Sunday, August 14, 2022

Latest Posts

ಕೇಂದ್ರದ ಗೈಡ್‌ ಲೈನ್ ನಂತೆ ಸ್ವಾತಂತ್ರ್ಯೋತ್ಸವ ಆಚರಣೆ: ಗೃಹ ಸಚಿವ ಬಸವರಾಜ ಬೊಮ್ಮಾಯಿ

ಉಡುಪಿ: ಸ್ವಾತಂತ್ರ್ಯ ದಿನ ಆಚರಿಸುವ ಕುರಿತು ಕೇಂದ್ರದ ಗೈಡ್‌ ಲೈನ್ ಬಂದಿದೆ. ಅದರಂತೆ ಸರಳವಾಗಿ ಸ್ವಾತಂತ್ರ್ಯೋತ್ಸವ ಆಚರಿಸಲಾಗುತ್ತದೆ ಎಂದು ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಮಂಗಳವಾರ ಉಡುಪಿ ಪ್ರವಾಸದ ವೇಳೆ ಕೊರೋನಾ ನಡುವೆ ಸ್ವಾತಂತ್ರ್ಯ ದಿನಾಚರಣೆ‌ ವಿಚಾರವಾಗಿ ಸಚಿವರು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.
ಸ್ವಾತಂತ್ರ್ಯ ‌ದಿನದಂದು ಕಮಾಂಡರ್ಸ್ ಇರುತ್ತಾರೆ, ಆದರೆ ಪರೇಡ್ ಇರುವುದಿಲ್ಲ. ಗೌರವ ವಂದನೆಯೂ ಇರುವುದಿಲ್ಲ. ಎಲ್ಲರೆದುರು ಧ್ವಜಾರೋಹಣ ‌ಮಾಡಲಾಗುತ್ತದೆ. ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಪ್ರವೇಶಾವಕಾಶ ಇರುವುದಿಲ್ಲ. ನೇರ ವೀಕ್ಷಣೆಗೆ ಸ್ಕ್ರೀನಿಂಗ್ ವ್ಯವಸ್ಥೆ ಮಾಡಲಾಗುತ್ತದೆ ಎಂದು ಸಚಿವರು ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss