Thursday, October 29, 2020
Thursday, October 29, 2020

Latest Posts

ಈರುಳ್ಳಿ ರಫ್ತು ನಿಷೇಧದ ಬಳಿಕ, ಅವುಗಳ ಬೀಜಗಳ ಮೇಲೂ ನಿರ್ಬಂಧ ಹೇರಿದ ಕೇಂದ್ರ ಸರ್ಕಾರ!

ಹೊಸದಿಲ್ಲಿ: ಈರುಳ್ಳಿ ಬೀಜಗಳ ರಫ್ತನ್ನು ನಿಷೇಧಿಸಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಈ ಮೊದಲು ಈರುಳ್ಳಿ ಬೀಜಗಳ ​ ರಫ್ತು ನಿರ್ಬಂಧಿತ ವಿಭಾಗದಲ್ಲಿತ್ತು. ರಫ್ತುದಾರರು ಸರ್ಕಾರದಿಂದ ಪರವಾನಗಿ ಅಥವಾ ಅನುಮತಿ ಪಡೆಯುವ ಅಗತ್ಯವಿತ್ತು. ಇದೀಗ...

ಕಾರ್ಯಕರ್ತರ ಶ್ರಮದಿಂದ ಬಿಜೆಪಿ ಆಡಳಿತದ ಚುಕ್ಕಾಣಿ ಹಿಡಿದಿದೆ: ಶಾಸಕ ಕೆ. ರಘುಪತಿ ಭಟ್

ಉಡುಪಿ: ಉಡುಪಿಯ ಅಭಿವೃದ್ಧಿಯ ಕುರಿತು ಪ್ರಣಾಳಿಕೆಯಲ್ಲಿ ತಿಳಿಸಿದ ಭರವಸೆಯನ್ನು ಹಂತಹಂತವಾಗಿ ಈಡೇರಿಸುತ್ತಿದ್ದೇವೆ. ಈಗಾಗಲೇ ಪ್ರಮುಖ ಕಾಮಗಾರಿಗಳು ಆರಂಭಗೊಂಡು ಪ್ರಗತಿಯಲ್ಲಿವೆ. ಜನ ನಮ್ಮ ಮೇಲೆ ಇಟ್ಟ ವಿಶ್ವಾಸವನ್ನು ಉಳಿಸಿ ಮುನ್ನಡೆಯಬೇಕಾಗಿದೆ ಎಂದು ಶಾಸಕ ಕೆ....

ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೋವಿಡ್ ಲಸಿಕೆಯ ಜಿಲ್ಲಾ ಲಸಿಕಾ ಕಾರ್ಯಪಡೆ ಸಮನ್ವಯ ಸಮಿತಿ ಸಭೆ

ಮಣಿಪಾಲ: ಕೋವಿಡ್-19 ಸೋಂಕಿಗೆ ಲಸಿಕೆ ಅಭಿವೃದ್ಧಿಯು ಅಂತಿಮ ಹಂತದಲ್ಲಿದ್ದು, ಕೇಂದ್ರ ಸರಕಾರದ ನಿರ್ದೇಶನದಂತೆ ಲಸಿಕೆಯನ್ನು ಪ್ರಾಥಮಿಕ ಹಂತದಲ್ಲಿ ಸರಕಾರಿ ಮತ್ತು ಖಾಸಗಿ ಆರೋಗ್ಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲ ಅಧಿಕಾರಿಗಳು ಮತ್ತು ಸಹಾಯಕ ಸಿಬ್ಬಂದಿಗೆ...

ಕೇಂದ್ರ ರೈಲ್ವೆ ರಾಜ್ಯ ಸಚಿವ ಸುರೇಶ್ ಅಂಗಡಿ ನಿಧನಕ್ಕೆ ಗಣ್ಯರ ಸಂತಾಪ

ಬೆಂಗಳೂರು: ಕೇಂದ್ರ ರೈಲ್ವೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರ ಅಕಾಲಿಕ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸಹಿತ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ .
‘ಕೇಂದ್ರ ಸಚಿವ ಶ್ರೀ ಸುರೇಶ್ ಅಂಗಡಿ ರವರ ಅಕಾಲಿಕ ನಿಧನದ ಸುದ್ದಿ ನಂಬಲಿಕ್ಕೆ ಸಾಧ್ಯವಾಗುತ್ತಿಲ್ಲ. ಅವರ ನಿಧನದಿಂದ ಪಕ್ಷಕ್ಕೆ, ರಾಜ್ಯಕ್ಕೆ ಮಾತ್ರವಲ್ಲ, ಇಡೀ ದೇಶಕ್ಕೆ ಬಹುದೊಡ್ಡ ನಷ್ಟವಾಗಿದೆ’ ಭಗವಂತ ಅವರ ಆತ್ಮಕ್ಕೆ ಸದ್ಗತಿಯನ್ನು ನೀಡಲಿ, ಅವರ ಕುಟುಂಬದವರಿಗೆ, ಬಂಧು ವರ್ಗದವರಿಗೆ, ಅಪಾರ ಅಭಿಮಾನಿಗಳಿಗೆ ಮತ್ತು ಕಾರ್ಯಕರ್ತರಿಗೆ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ .
ರಾಜ್ಯದ ಅಭಿವೃದ್ಧಿಯ ಮಾರ್ಗವೊಂದು ಕಡಿತ: ಎಚ್‌.ಡಿ.ಕುಮಾರಸ್ವಾಮಿ
ಸುರೇಶ್ ಅಂಗಡಿ ಅವರು ವಿಧಿವಶರಾದದ್ದು ತೀವ್ರ ದಿಗ್ಭ್ರಮೆಯನ್ನುಂಟು ಮಾಡಿದೆ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಸತತ ನಾಲ್ಕು ಬಾರಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದ ಸುರೇಶ್ ಅಂಗಡಿ ಅವರು ಈ ಬಾರಿ ಕೇಂದ್ರದಲ್ಲಿ ರೈಲ್ವೆ ಖಾತೆ ರಾಜ್ಯಸಚಿವರಾಗಿ ರಾಜ್ಯದ ರೈಲ್ವೆ ಸಾರಿಗೆ ಅಭಿವೃದ್ದಿಯ ಕನಸುಗಳನ್ನು ಹೊಂದಿದ್ದರು. ದುರಾದೃಷ್ಟವಶಾತ್‌ ಕೊರೋನಾ ಸೋಂಕಿನಿಂದ ನಮ್ಮನ್ನಗಲಿರುವುದು. ರಾಜ್ಯದ ಅಭಿವೃದ್ಧಿಯ ಮಾರ್ಗವೊಂದು ಕಡಿತಗೊಂಡಂತಾಗಿದೆ. ಸುರೇಶ್ ಅಂಗಡಿ ಅವರ ಆತ್ಮಕ್ಕೆ ಚಿರಶಾಂತಿಯನ್ನು, ಅವರ ಕುಟುಂಬ ವರ್ಗಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.
ಅಕಾಲಿಕ ಮರಣ ಅತೀವ ದುಃಖ ತಂದಿದೆ
ಕೇಂದ್ರ ಸಚಿವ, ಬೆಳಗಾವಿಯ ಸಂಸದರಾದ, ಸಜ್ಜನ ಸುರೇಶ್ ಅಂಗಡಿಯವರ ಅಕಾಲಿಕ ಮರಣ ಅತೀವ ದುಃಖ ತಂದಿದೆ ಎಂದು ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದ್ದು, ಅವರ ಕುಟುಂಬಕ್ಕೆ ಭಗವಂತನು ನೋವನ್ನು ಭರಿಸುವ ಶಕ್ತಿ ನೀಡಲಿ. ಅವರ ಆತ್ಮಕ್ಕೆ ಭಗವಂತ ಚಿರ ಶಾಂತಿ ಕೊಡಲಿ ಎಂದು ಸಂತಾಪ ಸೂಚಿಸಿದ್ದಾರೆ.
ಸದಾ ಉಲ್ಲಸಿತರಾಗಿ ಜನಸೇವೆಯಲ್ಲಿ ತೊಡಗಿದ್ದ ಸರಳ ವ್ಯಕ್ತಿತ್ವ
ಕೇಂದ್ರದ ರೈಲ್ವೆ ಖಾತೆಯ ರಾಜ್ಯ ಸಚಿವ ಶ್ರೀ ಸುರೇಶ್ ಅಂಗಡಿ ಅವರು ಕೊರೊನಾ ಸೋಂಕಿನಿಂದ ನಿಧನರಾದ ಸುದ್ದಿ ತೀವ್ರ ಆಘಾತ ನೀಡಿದೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ. ಸದಾ ಉಲ್ಲಸಿತರಾಗಿ ಜನಸೇವೆಯಲ್ಲಿ ತೊಡಗಿದ್ದ ಸರಳ ವ್ಯಕ್ತಿತ್ವದ ಅವರ ಅಗಲಿಕೆ ರಾಷ್ಟ್ರಕ್ಕೆ ಮತ್ತು ಭಾರತೀಯ ಜನತಾ ಪಕ್ಷಕ್ಕೆ ತುಂಬಲಾರದ ನಷ್ಟ ಎಂದಿರುವ ಅವರು ಅಂಗಡಿ ಆತ್ಮಕ್ಕೆ ಶಾಂತಿ ಕೋರುತ್ತ, ಅವರ ಕುಟುಂಬಕ್ಕೆ ಹಾಗೂ ಅಪಾರ ಅಭಿಮಾನಿಗಳಿಗೆ ಈ‌ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಹೇಳಿದ್ದಾರೆ.
 ನಮ್ಮ ಅಂಗಡಿ ಬಾರದ ಲೋಕಕ್ಕೆ ಹೋಗಿದ್ದಾರೆ
ಅವರು ಇನ್ನಿಲ್ಲ ಎಂಬುವುದನ್ನು ನಂಬುವುದಕ್ಕೆ ಆಗುತ್ತಿಲ್ಲ. ಇತ್ತೀಚೆಗಷ್ಟೇ ಅವರನ್ನು ಭೇಟಿಯಾಗಿ ಚಿಕ್ಕಮಗಳೂರು ಹಾಸನ ರೈಲ್ವೆ ಯೋಜನೆ ಸಂಬಂಧಿಸಿದಂತೆ ಸಭೆ ತೆಗೆದುಕೊಳ್ಳಬೇಕೆಂದು ವಿನಂತಿಸಿದ್ದೆ ಆಗ ಅವರು ಅಕ್ಟೋಬರ್ ಎರಡನೇ ವಾರದಲ್ಲಿ ಸಭೆ ನಡೆಸುವ ಎಂದು ಹೇಳಿದ್ದರು ಈಗ ಅವರೇ ಇಲ್ಲ. ಎಂಥಹ ದುರ್ವಿಧಿ ಇದು. ನಾಲ್ಕು ಬಾರಿ ಸಂಸದರಾಗಿ ಬೆಳಗಾವಿ ಕ್ಷೇತ್ರದಿಂದ ಚುನಾಯಿತರಾಗಿದ್ದ ಸುರೇಶ್ ಅಂಗಡಿ ಅವರು ಕನ್ನಡ ಹಾಗೂ ಮರಾಠಿ ಭಾಷಿಕರ ವಿಶ್ವಾಸ ಸಂಪಾದಿಸಿದ್ದರು. ಮೂಲತಃ ರಾಜಕೀಯ ಹಿನ್ನೆಲೆ ಅವರಿಗಿಲ್ಲದಿದ್ದರೂ ಎಲ್ಲರನ್ನೂ ಜೊತೆಗೆ ಕರೆದೊಯ್ಯುವ ಕಲೆ ಅವರಿಗಿತ್ತು. ಕಲಿಕೆ ನಿರಂತರ ಎಂದು ನಂಬಿದ್ದ ಅವರು ಈ ವಯಸ್ಸಿನಲ್ಲಿ ಇಂಗ್ಲಿಷ್ ಕಲಿತು ಉತ್ತರಿಸುವ ಪ್ರಯತ್ನ ಮಾಡುತ್ತಿದ್ದರು. ಉತ್ಸಾಹಿಯಾಗಿ ಕರ್ನಾಟಕದ ರೈಲ್ವೆ ಯೋಜನೆಗಳು ಅನುಷ್ಠಾನವಾಗುವಂತೆ ಕೆಲಸ ಮಾಡುತ್ತಿದ್ದ ನಮ್ಮ ಅಂಗಡಿ ಬಾರದ ಲೋಕಕ್ಕೆ ಹೋಗಿದ್ದಾರೆ. ಅವರ ಆತ್ಮಕ್ಕೆ ಸದ್ಗತಿ ದೊರಕಲಿ, ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ದಯಪಾಲಿಸಲಿ ಎಂದು ಹೇಳಿದ್ದಾರೆ.
ಪ್ರತಿಯೊಬ್ಬರಿಗೂ ಮಾದರಿ ಅವರು
ಸುರೇಶ್‌ ಅಂಗಡಿ ಅವರ ನಿಧನ ತೀವ್ರ ದಿಗ್ಬ್ರಮೆ ತಂದಿದೆ ಎಂದು ಡಿಸಿಎಂ ಅಶ್ವತ್ಥನಾರಾಯಣ ಹೇಳಿದ್ದಾರೆ. ಬಿಜೆಪಿ ಓರ್ವ ಉನ್ನತ, ಉತ್ತಮ ನಾಯಕನ್ನು ಹಾಗೂ ಅತ್ಯಂತ ನಿಷ್ಟಾವಂತ ಕಟ್ಟಾಳುವನ್ನು ಕಳೆದುಕೊಂಡಿದೆ. ಬೆಳಗಾವಿ ಮಾತ್ರವಲ್ಲದೆ ಇಡೀ ನಾಡಿನ ನೆಚ್ಚಿನ ನಾಯಕರಾಗಿದ್ದರು, ನಮಗೆ ಹಿರಿಯರಾಗಿ ಮಾರ್ಗದರ್ಶನ ಮಾಡುತ್ತಿದ್ದರು. ರಾಜಕಾರಣದಲ್ಲಿ ಅಜಾತಶತ್ರುವಾಗಿದ್ದರು. ವೈಯಕ್ತಿಕ ಜೀವನದಲ್ಲೂ ಶಿಸ್ತುಬದ್ಧರಾಗಿದ್ದರು. ಪ್ರತಿಯೊಬ್ಬರಿಗೂ ಮಾದರಿ ಎನಿಸುವಂಥ ವ್ಯಕ್ತಿತ್ವ ಹೊಂದಿದ್ದರು. ಅಂಗಡಿಯರ ನಿಧನ ಸುದ್ದಿಯನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.
ಕುಟುಂಬ ಸದಸ್ಯರಿಗೆ ಅವರ ಅಗಲಿಕೆಯನ್ನು ಭರಿಸುವ ಶಕ್ತಿ ನೀಡಲಿ
ಸುರೇಶ್‌ ಅಂಗಡಿ ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌, ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರು ಮತ್ತು ಬೆಳಗಾವಿ ಲೋಕಸಭಾ ಕ್ಷೇತ್ರದ ಜನಪ್ರಿಯ ಸಂಸದರಾದ ಸುರೇಶ್ ಅಂಗಡಿ ಅವರು ದೈವಾಧೀನರಾಗಿರುವ ವಿಷಯ ತಿಳಿದು ಆಘಾತವಾಗಿದೆ. ಶ್ರೀಯುತರ ಆತ್ಮಕ್ಕೆ ಸದ್ಗತಿ ದೊರಕಲಿ ಮತ್ತು ಅವರ ಕುಟುಂಬ ಸದಸ್ಯರಿಗೆ ಈ ಅಗಲಿಕೆಯನ್ನು ಭರಿಸುವ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Latest Posts

ಈರುಳ್ಳಿ ರಫ್ತು ನಿಷೇಧದ ಬಳಿಕ, ಅವುಗಳ ಬೀಜಗಳ ಮೇಲೂ ನಿರ್ಬಂಧ ಹೇರಿದ ಕೇಂದ್ರ ಸರ್ಕಾರ!

ಹೊಸದಿಲ್ಲಿ: ಈರುಳ್ಳಿ ಬೀಜಗಳ ರಫ್ತನ್ನು ನಿಷೇಧಿಸಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಈ ಮೊದಲು ಈರುಳ್ಳಿ ಬೀಜಗಳ ​ ರಫ್ತು ನಿರ್ಬಂಧಿತ ವಿಭಾಗದಲ್ಲಿತ್ತು. ರಫ್ತುದಾರರು ಸರ್ಕಾರದಿಂದ ಪರವಾನಗಿ ಅಥವಾ ಅನುಮತಿ ಪಡೆಯುವ ಅಗತ್ಯವಿತ್ತು. ಇದೀಗ...

ಕಾರ್ಯಕರ್ತರ ಶ್ರಮದಿಂದ ಬಿಜೆಪಿ ಆಡಳಿತದ ಚುಕ್ಕಾಣಿ ಹಿಡಿದಿದೆ: ಶಾಸಕ ಕೆ. ರಘುಪತಿ ಭಟ್

ಉಡುಪಿ: ಉಡುಪಿಯ ಅಭಿವೃದ್ಧಿಯ ಕುರಿತು ಪ್ರಣಾಳಿಕೆಯಲ್ಲಿ ತಿಳಿಸಿದ ಭರವಸೆಯನ್ನು ಹಂತಹಂತವಾಗಿ ಈಡೇರಿಸುತ್ತಿದ್ದೇವೆ. ಈಗಾಗಲೇ ಪ್ರಮುಖ ಕಾಮಗಾರಿಗಳು ಆರಂಭಗೊಂಡು ಪ್ರಗತಿಯಲ್ಲಿವೆ. ಜನ ನಮ್ಮ ಮೇಲೆ ಇಟ್ಟ ವಿಶ್ವಾಸವನ್ನು ಉಳಿಸಿ ಮುನ್ನಡೆಯಬೇಕಾಗಿದೆ ಎಂದು ಶಾಸಕ ಕೆ....

ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೋವಿಡ್ ಲಸಿಕೆಯ ಜಿಲ್ಲಾ ಲಸಿಕಾ ಕಾರ್ಯಪಡೆ ಸಮನ್ವಯ ಸಮಿತಿ ಸಭೆ

ಮಣಿಪಾಲ: ಕೋವಿಡ್-19 ಸೋಂಕಿಗೆ ಲಸಿಕೆ ಅಭಿವೃದ್ಧಿಯು ಅಂತಿಮ ಹಂತದಲ್ಲಿದ್ದು, ಕೇಂದ್ರ ಸರಕಾರದ ನಿರ್ದೇಶನದಂತೆ ಲಸಿಕೆಯನ್ನು ಪ್ರಾಥಮಿಕ ಹಂತದಲ್ಲಿ ಸರಕಾರಿ ಮತ್ತು ಖಾಸಗಿ ಆರೋಗ್ಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲ ಅಧಿಕಾರಿಗಳು ಮತ್ತು ಸಹಾಯಕ ಸಿಬ್ಬಂದಿಗೆ...

ಧಾರವಾಡ| ಪದವೀಧರ ಚುನಾವಣಾ ಕರ್ತವ್ಯಲೋಪ; ಮೂವರು ಅಧಿಕಾರಿಗಳ ಅಮಾನತು: ಜಿಲ್ಲಾಧಿಕಾರಿ

ಧಾರವಾಡ: ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಅ.೨೮ರಂದು ನಡೆದ ಚುನಾವಣೆಯಲ್ಲಿ ಕರ್ತವ್ಯಲೋಪ ಎಸಗಿದ ಮೂವರು ಅಧಿಕಾರಿಗಳನ್ನು ಅಮಾನತ್ತು ಮಾಡಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಆದೇಶ ಹೊರಡಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿದ...

Don't Miss

ಈರುಳ್ಳಿ ರಫ್ತು ನಿಷೇಧದ ಬಳಿಕ, ಅವುಗಳ ಬೀಜಗಳ ಮೇಲೂ ನಿರ್ಬಂಧ ಹೇರಿದ ಕೇಂದ್ರ ಸರ್ಕಾರ!

ಹೊಸದಿಲ್ಲಿ: ಈರುಳ್ಳಿ ಬೀಜಗಳ ರಫ್ತನ್ನು ನಿಷೇಧಿಸಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಈ ಮೊದಲು ಈರುಳ್ಳಿ ಬೀಜಗಳ ​ ರಫ್ತು ನಿರ್ಬಂಧಿತ ವಿಭಾಗದಲ್ಲಿತ್ತು. ರಫ್ತುದಾರರು ಸರ್ಕಾರದಿಂದ ಪರವಾನಗಿ ಅಥವಾ ಅನುಮತಿ ಪಡೆಯುವ ಅಗತ್ಯವಿತ್ತು. ಇದೀಗ...

ಕಾರ್ಯಕರ್ತರ ಶ್ರಮದಿಂದ ಬಿಜೆಪಿ ಆಡಳಿತದ ಚುಕ್ಕಾಣಿ ಹಿಡಿದಿದೆ: ಶಾಸಕ ಕೆ. ರಘುಪತಿ ಭಟ್

ಉಡುಪಿ: ಉಡುಪಿಯ ಅಭಿವೃದ್ಧಿಯ ಕುರಿತು ಪ್ರಣಾಳಿಕೆಯಲ್ಲಿ ತಿಳಿಸಿದ ಭರವಸೆಯನ್ನು ಹಂತಹಂತವಾಗಿ ಈಡೇರಿಸುತ್ತಿದ್ದೇವೆ. ಈಗಾಗಲೇ ಪ್ರಮುಖ ಕಾಮಗಾರಿಗಳು ಆರಂಭಗೊಂಡು ಪ್ರಗತಿಯಲ್ಲಿವೆ. ಜನ ನಮ್ಮ ಮೇಲೆ ಇಟ್ಟ ವಿಶ್ವಾಸವನ್ನು ಉಳಿಸಿ ಮುನ್ನಡೆಯಬೇಕಾಗಿದೆ ಎಂದು ಶಾಸಕ ಕೆ....

ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೋವಿಡ್ ಲಸಿಕೆಯ ಜಿಲ್ಲಾ ಲಸಿಕಾ ಕಾರ್ಯಪಡೆ ಸಮನ್ವಯ ಸಮಿತಿ ಸಭೆ

ಮಣಿಪಾಲ: ಕೋವಿಡ್-19 ಸೋಂಕಿಗೆ ಲಸಿಕೆ ಅಭಿವೃದ್ಧಿಯು ಅಂತಿಮ ಹಂತದಲ್ಲಿದ್ದು, ಕೇಂದ್ರ ಸರಕಾರದ ನಿರ್ದೇಶನದಂತೆ ಲಸಿಕೆಯನ್ನು ಪ್ರಾಥಮಿಕ ಹಂತದಲ್ಲಿ ಸರಕಾರಿ ಮತ್ತು ಖಾಸಗಿ ಆರೋಗ್ಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲ ಅಧಿಕಾರಿಗಳು ಮತ್ತು ಸಹಾಯಕ ಸಿಬ್ಬಂದಿಗೆ...
error: Content is protected !!