ಹೊಸದಿಲ್ಲಿ : ದೇಶದಲ್ಲಿ ಪ್ರಸ್ತುತ ನೆಲೆಸಿರುವ ಎಲ್ಲ ವಿದೇಶಿಯರ ವೀಸಾಗಳನ್ನು ಕೇಂದ್ರ ಸರ್ಕಾರ ತಾತ್ಕಾಲಿಕವಾಗಿ ಅಮಾನತುಗೊಳಿಸಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಮಾನ ಹಾರಾಟ ನಡೆಯುವ ವಾತಾವರಣ ಸೃಷ್ಟಿಯಾಗುವತನಕ ವಿದೇಶಿಯರ ವೀಸಾ ಮುಂದಿನ ಒಂದು ತಿಂಗಳ ಮಟ್ಟಿಗೆ ಅಮಾನುತುಗೊಳ್ಳಲಿದೆ. ಆದರೆ ರಾಜತಾಂತ್ರಿಕ ವರ್ಗಕ್ಕೆ ಇದು ಅನ್ವಯವಾಗದು ಎಂದು ಗೃಹ ಇಲಾಖೆ ಸ್ಪಷ್ಟಪಡಿಸಿದೆ.