Wednesday, August 17, 2022

Latest Posts

ಕೇಂದ್ರ ಸರ್ಕಾರದಿಂದ ಕೊರೋನಾ ಅನ್ ಲಾಕ್ 3.0 ಗಿಫ್ಟ್ : ಏನಿದೆ ಏನಿಲ್ಲ ಆಗಸ್ಟ್ 1 ರಿಂದ?

ನವದೆಹಲಿ: ಕೊರೋನಾ ಸೋಂಕು ದೇಶವ್ಯಾಪ್ತಿ ಹೆಚ್ಚಾಗುತ್ತಿದ್ದು, ಇದರ ನಡುವೆಯೇ ಕೇಂದ್ರ ಸರ್ಕಾರ ಅನ್ ಲಾಕ್ 3.0 ಬಗ್ಗೆ ಮಾರ್ಗಸೂಚಿ ಪ್ರಕಟಿಸಿದೆ. ಅನ್ಲಾಕ್ 3.0 ಆಗಸ್ಟ್ 1 ರಿಂದ ಜಾರಿಗೆ ಬರಲಿದೆ.
ಅದರ ಅನ್ವಯ,  ಬೇರೆ ರಾಜ್ಯಗಳಿಗೆ ತೆರಳಲು ಇದ್ದಂತ ನಿರ್ಬಂಧದ ಅನುಮತಿಗೆ ಬ್ರೇಕ್ ಹಾಕಲಾಗಿದೆ. ಕಂಟೈನ್ಮೆಂಟ್ ಝೋನ್ ಗಳಿಗೂ ರಿಯಾಯಿತಿ ನೀಡಲಾಗಿದೆ. ಸ್ವಾತಂತ್ರ್ಯ ದಿನಾಚರಣೆಗೆ ಮಾರ್ಗಸೂಚಿಯಲ್ಲಿ ಅನುಮತಿ ನೀಡಲಾಗಿದೆ. ರಾಜಕೀಯ ಸಮಾವೇಶ, ಧಾರ್ಮಿಕ ಸಮಾವೇಶ, ಜಾತ್ರೆಗಳನ್ನು ನಡೆಸಲು ಅನುಮತಿ ನೀಡಿದೆ. ಸದ್ಯದಲ್ಲಿಯೇ ಮೆಟ್ರೋ ಸಂಚಾರ ಕೂಡ ಆರಂಭವಾಗಲಿದೆ. ಆಗಸ್ಟ್ 5ರಿಂದ ಯೋಗ ಸಂಸ್ಥೆಗಳು ಮತ್ತು ಜಿಮ್ ತೆರೆಯಲು ಅನುಮತಿ ಕೂಡ ನೀಡಲಾಗಿದೆ.
ಶಾಲೆ, ಕಾಲೇಜು, ಇತರ ಶೈಕ್ಷಣಿಕ ಸಂಸ್ಥೆಗಳು, ಕೋಚಿಂಗ್ ಕ್ಲಾಸ್‌ಗಳು ಆ. 31ರವರೆಗೆ ತೆರೆಯಲು ಅನುಮತಿ ಇಲ್ಲ. ಆನ್‌ಲೈನ್ ಶಿಕ್ಷಣ, ದೂರ ಶಿಕ್ಷಣಕ್ಕೆ ಅನುಮತಿ ನೀಡುವುದಲ್ಲದೇ ಪ್ರೋತ್ಸಾಹಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಸಿನಿಮಾ ಹಾಲ್, ಸ್ವಿಮಿಂಗ್ ಪೂಲ್, ಬಾರ್, ಆಡಿಟೋರಿಯಂ ಮುಂತಾದವುಗಳನ್ನೂ ತೆರೆಯುವಂತಿಲ್ಲ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!