Thursday, June 30, 2022

Latest Posts

 ಕೇಂದ್ರ ಸರ್ಕಾರ ಸ್ಪಷ್ಟನೆ: ಆರೋಗ್ಯಸೇತು ಡಿಜಿಟಲ್ ಮಾಹಿತಿ ಸೋರಿಕೆಯಾಗಿಲ್ಲ

ಹೊಸದಿಲ್ಲಿ: ಆರೋಗ್ಯ ಸೇತು ಡಿಜಿಟಲ್ ಮಾಹಿತಿ ಸೋರಿಕೆಯಾಗಿಲ್ಲ ಎಂದು ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.

ಫ್ರಾನ್ಸ್ ನ  ಸೈಬರ್ ಸೆಕ್ಯುರಿಟಿ ಮುಖ್ಯಸ್ಥ ಆಂಡರ್‌ಸನ್ ಭಾರತದಲ್ಲಿ ಪ್ರಸ್ತುತ ಬಳಕೆಯಲ್ಲಿರುವ ಆರೋಗ್ಯ ಸೇತು ಆಪ್ ಮತ್ತು ಡಿಜಿಟಲ್ ಮಾಹಿತಿಗೆ ಸೋರಿಕೆಯ ಭೀತಿಯಿದೆ ಎಂದು ಎಚ್ಚರಿಸಿದ್ದರು. ಆದರೆ ಇದಕ್ಕೆ ಪ್ರತಿಯಾಗಿ ಕೇಂದ್ರ ಆರೋಗ್ಯ ಇಲಾಖೆ ಪ್ರತಿಕ್ರಿಯೆ ನೀಡಿದ್ದು, ಈ ದಿಶೆಯಲ್ಲಿ ಯಾವುದೇ ಮಾಹಿತಿ ಸೋರಿಕೆಯಾಗಿಲ್ಲ ಎಂದು ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ.

ಕೇಂದ್ರ ಸರ್ಕಾರದ ಸಂಪೂರ್ಣ ನಿಗಾ ಮತ್ತು ನಿರ್ವಹಣೆಯಲ್ಲಿ ಆರೋಗ್ಯಸೇತು ಆಪ್ ಕಾರ್ಯನಿರ್ವಹಿಸುತ್ತಿದ್ದು, ಇದನ್ನು ಈಗಾಗಲೇ ಬಳಸುತ್ತಿರುವ ದೇಶದ ಗ್ರಾಹಕರ‍್ಯಾರೂ ಆತಂತಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss