ಹುಬ್ಬಳ್ಳಿ : ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಕೋರಿಕೆಯ ಫಲವಾಗಿ ಕಿಮ್ಸ್ ಗೆ ಐಓಸಿಎಲ್ ಕಂಪನಿ 50 ಲಕ್ಷ ರೂ. ಮಂಜೂರು ಮಾಡಿದೆ. ಈ ಮೂಲಕ ಕಿಮ್ಸ್ ಸಂಸ್ಥೆಗೆ ವೆಂಟಿಲೇಟರ್ ಹಾಗೂ ಐಸಿಯು ಬೆಡ್ ಖರಿದಿಗೆ ಕಂಪನಿಯು
ಸಿಎಸ್ಆರ್ ಅಡಿ ಹಣ ಮಂಜೂರು ಮಾಡಿದೆ. ಮನವಿಗೆ ಸ್ಪಂದಿಸಿರುವ ಕಂಪನಿಗೆ ಕ್ಷೇತ್ರದ ಜನರ ಫಲವಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕೃತಜ್ಞತೆ ಸಲ್ಲಿಸಿದ್ದಾರೆ.
ಉತ್ತರ ಕರ್ನಾಟಕದ ಪ್ರತಿಷ್ಠಿತ ಸಂಸ್ಥೆಯಾದ ಹುಬ್ಬಳ್ಳಿಯ ಕಿಮ್ಸ್ನಲ್ಲಿ ಕೋವಿಡ್-೧೯ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಅದಕ್ಕೆ ಅನುಗುಣವಾಗಿ ಅವಶ್ಯಕ ಆಯ್.ಸಿ.ಯು. ಬೇಡ್ ವೆಂಟಿಲೇಟರ್ ಹಾಗೂ ಇತರೆ ವೈಧ್ಯಕೀಯ ಪರಿಕರಗಳನ್ನು ಒದಗಿಸುವನಿಟ್ಟಿನಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಕೇಂದ್ರ ಸ್ವಾಮ್ಯದ ಹಾಗೂ ಖಾಸಗಿ ಕಂಪನಿಗಳಿಗೆ ಪ್ರಸ್ತಾವನೆ ಸಲ್ಲಿಸಲು ಜಿಲ್ಲಾಡಳಿತಕ್ಕೆ ಸೂಚಿಸಿದ್ದರು. ಜಿಲ್ಲಾಡಳಿತ ಐಓಸಿಎಲ್ ಕಂಪನಿಯ ಸಿಎಂಡಿಯವರ ಜೊತಗೆ ಮಾತುಕತೆ ನಡೆಸಿತ್ತು. ಅದರ ಫಲವಾಗಿ ಕಂಪನಿ 50 ಲಕ್ಷ ರೂ. ಅನ್ನು ಮಂಜೂರು ಮಾಡಿದೆ.
ಮಂಜೂರಾದ ಹಣದಲ್ಲಿ ಕೂಡಲೇ ಉತ್ತಮವಾದ ಪರಿಕರಗಳನ್ನು ಕಿಮ್ಸ್ಗೆ ಪೂರೈಸುವಂತೆ ಸೂಕ್ತ ಕ್ರಮವಹಿಸಲು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.