Sunday, June 26, 2022

Latest Posts

ಕೇಂದ್ರ ಅಧ್ಯಯನ ತಂಡಕ್ಕೆ ನೀರಲಕೇರಿ ಮನವಿ: ಸರ್ಕಾರಕ್ಕೆ ರೈತ ಹಿತದ ವರದಿ ಸಲ್ಲಿಸಿ

ಧಾರವಾಡ: ಜಿಲ್ಲೆಯಲ್ಲಿ ಪ್ರಸಕ್ತ ವರ್ಷದ ಮುಂಗಾರು ಹೆಚ್ಚು ಮಳೆಯಾಗಿದೆ. ತುಪ್ಪರಿಹಳ್ಳ-ಬೆಣ್ಣಿಹಳ್ಳಗಳ ಪ್ರವಾಹದಿಂದ ರೈತರ ೬೫ ಸಾವಿರಕ್ಕೂ ಅಧಿಕ ಹೆಕ್ಟೇರ್ ಜಮೀನಿನ ಫಸಲು ನಾಶವಾಗಿದೆ. ರೈತರು ಸಂಕಷ್ಟದಲ್ಲಿದ್ದಾರೆ. ಹೀಗಾಗಿ ಕೇಂದ್ರದಿoದ ಸೂಕ್ತ ನೆರವು ನೀಡುವ ನಿಟ್ಟಿನಲ್ಲಿ ವರದಿ ಸಲ್ಲಿಸಬೇಕೆಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್.ನೀರಲಕೇರಿ ಅಧ್ಯಯನ ತಂಡಕ್ಕೆ ಮನವಿ ಮಾಡಿದರು.
ಜಿಲ್ಲೆಯಲ್ಲಿ ಹರಿಯುವ 102 ಕಿ.ಮೀ. ವ್ಯಾಪ್ತಿಯ 25ಕ್ಕೂ ಹೆಚ್ಚು ಹಳ್ಳಿಗಳು ತುಪ್ಪರಿಹಳ್ಳದ ನೆರೆಗೆ ಬಾಧಿತವಾಗಿವೆ. ಬೆಣ್ಣಿಹಳ್ಳದಿಂದ ಪ್ರತಿವರ್ಷ ಜನರು ತೊಂದರೆ ಅನುಭವಿಸುತ್ತಿದ್ದು, ಶಾಸ್ವತ ಪರಿಹಾರ ಕಲ್ಪಿಸಬೇಕು. ಹಳ್ಳಗಳ ನೆರೆಯಿಂದ ಈ ವರ್ಷ 4 ಜನರು ಮೃತಪಟ್ಟಿದ್ದು, ಅನೇಕ ಜಾನುವಾರು ನೀರು ಪಾಲಾಗಿವೆ. ನೂರಾರು ಮನೆಗಳು ಕುಸಿದ ಪರಿಣಾಮ ಜನರು ಗಾಯಗೊಂಡಿದ್ದಾರೆ ಎಂದರು.
ಜಿಲ್ಲೆಯ ಬಹುತೇಕ ರೈತರು ಮಳೆ ಆಧಾರಿತ ಕೃಷಿಕರು. ದೊಡ್ಡ ಜಲಮೂಲಗಳ ಆಸರೆ ರೈತರಿಗೆ ಇಲ್ಲ. ರೈತರ ಹತ್ತಿ, ಹೆಸರು, ಮೆಕ್ಕೆಜೊಳ, ಶೇಂಗಾ, ಸೋಯಾಅವರೆ, ಉದ್ದು, ಕಬ್ಬು, ಮಡಕೆ, ಟೊಮ್ಯಾಟೊ, ಈರುಳ್ಳಿ, ಮೆಣಸಿನಕಾಯಿ, ತೋಟಗಾರಿಕೆ ಬೆಳೆಗಳು ಪ್ರವಾಹಕ್ಕೆ ಆಹುತಿಯಾಗಿವೆ. ಉತ್ತಮ ಫಸಲು ನಿರೀಕ್ಷಿಸಿದ್ದ ರೈತರು ಪುನಃ ಹಾನಿ ಅನುಭಸಿದ್ದಾರೆ ಎಂದು ಮನವರಿಕೆ ಮಾಡಿದರು.
ಪ್ರಸಕ್ತ ರೈತರನ್ನು ಸಂಕಷ್ಟದಿoದ ಸರ್ಕಾರ ಪಾರು ಮಾಡುವ ಅಗತ್ಯವಿದೆ. ಆದ್ದರಿಂದ ರೈತರು ಬೆಳೆದ ಫಸಲು ನಾಶಕ್ಕೆ ಹೆಕ್ಟೇರ್‌ಗೆ ಕನಿಷ್ಠ ರೂ.60 ಸಾವಿರ ಪರಿಹಾರ ನೀಡಬೇಕು. ರೈತರ ಹಿತದೃಷ್ಠಿಯಿಂದ ಪೂರಕ ವರದಿ ಸಲ್ಲಿಕೆ ಹಾಗೂ ತುಪ್ಪರಿಹಳ್ಳ-ಬೆಣ್ಣಿ ಹಳ್ಳಗಳ ಪ್ರವಾಹದ ಅನಾಹುತ ತಪ್ಪಿಸುವ ಸಲುವಾಗಿ ಶಾಶ್ವತ ಪರಿಹಾರ ಕಂಡುಕೊಳ್ಳುವoತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಕೋರಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss