Wednesday, August 10, 2022

Latest Posts

ಕೇಂದ್ರ ಸಚಿವರ ಸ್ಥಿತಿ ಬಗ್ಗೆ ಬೇಸರ ವ್ಯಕ್ತಪಡಿಸಿದ ನಟ ಜಗ್ಗೇಶ್

ಇತ್ತೀಚೆಗೆ  ಕೊರೋನಾದಿಂದ  ಮೃತಪಟ್ಟ  ಕೇಂದ್ರ  ಸಚಿವ  ಸುರೇಶ್  ಅಂಗಡಿ  ಅಂತ್ಯಕ್ರಿಯೆ  ದೆಹಲಿಯಲ್ಲಿ  ನಡೆದಿದೆ. ಅಂತ್ಯಕ್ರಿಯೆಯ  ವಿಡಿಯೋವನ್ನು  ನಟ, ರಾಜಕಾರಣಿ  ಜಗ್ಗೇಶ್  ಹಂಚಿಕೊಂಡಿದ್ದಾರೆ. ವಿಡಿಯೋ ನೋಡಿದವರು ’ಕೇಂದ್ರ ಸಚಿವರಿಗೆ ಇಂಥಹಾ ಸ್ಥಿತಿಯೇ’ ಎಂದು ಆಘಾತ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸಚಿವ ಸುರೇಶ್ ಅಂಗಡಿ ಕೆಲವು ದಿನಗಳ ಹಿಂದಷ್ಟೆ ಕೊರೊನಾ ಸೋಂಕಿನಿಂದಾಗಿ ದೆಹಲಿಯಲ್ಲಿ ಮೃತಪಟ್ಟರು. ಕೊರೊನಾ ನಿಯಮಾವಳಿಗಳಿಗೆ ಅನುಸಾರವಾಗಿ ದೆಹಲಿಯಲ್ಲಿಯೇ ಅವರ ಅಂತ್ಯಕ್ರಿಯೆ ಮಾಡಲಾಯಿತು

ಅಂತ್ಯಕ್ರಿಯೆ ವೇಳೆ, ಸುರೇಶ್ ಅಂಗಡಿಯವರ ಶವಕ್ಕೆ ಹಗ್ಗಗಳನ್ನು ಕಟ್ಟಿ ಗುಂಡಿಗೆ ಇಳಿಬಿಡಲಾಗಿದೆ. ಹೀಗೆ ಇಳಿಬಿಡುವ ವೇಳೆ ಅಂಗಡಿ ಅವರ ಶವ ಗುಂಡಿಯೊಳಗೆ ತಲೆಕೆಳಗಾಗಿ ಬಿದ್ದುಹೋಗುತ್ತದೆ. ಯಾವ ಗೌರವಗಳಿಲ್ಲದೆ ಶವವನ್ನು ಗುಂಡಿಯೊಳಗೆ ಮಲಗಿಸಿ ಜೆಸಿಬಿಯಿಂದ ಮಣ್ಣು ಮುಚ್ಚಲಾಗುತ್ತದೆ.

ಜಗ್ಗೇಶ್ ಅವರು ಈ ವಿಡಿಯೋ ಹಂಚಿಕೊಂಡಿದ್ದು, ಕೇಂದ್ರ ಸರ್ಕಾರದಲ್ಲಿ ಸಚಿವರಾಗಿದ್ದವರಿಗೆ ಇಂಥಹಾ ಸ್ಥಿತಿಯಾದರೆ ಸಾಮಾನ್ಯರ ಪರಿಸ್ಥಿತಿ ಏನು ಎಂದು ಆತಂಕಪಡುವಂತಿದೆ ವಿಡಿಯೋ. ತುಸುವೂ ಗೌರವವಿಲ್ಲದೆ ಗುಂಡಿಗೆ ದೂಡಲಾಗುತ್ತದೆ ಸುರೇಶ್ ಅಂಗಡಿ ಅವರ ಶವವನ್ನು. ವಿಡಿಯೋ ಹಂಚಿಕೊಂಡಿರುವ ಜಗ್ಗೇಶ್, ಬಹುನೋವಿನಿಂದ ಕೆಲವು ಸಾಲುಗಳನ್ನು ಬರೆದಿದ್ದಾರೆ. ’ಸತ್ತಾಗ ಬಂ ಧು -ಮಿತ್ರರು ನೋಡದಂತೆ ಮುಖಮುಚ್ಚಿ, ಕಸದ ಗುಂಡಿಗೆ ಬಿಸಾಕುವ ಸ್ಥಿತಿ ಬಂದಮೇಲೆ, ಹಣ-ಅಧಿಕಾರ ಎಷ್ಟಿದ್ದರೇನು’ ಎಂದಿದ್ದಾರೆ ನಟ ಜಗ್ಗೇಶ್

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss