ಕಾಸರಗೋಡು: ಕೇಂದ್ರ ಆರೋಗ್ಯ ಸಚಿವಾಲಯ ಪಟ್ಟಿ ಮಾಡಿದ 10 ಕೊರೋನಾ ವೈರಸ್ ಹಾಟ್ಸ್ಪಾಟ್ಗಳಲ್ಲಿ ಕೇರಳದ ಕಾಸರಗೋಡು ಹಾಗೂ ಪತ್ತನಂತಿಟ್ಟ ಜಿಲ್ಲೆಗಳೂ ಸೇರಿದೆ.
ಮಂಗಳವಾರ ಬೆಳಗ್ಗೆ ರಾಜ್ಯದಲ್ಲಿ ಕೊರೋನ ಬಾಧಿಸಿದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ತಿರುವನಂತಪುರ ಪೊತ್ತನಕೋಡ್ ನಿವಾಸಿ ಅಬ್ದುಲ್ ಅಸೀಸ್ (68) ಮೃತಪಟ್ಟ ದುರ್ದೈವಿ. ಇದರೊಂದಿಗೆ ಕೇರಳದಲ್ಲಿ ಮೃತಪಟ್ಟವರ ಸಂಖ್ಯೆ 2ಕ್ಕೆ ಏರಿದೆ.