Saturday, January 16, 2021

Latest Posts

ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೆಲಿಕಾಪ್ಟರ್ ಅಪಘಾತ?: ಸ್ಪಷ್ಟನೆ ಕೊಟ್ಟ ಸಚಿವರ ಕಚೇರಿ

ಹೊಸದಿಲ್ಲಿ: ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೆಲಿಕಾಪ್ಟರ್ ಅಪಘಾತವಾಗಿದ್ದು, ಅವರು ಕೂದಲೆಳೆ ಅಂತದಲ್ಲಿ ಪಾರಾಗಿದ್ದಾರೆ ಎಂದು ವರದಿ ಎಲ್ಲೆಡೆ ಹರಿದಾಡಿತ್ತು. ಆದರೆ ಈ ಸುದ್ದಿಯನ್ನು ಕೇಂದ್ರ ಸಚಿವರು ತಳ್ಳಿ ಹಾಕಿದ್ದಾರೆ.
ಈ ಬಗ್ಗೆ ಟ್ಚೀಟ್ ಮಾಡಿರುವ ಕೇಂದ್ರ ಸಚಿವರ ಕಚೇರಿ , ಕೇಂದ್ರ ಸಚಿವರನ್ನು ಹೊತ್ತ ಹೆಲಿಕಾಪ್ಟರ್ ಸುದ್ದಿ ಅಪಘಾತಕ್ಕೀಡಾದ ಸುದ್ದಿ ಸರಿಯಿಲ್ಲ, ಅವರು ಸುರಕ್ಷಿತವಾಗಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಪಾಟ್ನಾ ವಿಮಾನ ನಿಲ್ದಾಣದಲ್ಲಿ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರಿದ್ದ ಹೆಲಿಕಾಪ್ಟರ್ ನ ಬ್ಲೇಡ್ ಗಳು ಮುರಿದುಹೋಗಿದ್ದು, ಆದರೆ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ, ಕಟ್ಟಡ ನಿರ್ಮಾಣ ಸ್ಥಳದಲ್ಲಿ ಹೆಲಿಕಾಪ್ಟರ್ ಬ್ಲೇಡ್‌ಗಳು ಓವರ್‌ಹೆಡ್ ವೈರಿಂಗ್‌ಗೆ ಬಡಿದು ಅಪಘಾತ ಸಂಭವಿಸಿದೆ ಎಂದು ವರದಿಯಾಗಿತ್ತು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss

error: Content is protected !!