latest Posts

ಕೆ.ಎಸ್.ಆರ್.ಪಿ ಪೊಲೀಸ್, ಬ್ಯಾಂಕ್, ಆರೋಗ್ಯ, ಬಿ.ಸಿ.ಎಂ ಮತ್ತು ವಿದ್ಯುತ್ ಇಲಾಖೆಯ ಸಿಬ್ಬಂದಿ ಸಹಿತ 36 ಜನರಲ್ಲಿ ಕೊರೋನಾ ಸೋಂಕು ದೃಢ

ಹಾವೇರಿ: ಜಿಲ್ಲೆಯಲ್ಲಿ ಮಂಗಳವಾರ ಕೆ.ಎಸ್.ಆರ್.ಪಿ ಪೊಲೀಸ್, ಕೆ.ವಿ.ಜಿ. ಬ್ಯಾಂಕ್, ಆರೋಗ್ಯ, ಬಿ.ಸಿ.ಎಂ ಮತ್ತು ವಿದ್ಯುತ್ ಇಲಾಖೆಯ ಸಿಬ್ಬಂದಿ ಸೇರಿ ೩೬ ಜನರಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದರೆ ಮೂವರು ಮರಣವನ್ನಪ್ಪಿದ್ದಾರೆ ಎಂದು ಜಿಲ್ಲಾಧಿಕಾರಿ ಸಂಜಯ ಶಟ್ಟೆಣ್ಣನವರ ತಿಳಿಸಿದ್ದಾರೆ.
ಜಿಲ್ಲೆಯ ಹಾನಗಲ್ ತಾಲೂಕಿನಲ್ಲಿ ೫, ಹಾವೇರಿ ತಾಲೂಕಿನಲ್ಲಿ ೧೦, ಹಿರೇಕೆರೂರ ೫, ರಾಣೇಬೆನೂರ ೭, ಸವಣೂರ ೪ ಹಾಗೂ ಶಿಗ್ಗಾಂವ ತಾಲೂಕಿನಲ್ಲಿ ೫ ಜನರಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ.
ಕೆ.ವಿ.ಜಿ ಬ್ಯಾಂಕ್ ಮ್ಯಾನೇಜರ, ಬಿ.ಸಿ.ಎಂ ಇಲಾಖೆಯ ವಾಹನ ಚಾಲಕ, ಗ್ರಾಮೀಣ ಭಾಗದ ವಿದ್ಯುತ್ ಪ್ರತಿನಿಧಿಗೆ ಸೋಂಕು ದೃಢಪಟ್ಟಿದೆ.
ಜಿಲ್ಲೆಯ ರಾಣೆಬೆನ್ನೂರ ನಗರದ ಉಮಾಶಂಕರ ನಗರದ ೬೨ ವರ್ಷದ ಮಹಿಳೆ, ಹಾವೇರಿ ನಗರದ ಪುರದ ಓಣಿಯ ೭೦ ವರ್ಷದ ಮಹಿಳೆ ಹಾಗೂ ಹಾವೇರಿ ತಾಲೂಕಿನ ಕನವಳ್ಳಿ ಗ್ರಾಮದ ೪೨ ವರ್ಷದ ಪುರುಷ ಸಾವನ್ನಪ್ಪಿದ್ದಾನೆ.
ಜಿಲ್ಲೆಯಲ್ಲಿ ಈವರೆಗೆ ೧೯೨೫ ಜನರಲ್ಲಿ ಕೊರೊನಾ ಸೋಂಖು ಕಾಣಿಸಿಕೊಂಡಿದ್ದು ಇವರಲ್ಲಿ ೧೨೩೭ ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಹೊಂದಿದ್ದಾರೆ. ಮಂಗಳವಾರ ೧೩೯ ಜನರು ಗುಣಮುಖರಾಗಿ ಬಿಡುಗಡೆಹೊಂದಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ೪೨ ಜನರು ಮರಣಹೊಂದಿದಂತಾಗಿದೆ. ಹೋಂ ಐಸೋಲೇಷನ್‌ದಲ್ಲಿನ ಸಕ್ರೀಯ ೧೬೩ ಪ್ರಕರಣಗಳು ಮತ್ತು ವಿವಿಧ ಆಸ್ಪತ್ರೆಗಳಲ್ಲಿರುವ ೪೮೩ ಪ್ರಕರಣಗಲು ಸೇರಿ ಒಟ್ಟು ೬೪೬ ಸಕ್ರೀಯ ಪ್ರಕರಣಗಳಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss