Tuesday, August 9, 2022

Latest Posts

ಕೇಂದ್ರ ಆಯುಷ್ ಇಲಾಖೆ ಸಚಿವ ಶ್ರೀಪಾದ್​ ನಾಯ್ಕ್​ ಅವರಿಗೆ ಕೊರೋನಾ ಪಾಸಿಟಿವ್​

ನವದೆಹಲಿ: ಕೇಂದ್ರ ಆಯುಷ್ ಇಲಾಖೆ ಸಚಿವ ಶ್ರೀಪಾದ್​ ನಾಯ್ಕ್​  ಅವರಿಗೆ ಕೊರೋನಾ ದೃಢಪಟ್ಟಿದೆ. ಕೊವಿಡ್​-19 ಸೋಂಕು ತಗುಲಿದ ಐದನೇ ಕೇಂದ್ರ ಸಚಿವರು ಇವರು.
ಟ್ವೀಟ್​ ಮೂಲಕ ತಿಳಿಸಿದ ಶ್ರೀಪಾದ್​ ನಾಯ್ಕ್​ ಅವರು, ನನಗೆ ಯಾವುದೇ ಲಕ್ಷಣಗಳೂ ಇಲ್ಲ. ಆದರೂ ಕೊವಿಡ್​-19 ಟೆಸ್ಟ್​ಗೆ ಒಳಗಾಗಿದ್ದೆ. ಫಲಿತಾಂಶ ಪಾಸಿಟಿವ್​ ಬಂದಿದೆ. ಸದ್ಯ ಆಸ್ಪತ್ರಗೆ ದಾಖಲಾಗಲಿಲ್ಲ. ಮನೆಯಲ್ಲಿಯೇ ಐಸೋಲೇಟ್​ ಆಗಿದ್ದೇನೆ. ಕಳೆದ ಕೆಲವು ದಿನಗಳಿಂದ ನನ್ನ ಪ್ರಾಥಮಿಕ ಸಂಪರ್ಕಕ್ಕೆ ಬಂದ ಎಲ್ಲರೂ ಕೊವಿಡ್​-19 ತಪಾಸಣೆ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss