Thursday, October 29, 2020
Thursday, October 29, 2020

Latest Posts

ಭಯೋತ್ಪಾದಕ ದಾಳಿಗೆ ತತ್ತರಿಸಿದ ಫ್ರಾನ್ಸ್ ಜನತೆಯ ದು:ಖದಲ್ಲಿ ಭಾರತ ಪಾಲುದಾರ: ಮೋದಿ

ಹೊಸದಿಲ್ಲಿ: ಫ್ರಾನ್ಸ್‌ನ ಚರ್ಚ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಪ್ರಧಾನಿ ಮೋದಿ ಖಂಡಿಸಿದ್ದು, ಜಾಗತಿಕ ಉಗ್ರವಾದದ ವಿರುದ್ಧ ಭಾರತ-ಫ್ರಾನ್ಸ್ ಜಂಟಿಯಾಗಿ ಹೋರಾಡಲಿವೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಇಂದು ನೈಸ್ ನಗರದಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯನ್ನು...

ಸ್ವಯಂ ನಿವೃತ್ತಿ ಪಡೆದ ವಾರ್ತಾ ಇಲಾಖೆ ಜಂಟಿ ನಿರ್ದೇಶಕ ಎ.ಆರ್. ಪ್ರಕಾಶ್

ಮೈಸೂರು : ವಾರ್ತ ಇಲಾಖೆ ಜಂಟಿ ನಿರ್ದೇಶಕರಾದ ಎ.ಆರ್. ಪ್ರಕಾಶ್ ಅವರು ಗುರುವಾರ ಸ್ವಯಂ ನಿವೃತ್ತಿ ಪಡೆದರು. ಅವರು ಹೊಸಪೇಟೆ, ಕಲಬುರಗಿ, ಮೈಸೂರು ಹಾಗೂ ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರ ಸ್ವಯಂ ನಿವೃತ್ತಿ...

ಚಿಂದಿ ಆಯುತ್ತಿದ್ದ ಬಡ ಹುಡುಗನ ಹೆಜ್ಜೆಯೀಗ ವೈದ್ಯಕೀಯ ರಂಗದೆಡೆಗೆ!

ಲಕ್ನೋ: ಪ್ರತಿಭೆಗೆ ಬಡತನವಿಲ್ಲ. ಮನಸ್ಸಿಟ್ಟು ,ಪ್ರಯತ್ನಪಟ್ಟು ಯಾವುದಾದರೂ ಗುರಿಯೆಡೆಗೆ ನಡೆದಾಗ ಯಶಸ್ಸು ಕಟ್ಟಿಟ್ಟ ಬುತ್ತಿ. ಇದಕ್ಕೆ ನೇರ ಸಾಕ್ಷಿ ಚಿಂದಿ ಆಯ್ದು ಬದುಕಿನ ಬಂಡಿ ಎಳೆಯುವ ಬಡ ಕುಟುಂಬದ ಹುಡುಗ ಅರವಿಂದ್ ಕುಮಾರ್. ಚಿಂದಿ...

ಕೇಂದ್ರ ಸರ್ಕಾರ ಮಂಡಿಸಿರುವ ಮಸೂದೆಗಳು ರೈತರಿಗೆ ಮಾರಕವಾಗಿಲ್ಲ: ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷೆ ಮಂಗಳ ಸೋಮಶೇಖರ್

ಮೈಸೂರು: ಕೇಂದ್ರ ಸರ್ಕಾರ ಲೋಕಸಭೆ ಅಧಿವೇಶನದಲ್ಲಿ ಮಂಡಿಸಿರುವ ಮಸೂದೆಗಳು ರೈತರಿಗೆ ಮಾರಕವಾಗಿಲ್ಲ,
ಬದಲಿಗೆ ಕೃಷಿ ಮತ್ತು ಕೃಷಿ ಕ್ಷೇತ್ರದ ಸುಧಾರಣೆಗೆ ಹೆಚ್ಚು ಆದ್ಯತೆಯನ್ನು ನೀಡಿದೆ ಎಂದು ಬಿಜೆಪಿ ಮೈಸೂರು ಗ್ರಾಮಾಂತರ
ಜಿಲ್ಲಾಧ್ಯಕ್ಷೆ ಮಂಗಳ ಸೋಮಶೇಖರ್ ತಿಳಿಸಿದರು. ಬುಧವಾರ ಮೈಸೂರಿನ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತಪರ ಕಾಯ್ದೆಯಿಂದ ರೈತರಿಗೆ ನಿಶ್ಚಿತ ಲಾಭ ಸಿಗಲಿದೆ, ರೈತರ ವ್ಯಾಪಾರಕ್ಕೂರಕ್ಷಣೆ ಸಿಗಲಿದೆ ಎಂದರು.
ರೈತರ ಕಲ್ಯಾಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ. ಅದು ದೇಶದ ಕೃಷಿ ಉತ್ಪನ್ನಕ್ಕಾಗಿ ಮಾರುಕಟ್ಟೆ ಸೃಷ್ಟಿಸುವುದು, ಕನಿಷ್ಠ ಬೆಂಬಲ ದರ ಹೆಚ್ಚಿಸುವುದಾಗಿದೆ.  ಕೊರೋನಾ ಬಿಕ್ಕಟ್ಟಿನ ವೇಳೆಯೂ ರೈತರ ಪರವಾಗಿ ಸರ್ಕಾರ ವಿಶೇಷ ಕ್ರಮಗಳನ್ನು ಕೈಗೊಂಡಿದೆ. ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ ಕಾಯ್ದೆ ಅನ್ವಯ ರೈತರಿಗೆ ಹಾಗೂ ವ್ಯಾಪಾರಿಗಳಿಗೆ ತಮಗಿಷ್ಟ ಬಂದ ಕಡೆ ಕೃಷಿ ಉತ್ಪನ್ನ ಮಾರಾಟ ಹಾಗೂ ಖರೀದಿ ಮಾಡುವ ಸ್ವಾತಂತ್ರ÷್ಯವನ್ನು ನೀಡಲಾಗಿದೆ. ಪರ್ಯಾಯ ವ್ಯಾಪಾರ ವ್ಯವಸ್ಥೆ ಮೂಲಕ ಬೆಳೆಗಳ ನ್ಯಾಯಯುತ ದರ ನಿಗದಿಪಡಿಸಲು ನೆರವು ನೀಡಲಾಗಿದೆ. ಕೃಷಿ ಉತ್ಪನ್ನಗಳ ಪಾರದರ್ಶಕ ತಡೆರಹಿತ ಅಂತರರಾಜ್ಯ ಹಾಗೂ ರಾಜ್ಯದೊಳಗಿನ ವ್ಯಾಪಾರಕ್ಕೆ ಉತ್ತೇಜನ ನೀಡಲಾಗಿದೆ. ಉತ್ಪನ್ನದ ಆನ್ ಲೈನ್ ವ್ಯಾಪಾರಕ್ಕೆ (ಇ-ಟ್ರೇಡಿಂಗ್) ಒತ್ತು ನೀಡಲು ಕಾನೂನಾತ್ಮಕ ಚೌಕಟ್ಟನ್ನು ಅಳವಡಿಸಲಾಗಿದೆ ಎಂದು ವಿವರಿಸಿದರು.
ರೈತರ (ಕಲ್ಯಾಣ ಮತ್ತು ರಕ್ಷಣೆ) ಬೆಲೆ ಭರವಸೆ ಮತ್ತು ಸೇವಾ ಒಪ್ಪಂದ ಮಸೂದೆ ಈ ಮೂಲಕ ಕೃಷಿ ಉದ್ಯಮ ಸಂಸ್ಥೆಗಳು, ಸಗಟು ವ್ಯಾಪಾರಿಗಳು, ರಫುö್ತದಾರರು, ಚಿಲ್ಲರೆ ವ್ಯಾಪಾರಿಗಳೊಂದಿಗೆ ವಹಿವಾಟು ನಡೆಸಲು ರೈತರಿಗೆ ಭದ್ರತೆ ಹಾಗೂ ಪ್ರೋತ್ಸಾಹ ನೀಡುವ ಕೃಷಿ ಒಪ್ಪಂದಗಳ ಕುರಿತು ರಾಷ್ಟಿಯ ಚೌಕಟ್ಟು ನಿರ್ಮಿಸುವ ಧ್ಯೇಯವನ್ನು ಹೊಂದಿದೆ. ನ್ಯಾಯಯುತ ದರ ಚೌಕಟ್ಟಿನೊಳಗೆ ಕೃಷಿ ಉತ್ಪನ್ನಗಳ ಮಾರಾಟ ಹಾಗೂ ಕೃಷಿ ಸೇವೆಗಳನ್ನು ಒದಗಿಸುವ ಗುರಿ ಹೊಂದಿದೆ ಎಂದರು.
ಮಸೂದೆಯಿಂದ ರೈತರಿಗೇನು ಲಾಭ; ಎರಡು ಮಸೂದೆಗಳು ದೇಶದ ಕೃಷಿ ವಲಯದಲ್ಲಿ ಕ್ರಾಂತಿ ತರಲಿವೆ. ಕೃಷಿ ವಲಯದಿಂದ ದೇಶಕ್ಕಿರುವ ನಿರೀಕ್ಷೆ ಹಾಗೂ ಅಗತ್ಯತೆ ಎರಡನ್ನೂ ಹೊಸ ಮಸೂದೆಗಳು ಪೂರೈಸಲಿವೆ. ಮಸೂದೆಯಿಂದ ಉತ್ತಮ ಬೆಳೆ ಬೆಳೆಯುವತ್ತ ರೈತರು ಪ್ರೇರಿತರಾಗುತ್ತಾರೆ. ಒಮ್ಮೆ ಹೆಚ್ಚುವರಿ ಇಳುವರಿ ಪಡೆದರೆ ರೈತರ ಆದಾಯವೂ ಸಹಜವಾಗಿ ಹೆಚ್ಚಲಿದೆ. ವಿವಿಧ ರಾಜ್ಯಗಳ ಕೃಷಿ ಉತ್ಪನ್ನ ಮಾರುಕಟ್ಟೆ ಕಾಯ್ದೆಗಳ ಅನ್ವಯ ನೋಂದಣಿ ಮಾಡಿಕೊಂಡಿರುವ ಮಾರುಕಟ್ಟೆಗಳಿಗೆ ಹೊರತಾಗಿಯೂ ರೈತರು ಉತ್ಪನ್ನಗಳನ್ನು ಮಾರಾಟ ಮಾಡುವ ಸೌಲಭ್ಯ ನೀಡಲಾಗಿದೆ ಎಂದು ವಿವರಿಸಿದರು.
ರೈತರಿಗೆ ಮೋಸವೆಸಗುತ್ತಿದ್ದ ಮಧ್ಯವರ್ತಿಗಳು, ಖರೀದಿದಾರರ ಪರವಾಗಿದ್ದ ಪಕ್ಷಗಳು ಈ ರೈತ ಪರ ಕಾಯಿದೆಯನ್ನು ವಿರೋಧಿಸುತ್ತಿವೆ ಕಿಡಿಕಾರಿದರು. ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ರಾಜೇoದ್ರ ಮಾತನಾಡಿ, ರೈತರ ಎಲ್ಲಾ ಕೃಷಿ ಭೂಮಿಯನ್ನು ಕಾರ್ಪೋರೇಟ್ ಸಂಸ್ಥೆಗಳು ಕಬಳಿಸುತ್ತವೆ ಎಂದು ವಿಪಕ್ಷದವರು ಮಾಡುತ್ತಿರುವ ಆರೋಪಗಳು ಸುಳ್ಳು. ಕೇಂದ್ರ ಸರ್ಕಾರದ ನೂತನ ಮಸೂದೆಯಿಂದ ವಿದ್ಯಾವಂತ ಯುವಕರು, ಉದ್ಯೋಗಿಗಳು, ಮುಂತಾದವರು, ಕೃಷಿ ಭೂಮಿಯನ್ನು ಖರೀದಿಸಿ, ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸಹಾಯಕವಾಗುತ್ತದೆ. ಅವರು ಮಾಡುವ ಆಧುನಿಕ ಕೃಷಿಯನ್ನು ನೋಡಿ, ರೈತರು ಕೂಡ ಅದನ್ನು
ಅನುಸರಿಸಲು ಸಹಾಯವಾಗುತ್ತದೆ ಎಂದರು.
ಗೋಷ್ಠಿಯಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಸುರೇಶ್ ಬಾಬು, ರೈತ ಮೋರ್ಚಾದ
ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ರಮೇಶ್, ಪ್ರಧಾನ ಕಾರ್ಯದರ್ಶಿ ಮಹೇಶ್, ವಕ್ತಾರ ವಸಂತ್‌ಕುಮಾರ್ ಉಪಸ್ಥಿತರಿದ್ದರು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Latest Posts

ಭಯೋತ್ಪಾದಕ ದಾಳಿಗೆ ತತ್ತರಿಸಿದ ಫ್ರಾನ್ಸ್ ಜನತೆಯ ದು:ಖದಲ್ಲಿ ಭಾರತ ಪಾಲುದಾರ: ಮೋದಿ

ಹೊಸದಿಲ್ಲಿ: ಫ್ರಾನ್ಸ್‌ನ ಚರ್ಚ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಪ್ರಧಾನಿ ಮೋದಿ ಖಂಡಿಸಿದ್ದು, ಜಾಗತಿಕ ಉಗ್ರವಾದದ ವಿರುದ್ಧ ಭಾರತ-ಫ್ರಾನ್ಸ್ ಜಂಟಿಯಾಗಿ ಹೋರಾಡಲಿವೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಇಂದು ನೈಸ್ ನಗರದಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯನ್ನು...

ಸ್ವಯಂ ನಿವೃತ್ತಿ ಪಡೆದ ವಾರ್ತಾ ಇಲಾಖೆ ಜಂಟಿ ನಿರ್ದೇಶಕ ಎ.ಆರ್. ಪ್ರಕಾಶ್

ಮೈಸೂರು : ವಾರ್ತ ಇಲಾಖೆ ಜಂಟಿ ನಿರ್ದೇಶಕರಾದ ಎ.ಆರ್. ಪ್ರಕಾಶ್ ಅವರು ಗುರುವಾರ ಸ್ವಯಂ ನಿವೃತ್ತಿ ಪಡೆದರು. ಅವರು ಹೊಸಪೇಟೆ, ಕಲಬುರಗಿ, ಮೈಸೂರು ಹಾಗೂ ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರ ಸ್ವಯಂ ನಿವೃತ್ತಿ...

ಚಿಂದಿ ಆಯುತ್ತಿದ್ದ ಬಡ ಹುಡುಗನ ಹೆಜ್ಜೆಯೀಗ ವೈದ್ಯಕೀಯ ರಂಗದೆಡೆಗೆ!

ಲಕ್ನೋ: ಪ್ರತಿಭೆಗೆ ಬಡತನವಿಲ್ಲ. ಮನಸ್ಸಿಟ್ಟು ,ಪ್ರಯತ್ನಪಟ್ಟು ಯಾವುದಾದರೂ ಗುರಿಯೆಡೆಗೆ ನಡೆದಾಗ ಯಶಸ್ಸು ಕಟ್ಟಿಟ್ಟ ಬುತ್ತಿ. ಇದಕ್ಕೆ ನೇರ ಸಾಕ್ಷಿ ಚಿಂದಿ ಆಯ್ದು ಬದುಕಿನ ಬಂಡಿ ಎಳೆಯುವ ಬಡ ಕುಟುಂಬದ ಹುಡುಗ ಅರವಿಂದ್ ಕುಮಾರ್. ಚಿಂದಿ...

ಉಡುಪಿ| ಕಾರ್ಖಾನೆಯಿಂದ ಗೇರು ಬೀಜ ಕಳವು ಮಾಡಿದ ಇಬ್ಬರು ಆರೋಪಿಗಳ ಬಂಧನ

ಉಡುಪಿ: ಬ್ರಹ್ಮಾವರ ಠಾಣಾ ವ್ಯಾಪ್ತಿಯಲ್ಲಿ ಗೇರುಬೀಜ ಕಾರ್ಖಾನೆಯಿಂದ ಗೇರು ಬೀಜ ಕಳವು ಮಾಡಿದ ಇಬ್ಬರು ಆರೋಪಿಗಳನ್ನು ಪೊಲೀಸರು ಎರಡೇ ದಿನಗಳಲ್ಲಿ ಬಂಧಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕೆಮ್ಮಿಂಜೆ ಗ್ರಾಮ ಮೊಟ್ಟೆತಡ್ಕ ನಿವಾಸಿ...

Don't Miss

ಭಯೋತ್ಪಾದಕ ದಾಳಿಗೆ ತತ್ತರಿಸಿದ ಫ್ರಾನ್ಸ್ ಜನತೆಯ ದು:ಖದಲ್ಲಿ ಭಾರತ ಪಾಲುದಾರ: ಮೋದಿ

ಹೊಸದಿಲ್ಲಿ: ಫ್ರಾನ್ಸ್‌ನ ಚರ್ಚ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಪ್ರಧಾನಿ ಮೋದಿ ಖಂಡಿಸಿದ್ದು, ಜಾಗತಿಕ ಉಗ್ರವಾದದ ವಿರುದ್ಧ ಭಾರತ-ಫ್ರಾನ್ಸ್ ಜಂಟಿಯಾಗಿ ಹೋರಾಡಲಿವೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಇಂದು ನೈಸ್ ನಗರದಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯನ್ನು...

ಸ್ವಯಂ ನಿವೃತ್ತಿ ಪಡೆದ ವಾರ್ತಾ ಇಲಾಖೆ ಜಂಟಿ ನಿರ್ದೇಶಕ ಎ.ಆರ್. ಪ್ರಕಾಶ್

ಮೈಸೂರು : ವಾರ್ತ ಇಲಾಖೆ ಜಂಟಿ ನಿರ್ದೇಶಕರಾದ ಎ.ಆರ್. ಪ್ರಕಾಶ್ ಅವರು ಗುರುವಾರ ಸ್ವಯಂ ನಿವೃತ್ತಿ ಪಡೆದರು. ಅವರು ಹೊಸಪೇಟೆ, ಕಲಬುರಗಿ, ಮೈಸೂರು ಹಾಗೂ ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರ ಸ್ವಯಂ ನಿವೃತ್ತಿ...

ಚಿಂದಿ ಆಯುತ್ತಿದ್ದ ಬಡ ಹುಡುಗನ ಹೆಜ್ಜೆಯೀಗ ವೈದ್ಯಕೀಯ ರಂಗದೆಡೆಗೆ!

ಲಕ್ನೋ: ಪ್ರತಿಭೆಗೆ ಬಡತನವಿಲ್ಲ. ಮನಸ್ಸಿಟ್ಟು ,ಪ್ರಯತ್ನಪಟ್ಟು ಯಾವುದಾದರೂ ಗುರಿಯೆಡೆಗೆ ನಡೆದಾಗ ಯಶಸ್ಸು ಕಟ್ಟಿಟ್ಟ ಬುತ್ತಿ. ಇದಕ್ಕೆ ನೇರ ಸಾಕ್ಷಿ ಚಿಂದಿ ಆಯ್ದು ಬದುಕಿನ ಬಂಡಿ ಎಳೆಯುವ ಬಡ ಕುಟುಂಬದ ಹುಡುಗ ಅರವಿಂದ್ ಕುಮಾರ್. ಚಿಂದಿ...
error: Content is protected !!