Saturday, June 25, 2022

Latest Posts

ಕೇಂದ್ರದಿಂದ 30 ಕೋಟಿ ಜನರಿಗೆ ಕೋವಿಡ್ ಲಸಿಕೆ ನೀಡುವ ಯೋಜನೆ: ಡಾ. ಹರ್ಷವರ್ಧನ್

ಹೊಸ ದಿಗಂತ ಆನ್ ಲೈನ್ ಡೆಸ್ಕ್ :

ದೇಶದ ಸುಮಾರು 25 ರಿಂದ 30 ಕೋಟಿ ಜನರಿಗೆ 2021 ರ ಜುಲೈ, ಆಗಸ್ಟ್ ವೇಳೆಗೆ ಕೋವಿಡ್ ಲಸಿಕೆ ನೀಡುವ ಯೋಜನೆ ಇದೆ ಎಂದು ಸಚಿವ ಹರ್ಷವರ್ಧನ್ ಹೇಳಿದ್ದಾರೆ.
ಐಆರ್‌ಸಿಎಸ್ ಅಧ್ಯಕ್ಷರೂ ಆಗಿರುವ ಡಾ. ಹರ್ಷವರ್ಧನ್, ಇಂದು ದೆಹಲಿ ರೈಲ್ವೆ ನಿಲ್ದಾಣದಲ್ಲಿ ಮಾಸ್ಕ್​ ಮತ್ತು ಸ್ಯಾನಿಟೈಸರ್ ವಿತರಿಸಿ ಮಾತನಾಡಿದರು.
ಈಗಾಗಲೇ ತಯಾರಿ ನಡೆಯುತ್ತಿದ್ದು, 2021ರ ಮೊದಲಾರ್ಧದಲ್ಲಿ ದೇಶದ ಜನರಿಗೆ ಲಸಿಕೆ ನೀಡುವ ಸಾಧ್ಯತೆಯಿದೆ ಎಂದರು.
ಕೊರೋನಾ ಸೋಂಕಿನಿಂದ ರಕ್ಷಣೆ ಪಡೆಯಲು ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ ಎಂದು ಸಾರ್ವಜನಿಕರಿಗೆ ಸಲಹೆ ನೀಡಿದರು.
ಈಗಾಗಲೇ ನಾವು ಕೊರೋನಾ ವಿರುದ್ಧದ ಹೋರಾಟದಲ್ಲಿ 11 ತಿಂಗಳು ಪೂರೈಸಲಿದ್ದೇವೆ. ಸೋಂಕಿನಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಮುಖ್ಯವಾಗಿ ಸ್ವಚ್ಛತೆ, ದೈಹಿಕ ಅಂತರದ ನಿಯಮಗಳನ್ನು ಪಾಲಿಸಬೇಕಿದೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss