ಕೇಂದ್ರ ಸಚಿವ ಹರದೀಪ್‌ಸಿಂಗ್ ಪುರಿ ವ್ಯಾಖ್ಯೆ: ಹಸಿರು ನಿಶಾನೆ ತೋರಿದರೆ ಕ್ವಾರಂಟೈನ್ ಬೇಕಿಲ್ಲ

0
151

ಹೊಸದಿಲ್ಲಿ: ಆರೋಗ್ಯ ಸೇತು ಆಪ್‌ನಲ್ಲಿ ಹಸಿರು ನಿಶಾನೆ ಕಂಡು ಬಂದಲ್ಲಿ ಅಂತಹ ಪ್ರಯಾಣಿಕರು ಕ್ವಾರಂಟೈನ್‌ನಲ್ಲಿರುವ ಅಗತ್ಯವಿಲ್ಲ ಎಂದು ನಾಗರಿಕ ವಿಮಾನಯಾನ ಸಚಿವ ಹರದೀಪ್‌ಸಿಂಗ್ ಹೇಳಿದ್ದಾರೆ.
ವಿಮಾನ ಪ್ರಯಾಣಿಕರಿಗೆ ಆರೋಗ್ಯ ಸೇತು ಆಪ್ ಕಡ್ಡಾಯವಾಗಿದ್ದು, ಇದರಿಂದ ಬರುವ ಫಲಿತಾಂಶವೇ ಬಹಳ ಮುಖ್ಯ. ಹಸಿರು ನಿಶಾನೆ ತೋರಿದರೆ ಅಂತವರನ್ನು ಯಾಕೆ ಕ್ವಾರಂಟೈನ್‌ನಲ್ಲಿಡಬೇಕೆಂದು ಅವರು ಸುದ್ದಿಗಾರರನ್ನು ಪ್ರಶ್ನಿಸಿದರು.
ಆಗಸ್ಟ್‌ನಲ್ಲಿ ವಿದೇಶೀ ವಿಮಾನಯಾನ
ಮುಂದಿನ ಆಗಸ್ಟ್ ,ಸೆಪ್ಟೆಂಬರ್ ವೇಳೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಮಾನ ಸಂಚಾರ ಶುರುವಾಗಲಿದೆ
ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೊರೋನಾ ಪರಿಸ್ಥಿತಿ ತಹಬಂದಿಗೆ ಬರುವ ವಿಶ್ವಾಸವಿದ್ದು ಭಾರತದಿಂದಲೂ ವಿದೇಶಗಳಿಗೆ ವಿಮಾನ ಹಾರಾಟ ಆರಂಭವಾಗಲಿದೆ ಎಂದರು.
ಲಾಕ್‌ಡೌನ್ ನಿಯಮಾವಳಿಗಳ ಪ್ರಕಾರವೇ ವಿಮಾನ ಸಂಚಾರ ನಡೆಯಲಿದೆ. ಪ್ರಯಾಣಿಕರಿಗೂ ಈ ದಿಶೆಯಲ್ಲಿ ಎಲ್ಲ ಬಗೆಯ ಸೂಚನೆಗಳನ್ನು ನೀಡಲಾಗುವುದು. ಈಗಾಗಲೇ ಮೇ೨೫ ರಿಂದ ದೇಶಿಯವಾಗಿ ವಿಮಾನ ಸಂಚಾರ ಆರಂಭವಾಗಿದೆ ಎಂದೂ ಪುರಿ ಈ ಸಂದರ್ಭದಲ್ಲಿ ತಿಳಿಸಿದರು. ದೇಶದಲ್ಲಿ ಲಾಕ್‌ಡೌನ್ ಘೋಷಣೆಯಾದ ಕಳೆದ ಮಾ. ೨೪ ರಿಂದ ದೇಶದ ಎಲ್ಲ ಪ್ರಮುಖ ವಿಮಾನ ನಿಲ್ದಾಣಗಳಿಂದ ವಿದೇಶಗಳಿಗೆ ವಿಮಾನ ಸಂಪೂರ್ಣ ಸ್ಥಬ್ದಗೊಂಡಿದೆ.

LEAVE A REPLY

Please enter your comment!
Please enter your name here