Saturday, August 13, 2022

Latest Posts

ಕೇಂದ್ರ ಸರ್ಕಾರವೇ ಜಿಎಸ್‌ಟಿ ಪರಿಹಾರ ಹಣವನ್ನು ಭರಿಸಬೇಕು: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ

ಬೆಂಗಳೂರು: ತೆರಿಗೆ ಪಾಲನ್ನು ನೀಡುವ ಭರವಸೆ ನೀಡಿದ್ದ ಕೇಂದ್ರ ಸರ್ಕಾರವನ್ನು ನಂಬಿಕೊಂಡಿದ್ದ ರಾಜ್ಯ ಸರ್ಕಾರಗಳಿಗೆ ಮೋಸವಾಗಿದೆ. ಕೇಂದ್ರ ಸರ್ಕಾರವೇ ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರ ಹಣವನ್ನು ನೀಡಬೇಕು ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹೇಳಿದ್ದಾರೆ.

ದೇವೇಗೌಡರು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ಸರಿಯಾದ ತೆರಿಗೆ ಪಾಲನ್ನು ನೀಡುವುದಾಗಿ ಭರವಸೆ ನೀಡಿತ್ತು. ಆದರೆ ಕೇಂದ್ರ ಸರ್ಕಾರ ಜಿಎಸ್‌ಟಿ ಹಣವನ್ನು ರಾಜ್ಯಕ್ಕೆ ನೀಡಿಲ್ಲದಿರುವುದರ ವಿರುದ್ಧ ಕಿಡಿಕಾರಿದ್ದಾರೆ.

ಕೇಂದ್ರವು ಈ ಬಗ್ಗೆ ಜಿಎಸ್‌ಟಿ ಪರಿಹಾರ ಹಣದಲ್ಲಿ ೨.೩೫ ಲಕ್ಷ ಕೋಟಿ ರೂ. ಕೊರತೆ ಇದೆ ಎಂದಿತ್ತು. ಆರ್‌ಬಿಐನಿಂದ ಸಾಲದ ರೂಪದಲ್ಲಿ ರಾಜ್ಯಗಳು ಹಣ ಪಡೆದುಕೊಳ್ಳಲಿ ಎಂಬ ತನ್ನ ಮಾತು ತಪ್ಪು ಎಂದಿದೆ. ಕೇಂದ್ರ ಸರ್ಕಾರ ಜಿಎಸ್‌ಟಿ ವಿಚಾರದಲ್ಲಿ ರಾಜ್ಯಗಳಿಗೆ ಮೋಸಮಾಡುತ್ತಿದೆ ಎಂದು ದೇವೇಗೌಡರು ಕಿಡಿಕಾರಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss