ಬೆಂಗಳೂರು: ಕೊರೋನಾ ಸೋಕಿನಿಂದ ಇಡೀ ರಾಜ್ಯ 21 ದಿನಗಳ ಕಾಲ ಲಾಕ್ ಡೌನ್ ನಲ್ಲಿದೆ. ಆದರೆ ಕೇಂದ್ರ ಸರ್ಕಾರ ಸಮ್ಮತಿಸಿದರೆ ಕೊರೋನಾ ಮುಕ್ತವಾಗಿರುವ ಜಿಲ್ಲೆಗಳನ್ನು ಲಾಕ್ ಡೌನ್ ನಿಂದ ತೆರವು ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ವೈ. ತಿಳಿಸಿದ್ದಾರೆ.
ರಾಜ್ಯದಲ್ಲಿ ಈವರೆಗೂ 12 ಜಿಲ್ಲೆಗಳಲ್ಲಿ ಯಾವುದೇ ಕೊರೋನಾ ಸೋಂಕು ಕಂಡು ಬಂದಿಲ್ಲ. ಹಾಗಾಗಿ ಅಂತಹ ಜಿಲ್ಲೆಗಳನ್ನು ಲಾಕ್ ಡೌನ್ ನಿಂದ ತೆರವುಗೊಳಿಸುವ ಚಿಂತನೆ ಮಾಡಲಾಗಿದೆ.
ರಾಜ್ಯದಲ್ಲಿ ಲಾಕ್ ಡೌನ್ ನಿಂದ ಸರ್ಕಾರ ಆರ್ಥಿಕವಾಗಿ ತೊಂದರೆ ಅನುಭವಿಸುತ್ತಿರುವ ಕಾರಣ ರಾಜ್ಯದ ಶಾಸಕರ ವೇತನ ಶೇ.30ರಷ್ಟು ಕಡಿತ ಮಾಡಲಾಗುತ್ತಿದೆ. ಹಾಗೂ ಸರ್ಕಾರಕ್ಕೆ ಆದಾಯವಾಗುವ ಮದ್ಯ ಮಾರಾಟ ಮುಂದುವರಿಸುವ ಉದ್ದೇಶ ಹೊಂದಿದೆ ಎಂದರು.
ಲಾಕ್ ಡೌನ್ ವಿಸ್ತರಣೆ ಕುರಿತು ಏ.14ರ ಬಳಿಕ ಪ್ರಧಾನಿ ಮೋದಿ ಜೊತೆ ಚರ್ಚಿಸಿ ತಿಳಿಸಲಾಗುತ್ತದೆ. ಆದರೆ ಜನರು ತಮ್ಮ ವ್ಯವಹಾರವಗಳನ್ನು ತಮ್ಮ ಊರುಗಳಲ್ಲಿಯೇ ಮಾಡಬೇಕಾಗಿದ್ದು, ಜಿಲ್ಲೆಯಿಂದ ಜಿಲ್ಲೆಗೆ ಪ್ರಯಾಣ ಮಾಡುವುದಕ್ಕೆ ಅನುಮತಿ ಇರುವುದಿಲ್ಲ ಎಂದು ಮುಖ್ಯಮಂತ್ರಿ ಸ್ಪಷ್ಟನೆ ನೀಡಿದ್ದಾರೆ.