Wednesday, August 17, 2022

Latest Posts

ಕೇಂದ್ರ ವಿರುದ್ಧ ದೀದಿ ಸಡ್ಡು: ಶೇ.100ರಷ್ಟು ಸಿನಿಮಾ ಹಾಲ್‌ ಭರ್ತಿಗೆ ಆದೇಶ

ಹೊಸ ದಿಗಂತ ಆನ್ ಡೆಸ್ಕ್:

ಕೊರೋನಾ ಭೀತಿಯ ನಡುವೆಯೂ ದೀದಿ ಸರಕಾರ , ಕೇಂದ್ರದ ಮಾರ್ಗ ಸೂಚಿಯನ್ನು ಉಲಂಘಿಸಿ, ಪಶ್ಚಿಮ ಬಂಗಾಳದಲ್ಲಿ ಶೇ.100ರಷ್ಟು ಸಿನಿಮಾ ಆಸನಗಳಿಗೆ ಅನುಮತಿ ನೀಡಲು ಆದೇಶ ಹೊರಡಿಸಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ತಮಿಳುನಾಡು ಸರ್ಕಾರ ಇಂತಹ ನಿರ್ಧಾರ ಕೈಗೊಂಡಿತ್ತು. ಆದರೆ ಕೇಂದ್ರ ಗೃಹ ಸಚಿವಾಲಯ ತರಾಟೆ ತೆಗೆದುಕೊಂಡು ನಿರ್ಧಾರ ಹಿಂಪಡೆದುಕೊಳ್ಳುವಂತೆ ಸೂಚನೆ ನೀಡಿತ್ತು.
ಆದರೆ ಮಮತಾ ಬ್ಯಾನರ್ಜಿ, ಕೋವಿಡ್​ ಮುಜಾಗ್ರತೆ ಕ್ರಮ ಕೈಗೊಂಡು ಸಿನಿಮಾ ಹಾಲ್​ಗಳಲ್ಲಿ ಶೇ.100ರಷ್ಟು ಆಸನಕ್ಕೆ ಅವಕಾಶ ನೀಡಬಹುದು ಎಂದು ತಿಳಿಸಿದ್ದಾರೆ. ಇದಕ್ಕೆ ಕೇಂದ್ರ ಗೃಹ ಸಚಿವಾಲಯ ಯಾವ ರೀತಿಯ ಪ್ರತಿಕ್ರಿಯೆ ನೀಡುತ್ತದೆ ಎಂಬುದು ಎಲ್ಲರಲ್ಲೂ ಕುತೂಹಲ ಮೂಡಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!